ನಾಡದೇವಿಯ ಆರಾಧನೆ

ನಾಡದೇವಿಯ ಆರಾಧನೆ, ಸುತ ಕೋಟಿ ಧನ್ಯತೆ ಅಭಿವಂದನೆ
ಮಾನಸ ಸರಸಿನ ಭಾವಕಮಲ, ಅರಳಿ ತಳೆದ ಪರಿಕಲ್ಪನೆ || ಪ ||

ಭಾಷೆ ಬೇರೆ, ವೇಷ ಬೇರೆ, ವೃತ್ತಿ ಬೇರೆ, ಪ್ರವೃತ್ತಿ ಬೇರೆ
ಅಂಗುಲಂಗುಲ ನೆಲದಾ ಮತಿಯ, ಕೃತಿ ಸಂಸ್ಕೃತಿಯ ಗತಿಯು ಬೇರೆ
ಉಸಿರಿನ ಪ್ರಾಣ ಗಾಳಿಯು ಒಂದೇ, ಹಸುರಿನ ಜೀವ ನೆಲ ಜಲ ಒಂದೇ
ಹರಿಯುವ ರಕ್ತದ ಕಣಕಣ ಒಂದೇ, ನಾಡ ದೇವಿಯ ಪೂಜೆಗೆ
ಸಮರಸ ಮಂತ್ರ ಸುಮಾರ್ಚನೆಯೊಂದೇ || 1 ||

ಅಳಿಸುವ ಅಸಮತೆ ಗಳಿಸುವ ಘನತೆ, ಬೆಳೆಸುತ ಜ್ಞಾನವಿಜ್ಞಾನವ ಬಳಸುತ
ನಾಡಿನ ನಿಧಿ, ನವ ಜಾಡಿನ ಕೇತನ, ಏರಲು ಸಿದ್ಧಿಯ ಶಿಖರೋತ್ತುಂಗನ
ಶಾಂತಿ ಸ್ನೇಹದ ಗಂಗೆಯ ವರಿಸಿ, ಒಲುಮೆಗೆ ನಲುಮೆಯ ಕವಚವ ತೊಡಿಸಿ
ನಾಡಿನ ಪ್ರಗತಿಗೆ ತನುಮನ ಜೋಡಿಸಿ, ನಾಡ ಪೂಜೆಗೆ ಕಲೆಯುವ
ಶ್ರದ್ಧಾಭಕ್ತಿ, ಸುಧಾರಸ ಹರಿಸಿ || 2 ||

Leave a Reply

Your email address will not be published. Required fields are marked *