ಹೃದಯವನರಳಿಸಿ ಜಗವನೆ ಬೆಳಗುವ ಸಂಕಲ್ಪಗಳವತರಿಸುತಿವೆ ಸಂಕ್ರಮಣಕೆ ತಹತಹಿಸುತಿವೆ || ಪ || ಶೋಧಿಸಿ ಸೋಲಿನ ಮೂಲಗಳ ಭೇದಿಸಿ ನೂರು ಸವಾಲುಗಳ ಛೇದಿಸಿ ಛಲವ ಪ್ರಚೋದಿಸಿ ಬಲವ ಸಾಧಿಸಿ ತರುವೆವು ಜಯದೊಲವ || 1 || ಸಮರಸತೆಯ ಚಿರ ಸಂದೇಶ ಬಾಳಿದ ಹಿರಿಯರ ಆದರ್ಶ ಮರಳಲಿ ಧರೆಗೆ ಕಾಲದ ಕರೆಗೆ ಕರಗಲಿ ಭ್ರಮೆಯ ಕರಾಳ ಹೊಗೆ || 2 || ಪುಟಿದೇಳಲಿ ನೆಲದಭಿಮಾನ ಪುಟಗೊಳ್ಳಲಿ ತಾರುಣ್ಯಧನ ರಕ್ತದ ಕಣಕಣ ಸುರಿಯೆ ಸಮರ್ಪಣ ಶಕ್ತಗೊಳಲಿ ಸುತ ಜಾಗರಣ || 3 […]
ಹೂ ಹರೆಯದ ಹೊಂಗನಸುಗಳೆ ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ ಕತ್ತಲೆಗಿದು ಸಾವು ಸುತ್ತಲು ಮುಂಜಾವು ಕರೆವಳುಷಾದೇವಿ ಮಂಗಳೆ ಸುಮಂಗಳೆ ಎಚ್ಚರಾಗಿ ಕನಸು ಕಂಗಳೆ || ಪ || ನೋವಿನಿರುಳು ನರಳಿ ನರಳಿ ಸರಿದಿದೆ ನಗುವು ನಲಿವಿಗಾಗಿ ಕದವ ತೆರೆದಿದೆ ಸೂತ್ರಬದ್ಧ ಕಾರ್ಯ ನಮ್ಮ ಎದುರಿದೆ ಲೋಕ ನಮ್ಮ ನಿಲುವಿಗಾಗಿ ಕಾದಿದೆ ಅಬಲ ಶಕ್ತಿಯಲ್ಲ, ಸಬಲರು ನಾವೆಲ್ಲಾ ಹಗಲಿಗರಳಬೇಕು ನೈದಿಲೆ || 1 || ಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲ […]
ಹುಡುಕುವ ಬಳ್ಳಿ ಹರಿದಾಡಿ ಬಂದು ಕಾಲ ತೊಡರಿದ್ಹಾಂಗ ಬಯಸಿದ ಮುಕುಟ ಬೆಳಗಾಗ ಬಂದು ಶಿರವನಡರಿದ್ಹಾಂಗ ಅಖಂಡ ತಾಯಿಯ ಕನಸು ಕಲ್ಪನೆಯ ಸಾಕಾರದ ಸುಗ್ಗಿ… ಬಂತೇ ತಾನಾಗಿ || ಪ || ಪಂಜಾಬದಿ ನೋಡ, ಮಂಜು ಮುಸುಕಿದ ಮೋಡ ಪಂಜಾಬದಿ ನೋಡ ಸಂಜೆಯಿಂದ ಮರುಸಂಜೆಯ ತನಕ ಕೊಲ್ಲತಾರ ಸುದ್ದಿ ಹಂಚಿಕೆ ಹಾಕಿ ದೇಶವ ಮುರಿಯಲು ಮಾಡತಾರ ಬುದ್ಧಿ ನಾಡಿಗೆ ತಂದರು ಕೇಡ, ಇದು ಪಾಕಿಯ ಕೈವಾಡ ಪಾಕಿ ಬರಲವರ ಕುಟ್ಟಿ ನೆತ್ತಿಯಾ ಮೆಟ್ಟಿ, ಗಡಿಯ ಹೊರಗಟ್ಟಿ ಈ ನಾಡ […]
