ಹರಸಿ ಧರೆಗವತರಿಸಿದೋ

ಹರಸಿ ಧರೆಗವತರಿಸಿದೋ ಸಿಡಿಲಾಳು ಮಾನವ ಕೇಶವ ಆಳು ಶ್ವಾಸವನಾಳು ಹೃದಯವ ಸ್ಪರ್ಶಿಸಿದೊ ಸರ್ವಸ್ವವ            || ಪ || ಕಲಿಬಲೋನ್ನತ ನೆಲದ ಯುವಕುಲವಿರಲು ದಾರಿಯೆ ತೋರದೆ ಧ್ಯೇಯದೇಗುಲ ತೆರೆದು ಬಾಗಿಲ ಕರೆದ ಕರದೊಳು ಹರಿದಿದೆ ನಿನ್ನ ಜೀವನದಮರ ಧಾರೆಯ ಅರುಣವಾರಿಯ ಹನಿಹನಿ ಯೋಧಹೃದಯದ ಧರೆಯ ಹರೆಯಕೆ ಪ್ರಖರತರ ಸಂಜೀವಿನಿ    || 1 || ಹೋಮಧೂಮದ ತಪೋಧಾಮದ ಯೋಗ ಯಾಗದ ತಪಸಿಗೆ ಸಾರ್ಥಕತೆ ತಂದೀವ ಮಂತ್ರವ ಕಥಿಸಿ ಕೃತಿಸಿದ ಕೀರ್ತಿಗೆ ಶತಕವಿದರೊಳು […]

Read More

ಹರಯದ ಗುಡುಗುಗಳು

ಹರಯದ ಗುಡುಗುಗಳು ಸಿಡಿಲ ತೆರೆಗಳು ನಾವು ಗುರಿಯೆಡೆಗೆ ಛಲದ ಅಡಿಯಿಡುವವರು ಎಚ್ಚೆತ್ತ ಮನಬಲದಿ ಸಾಧನೆಗೆ ತನು ಬಳಸಿ ಚೈತನ್ಯ ಪಥದಲಿ ದಿಟ್ಟ ನಡೆಯುವವರು || ಪ || ಬಾಳುವೆಯ ಕಣದಲ್ಲಿ ಗುಂಡಿಗೆಯ ಪಣವಿರಿಸಿ ಪಾಂಚಜನ್ಯವ ಸ್ಮರಿಸಿ ಸೆಣಸುವವರು ಸಿಂಧು ಸಲಿಲದ ಬಯಲು ತರುಣ ಹುರುಪಿನ ಹುಯಿಲು ವೈರಿ ಪೀಳಿಗೆ ಎಣಿಸಿ ಮಣಿಸುವವರು || 1 || ಅಂಜುವೆದೆ ನಮ್ಮದಲ್ಲ ಹಿಂಜರಿಕೆ ಬಯಸಿಲ್ಲ ತೃಣವಾಗಿಸಿ ಅಸುವ ಕಸುವಿರುವವರು ಕಂಡಿಹೆವು ಮರಣವನು ಮಸಣದೆಡೆ ಯಾತ್ರೆಯನು ಅಳಿವಿರದ ಗೆಲುವಲಿ ಮಸಕಾಗದವರು || […]

Read More

ಸ್ವಾತಂತ್ರ್ಯ ಸ್ವಾಮಿತ್ವ

ಸ್ವಾತಂತ್ರ್ಯ ಸ್ವಾಮಿತ್ವ ಸ್ವಬಲ ಸ್ವಾಧೀನತೆಯ ನಿಮ್ಮೆದೆಯ ಸತ್ವದುರಿ ಆರದಿರಲಿ ಅಪಮಾನ ಸಹಿಸದಿಹ ಅಭಿಮಾನ ನಿಮಗಿರಲಿ ನಿಮ್ಮೊಡನೆ ನಾವಿರಲಿ ಇಲ್ಲದಿರಲಿ || ಪ || ಭಗ್ನವಾಯಿತು ಕಾಯ ದಗ್ಧವಾಯಿತು ಹೃದಯ ನಗ್ನವಾಯಿತು ನಾಡು ನಮ್ಮೆದುರಿಗೆ ತೀರಿಲ್ಲ ಋಣದ ಹೊರೆ ಮುಂದೆ ನೀವಾದರೂ ಹಿಂದಿರುಗಿಸಿರಿ ಸಾಲ ಇತ್ತವರಿಗೆ || 1 || ನಮ್ಮೆದೆಯ ತುಂಬಿದ್ದ ನಿಮ್ಮುಸುರಿನಾಕಾಂಕ್ಷೆ ನಮ್ಮೊಡಲ ಸಂತಾನ ನಿಮಗೆ ಬರಲಿ ಸೇಡುಗಳ ಪೂರೈಕೆ ಆದರ್ಶದಾರೈಕೆ ಸತ್ಪುತ್ರ ಕರ್ತವ್ಯ ಮರೆಯದಿರಲಿ || 2 || ಸುಖದ ಶಯ್ಯೆಯ ತಂಪು ಮೋಹ […]

