ಅತಿಶಯದ ಮಾತಲ್ಲ

ಅತಿಶಯದ ಮಾತಲ್ಲ ಯುಗಪುರುಷ ನಿನ್ನೊಳಿದೋ
ಭಾವ ನೈವೇದ್ಯಗಳ ಅರ್ಪಿಸುತಿಹೆ
ನಿನ್ನ ನಡೆಗಳ ಕಲಿಸು
ನಿನ್ನ ನುಡಿಗಳನುಲಿಸು
ಧನ್ಯ ಜೀವನಕಾಗಿ ಪ್ರಾರ್ಥಿಸುತಿಹೆ || ಪ ||

ಹಿಂದು ರಾಷ್ಟ್ರದ ಋಷಿಯ ದೃಷ್ಟಿ ಸಿಂಚಿಸಿತು
ರಾಷ್ಟ್ರಭಕ್ತಿಯ ಅಮೃತ ವೃಷ್ಟಿ
ದಾಸ್ಯಗಳ ಧಿಕ್ಕರಿಸಿ, ಸ್ವತ್ವಗಳ ವಿಸ್ತರಿಸಿ
ಸೂಸಿದೆ ಸನಾತನದ ಸೃಷ್ಟಿ
ದೊರೆತಿದೆ ಪುರಾತನದ ಪುಷ್ಟಿ || 1 ||

ಋತು ಚಕ್ರವುರುಳುತಿರೆ ಜೋಕೆ | ಕ್ಷಣ ಕ್ಷಣವು
ಫಲಿಸುತಿದೆ ಯುಗಯುಗದ ಹರಕೆ
ಹಿಂದುತ್ವ ಚೈತನ್ಯ | ರಾಷ್ಟ್ರದೇಹದಿ ನೆಲೆಸಿ
ಮೀಟುತಿದೆ ನಾಡಿನಾಡಿಗಳ
ದಾಟುತಿದೆ ನಾಡುನಾಡುಗಳ || 2 ||

ಸಂಘಟನ ಶಾಸ್ತ್ರಗಳ ರಚಿಸಿ | ಕುಶಲದಿಂ
ಸಮರಸವ ಬದುಕಿಗಳವಡಿಸಿ
ಭೇದ ಬುದ್ಧಿಯನಳಿಸಿ ಸ್ನೇಹವೃದ್ಧಿಯ ಗೊಳಿಸಿ
ತೋರು ನಿಜ ಮಾನವ್ಯ ಪಥವ
ಮುನ್ನಡೆಸು ಈ ಮನೋರಥವ || 3 ||

Leave a Reply

Your email address will not be published. Required fields are marked *

*

code