ಹಿಂದುತ್ವದ ಜಯಘೋಷವ ಮೊಳಗಿಸಿ ನಾಡನು ಜಾಗೃತಗೊಳಿಸೋಣ ಗ್ರಾಮ ನಗರ ಗಿರಿ ಕಾನನದಲ್ಲಿ ಸಾತ್ವಿಕ ಬೆಳಕನು ಬೀರೋಣ ಪುನರಪಿ ದಿಗ್ದೆಸೆಯಲಿ ಪುರುಷಾರ್ಥದ ಕಲ್ಪನೆ ತೆರೆತೆರೆ ವ್ಯಾಪಿಸಲಿ ಪಲಾಯನಕಿನಿತೂ ಆಸ್ಪದವಿಲ್ಲ ಪಾರ್ಥಸಾರಥಿಯ ನಾಡಿನಲಿ || ಪ || ಭಾಷೆಯು ವೇಷವು ಎಲ್ಲವು ಭಿನ್ನ ಆದರು ಬದುಕು ಏಕರಸ ಸಾವಿರ ವರ್ಷದ ಸಮರ ವಿಜೇತ ಪಾವನ ಹಿಂದೂ ಜೀವರಸ ಸಂಘರ್ಷದ ಸಮರಾಂಗಣದಲ್ಲಿ ಮೂಡುತಲಿದೆ ನವ ವಿಶ್ವಾಸ ಗ್ರಾಮ ಗ್ರಾಮಕೂ ಪ್ರತಿಹೃದಯಕ್ಕೂ ಹಿಂದೂ ರಾಷ್ಟ್ರದ ಸಂದೇಶ || 1 || ಜಾತಿಮತಗಳ ಧನಿಕ […]
ಹಿಂದುತ್ವದ ಒಡಲಾಳದ ಬೆಂಕಿಯೆ ಜಡತೆಯ ತೊರೆದು ಸಿಡಿದೇಳು ಶತಶತಮಾನದ ಕಡು ಅಪಮಾನದ ಅವಶೇಷಂಗಳ ದಹಿಸೇಳು… ಮುಗಿಲನು ಚುಂಬಿಸಿ ಭುಗಿಲೇಳು ಸತ್ಯಮೇವ ಜಯತೇ… ಶೌರ್ಯಮೇವ ಜಯತೇ || ಪ || ನಿನ್ನಯ ಪೌರುಷಮಯ ಇತಿಹಾಸ ಸ್ಮರಿಸದೆ ಮೈಮರೆತಿದೆ ಈ ದೇಶ ಪ್ರಕಟಗೊಳ್ಳು ನೀ ಪ್ರಜ್ವಲಿಸುತಲಿ ಬೆಳಗಲಿ ಭುವಿ ತವ ಪ್ರಖರ ಪ್ರಕಾಶ || 1 || ತುಷ್ಟೀಕರಣವ ಪುಷ್ಟೀಕರಿಸುವ ತಾರತಮ್ಯಯುತ ಧೋರಣೆಯು ಕಪಟ ಮತಾಂತರ ಕುಟಿಲ ಅವಾಂತರ ರಾಷ್ಟಾಂತರಕಿದು ಪ್ರೇರಣೆಯು || 2 || ಸಂಘ ಶಕ್ತಿಯ ನೀ […]
ಹಿಂದುತ್ವದ ಅವತಾರ ಆಗಿದೆ ಇಲ್ಲಿ ಸಾಕಾರ ಹಿಂದುಗಳನ್ನು ಸಂಘಟಿಸಿ ಸಜ್ಜನ ಶಕ್ತಿಯನೆಚ್ಚರಿಸಿ ಅಧರ್ಮವನಳಿಸಿ ಧರ್ಮವನುಳಿಸಲು ಆಗಿದೆ ಸಾಕಾರ || ಪ || ಪ್ರಾಂತ ಭಾಷೆಗಳು ಹಲವಾರು ಜಾತಿಪಂಥಗಳು ನೂರಾರು ವಿವಿಧತೆಯಲ್ಲಿನ ಏಕತೆ ಸಾರುವ ಹಿಂದುಗಳಾಗಿ ಬಂದಿಹರು ಅಶಕ್ತ ಬಿಂದುಗಳು ಸೇರಿ ಮೆರೆಯುತಿರೆ ಶಕ್ತ ಸಿಂಧುವಿನ ರೂಪದಲಿ ಹಿಂದುತ್ವದ ಹೆದ್ದೆರೆಯಲ್ಲಿ || 1 || ಧರ್ಮವ ಬೆಳಗಿದ ಋಷಿ ಪರಂಪರೆ ರಾಷ್ಟ್ರ ರಕ್ಷಿಸಿದ ಸಂಘರ್ಷ ಹಿಂದುತ್ವದ ಜಯಭೇರಿಯ ಮೊಳಗಿದೆ ವಿವೇಕಾದಿಗಳ ಆದರ್ಶ ಜನಜನರೆದೆಯಲಿ ತುಂಬುತ ಸ್ಫೂರ್ತಿ ಧರ್ಮಜಾಗೃತಿಯು ಮೂಡುತಿದೆ […]
ಹಿಂದು ಹೆಸರಿನ ರಾಷ್ಟ್ರದೇಹದ ಉಸಿರೆ ನಮನ ಸನಾತನ ಓ ಮಹೋನ್ನತ ಚೇತನ || ಪ || ಹಿಂದುಸಾಗರ ಹಿಮದ ಆಗರ ನದಿಯ ನಾಗರ ಸಂಗಮ ಮರದ ಮರ್ಮರದಿಂದ ಹೊರಡಿಸು ಸ್ವಾಭಿಮಾನದ ಸರಿಗಮ ಹಿಂದು ಹಿಂದುವಿನೆದೆಯ ಸ್ಪಂದನ ನಿನ್ನ ಯಾನದ ಇಂಧನ || 1 || ಭಣಗುಡುವ ಜನಮನದ ಗಗನದಿ ತುಂಬಿ ಮೇಘದ […]