Read More

ಸ್ಮೃತಿಸಚೇತಕ ಧ್ವಜ ನಮೋ

ಸ್ಮೃತಿಸಚೇತಕ ಧ್ವಜ ನಮೋ ವ್ರತಿ ಸನಾತನ ಹೇ ವಿಭೋ ಅಗ್ನಿವರ್ಣದ ಜ್ಞಾನಕಿರಣದ ಜೀವಭೃಂಗಾರವೆ ನಮೋ || ಪ || ವಿಂಧ್ಯ ಹಿಮನಗ ನಿನ್ನ ಧರಿಸಲಿ ವಿಶ್ವವಂದ್ಯತೆ ಗಳಿಸಲಿ ನದಿ ಸಮುದ್ರದಿ ರೂಪ ಬಿಂಬಿಸಿ ಜಲವ ಪಾವನಗೊಳಿಸಲಿ ಕೀರ್ತಿವಾರಿಯು ಸ್ಫೂರ್ತಿಧಾರೆಯು ತುಂಬಿದಂಬುಧಿರೂಪ ಓ ಸತ್ವ ಸಂಗೀತವೇ ನಮೋ || 1 || ತ್ಯಾಗ ಶೌರ್ಯದಮೋಘ ಸಂಗಮ ನಾಡ ಸ್ಫೂರ್ತಿವಿಹಂಗಮ ರಾಷ್ಟ್ರದಕ್ಷಯ ಬಾಳ ಲಕ್ಷ್ಯದ ಭವ್ಯ ಸಾಕ್ಷಿ ಸಮಕ್ಷಮ ಧ್ಯೇಯದಾರಾಧನೆಯು ವೇದ್ಯವು ಹೃದಯಭೇರಿಯೆ ವಾದ್ಯವು ಜೀವನವೆ ನೈವೇದ್ಯವು || 2 […]

Read More

ಸಂಘದಂಗಳದಲ್ಲಿ ನಡೆದಿದೆ

ಸಂಘದಂಗಳದಲ್ಲಿ ನಡೆದಿದೆ ಧ್ಯೇಯ ಸಾಧನೆ ಅವಿರತ ಹಸಿವು ಕಾಣದು ತೃಷೆಯು ಕಾಡದು ಅಸುವು ರಾಷ್ಟ್ರ ಸಮರ್ಪಿತ || ಪ || ಕಸುವು ಕುಂದುವ ಮೊದಲೆ ಮೋಸದ ಮುಸುಕ ಸರಿಸುವ ಹಂಬಲ ವಸುಧೆಗೊದಗಿದ ನೋವ ನೀಗಲು ನಮಗೆ ದೇವರೆ ಬೆಂಬಲ || 1 || ಶುದ್ಧ ಸಾತ್ವಿಕ ತಪದ ಜತೆಗಿದೆ ಶಸ್ತ್ರ ಶಾಸ್ತ್ರ ಪ್ರಬುದ್ಧತೆ ಯುದ್ಧ ಸಿದ್ಧತೆ ಭರದಿ ನಡೆದಿದೆ ಬುದ್ಧವಚನಕು ಬದ್ಧತೆ || 2 || ಸದ್ದು ಗದ್ದಲವಿರದೆ ಸಭ್ಯತೆ ಹೃದಯ ಗದ್ದುಗೆ ಏರಿದೆ ವಿದ್ಯೆ ಬುದ್ಧಿಗೆ […]