ಹಿಂದು ಭೂಮಿಯ ಸಿಂಧೂ ಜಲಧಿಯ ಕಣಕಣಗಳ ಚೈತನ್ಯವ ಹೀರಿ ಹಿಂದುವಿನೆದೆ ಎದೆ ಸ್ಪಂದನಗೊಳುತಿದೆ ಬಾಂಧವ್ಯದ ಮಜಲೇರಿ || ಪ || ಸರಿಸುತ ಕಾರ್ಗತ್ತಲ ದೂರ ಪಸರಿಸುತಾ ಜಾಗೃತಿ ಕದಿರ ಹಿಂದೂರವಿಯುದಯಿಸಿದನು ನೋಡ, ಹಿಂದಕೆ ಸರಿಯಿತು ಮೋಡ ಅಂಗಳದಲಿ ಮುಂಜಾವಿಗೆ ಸ್ವಾಗತ, ಭವಿಷ್ಯತ್ತಿಗೆ ಯಶಕೋರಿ || 1 || ಕುಗ್ಗಿದೆ ಸಂಕೋಚದ ಅವಧಿ ಹಿಗ್ಗಿದೆ ಸಂತೋಷದ ಉದಧಿ ಭಾರತಮಾತೆಗೆ ವೈಭವಕಾಲ ಬರುತಿದೆ ಸಂಶಯವಿಲ್ಲ ಗತಗೌರವವಾ ಮತ್ತೆ ಪಡೆಯುವಾ, ದೃಢನಿರ್ಧಾರವ ತೋರಿ || 2 || ಸೋಲಿನ ಕಾರಣಗಳ ಹುಡುಕಿ, […]
ಹಿಮಗಿರಿಯಲ್ಲಿನ ಉನ್ನತ ಶಿಖರ, ಕನ್ಯಾಕುವರಿಯ ಹಿಂದೂಸಾಗರ ನಡುವೆ ಬಾಳುವ ಕೋಟಿ ತರುಣರ ಮಾತೃಭೂಮಿ ಈ ಭೂಮಿ || ಪ || ಶಂಕರ ಮಧ್ವರ ಪವಿತ್ರಭೂಮಿ, ವಿದ್ಯಾರಣ್ಯರ ಕಾರ್ಯಕ್ಷೇತ್ರ ರಾಮದಾಸರ ಸೇವಾಮಂತ್ರ ವಿವೇಕಾನಂದರ ಈ ಭೂಮಿ || 1 || ಪ್ರತಾಪ ರಾಣಾ ತೋರಿದ ನಾಡಿದು, ಶಿವಾಜಿ ಶೂರ ಬೆಳಗಿದ ಬೀಡಿದು ಝಾನ್ಸಿರಾಣಿ ಕಾದಿದ ಜಾಡಿದು, ಕ್ಷಾತ್ರತೇಜದ ಈ ಭೂಮಿ || 2 || ಹೆಡಗೇವಾರರ ಸಂಘದ ದೀವಿಗೆ, ಚೇತನ ತುಂಬಿದೆ ಯುವಕರ ಬಾಳಿಗೆ ರಾಷ್ಟ್ರ ಕಟ್ಟುವ ಪೂಜ್ಯ […]
ಹಾಡುವೆವು ಹೊಸತೊಂದು ಹಾಡು ಕಟ್ಟುವೆವು ಹೊಸತೊಂದು ನಾಡು ಹಿಡಿದಿಹೆವು ಐಕ್ಯತೆಯ ಜಾಡು ನೀಗುವೆವು ತಾಯ್ನಾಡ ಪಾಡು || ಪ || ಮತಜಾತಿಗಳ ಸೀಮೆ ದಾಟಿ ನವಚೇತನದ ತಂತಿ ಮೀಟಿ ಸುತರಿರಲು ನಾವ್ ನೂರು ಕೋಟಿ ಭುವಿಯಲ್ಲಿ ನಮಗಾರು ಸಾಟಿ || 1 || ಪ್ರಾಚೀನ ಇತಿಹಾಸವೆಮದು ಭವಿತವ್ಯವತಿಭವ್ಯ ನಮದು ಬಿತ್ತರಿಸಿ ತಾಯ್ನಾಡ ಹಿರಿಮೆ ಗಳಿಸುವೆವು ಗತಮಾನ ಗರಿಮೆ || 2 || ಶತ್ರುಗಳ ಷಡ್ಯಂತ್ರ ಕುಟಿಲ ಪರಿಹಾರ ಸಂಕೀರ್ಣ ಜಟಿಲ ಎದೆಗುಂದದೆಯೆ ಮುಂದೆ ಸಾಗಿ ಹೋರಾಡಿ ಜಯಶೀಲರಾಗಿ […]