Read More

ಸಂಘ ಸೂತ್ರದ್ಹಾಂಗ

ಸಂಘ ಸೂತ್ರದ್ಹಾಂಗ ಕೇಶವ ಮಾಧವ ನುಡಿದ್ಹಾಂಗ ಕೂಡ್ಯಾಡಿ ನಲಿಯೋಣ ಬಲಾಢ್ಯ ಭಾರತ ಕಟ್ಟೋಣ || ಪ || ಒಂದಕ್ಕೊಂದು ಕೂಡಿ ಪ್ರತಿದಿನ ಶಾಖೆಗೆ ಹೋಗೋಣ ಮಾತೃಭೂಮಿ ಸ್ಮರಿಸಿ ರಾಷ್ಟ್ರದ ಚಿಂತನೆ ಮಾಡೋಣ ಭಗವೆಯ ಅಡಿಯಲ್ಲಿ ಶಿರವನು ಬಾಗಿಸಿ ನಲಿಯೋಣ ಹಿಂದು ಹಿಂದು ಒಂದು ರಾಷ್ಟ್ರದ ಕಲ್ಪನೆ ತರಿಸೋಣ || 1 || ಕಬಡಿ ಕಬಡಿ ಆಡಿ ದೇಹವ ದಣಿಸುತ ನಲಿಯೋಣ ಯೋಗ ದಂಡ ಕಲಿತು ಶಕ್ತಿಯ ಸಂಚಯ ಮಾಡೋಣ ಬಡಬಡನೆ ಲಾಠಿ ತಿರುವಿ ದ್ವಂದ್ವದ ಆಟವ ಆಡೋಣ […]

Read More

ಸಂಘ ವಿಚಾರವ ಮನದಲಿ ತುಂಬಿ

ಸಂಘ ವಿಚಾರವ ಮನದಲಿ ತುಂಬಿ ಗ್ರಾಮ ಗ್ರಾಮಕೆ ತೆರಳೋಣ || ಪ || ಎಂದಿಗೂ ಮರೆಯದ ಸಂಘ ಕಾರ್ಯವ ಜೀವನ ವ್ರತ ಸ್ವೀಕರಿಸೋಣ ಹೃದಯದಿ ತುಂಬಿದ ಅಹಂಕಾರವ ಮನಸ್ಸಿನಿಂದ ತೆಗೆಯೋಣ || 1 || ದೃಢ ಸಿದ್ಧಾಂತದ ಸಾಧಾರ ಸಂಘ ಬುನಾದಿಯ ಕಟ್ಟೋಣ ವಿಪತ್ತುಗಳನೆದುರಿಸಲು ನಾವು ನಿರ್ಭಯರಾಗಿ ಶ್ರಮಿಸೋಣ || 2 || ಹೃದಯ ಸಾಗರದಂಚನು ದಾಟಿ ಸ್ವರ್ಗಿಯ ಇತಿಹಾಸವ ರಚಿಸೋಣ ತತ್ವ ಸುಧಾರಸ ಕುಂಭವ ಕುಡಿದು ಅಮೃತ ಪುಂಗವರಾಗೋಣ || 3 ||

Read More

ಸಂಘ ಜನಿಸಿತು ಕೇಶವನ ದಿವ್ಯದೃಷ್ಟಿಯಿಂದ

ಸಂಘ ಜನಿಸಿತು ಕೇಶವನ ದಿವ್ಯದೃಷ್ಟಿಯಿಂದ ನಾಡಿನೆಲ್ಲೆಡೆ ಹರಡಿತು ಭರದಿ ತಪಸಿನ ಛಲದಿಂದ ತಪಸಿನ ಫಲದಿಂದ ಅವನ ತ್ಯಾಗದ ಬಲದಿಂದ || ಪ || ಸಾವಿರ ವರುಷದ ದಾಸ್ಯಕೆ ಕಾರಣ ಐಕ್ಯತೆ ಇಲ್ಲದ ದೇಶ ರಾಷ್ಟ್ರದೆಲ್ಲೆಡೆ ಮೊಳಗಿದೆ ಇಂದು ಹಿಂದು ಎಂಬ ಘೋಷ ನಾವು ಹಿಂದು ಎಂಬ ಘೋಷ || 1 || ವೀರಪುರುಷರ ಬಾಳ ಕಥೆಗಳು ನೀಡಿವೆ ನಮಗೆ ಆಹ್ವಾನ ತಾಯ ಗೌರವವ ಎತ್ತಿ ಹಿಡಿಯಲು ಮರಣವೆ ಸನ್ಮಾನ ನಮಗೆ ಮರಣವೆ ಸನ್ಮಾನ || 2 || […]

Read More

ಸೊಂಟ ಕಟ್ಟಿ ಹೊಂಟೆವಿದೋ ಮುಂದಕೆ

ಸೊಂಟ ಕಟ್ಟಿ ಹೊಂಟೆವಿದೋ ಮುಂದಕೆ ತಂಟೆಯಳಿಸಿ ತಾಯ ಆನಂದಕೆ ಎಂಟುದಿಕ್ಕಿನಿಂದ ಬರುವ ಕಂಟಕಗಳ ಕಳೆದು ಎಂಟೆದೆಯ ಬಂಟರೆಲ್ಲ ಚಂದಕೆ || ಪ || ನಮ್ಮ ಮಾತೆ ನಮ್ಮ ಭರತಮಾತೆ ಸರ್ವಲೋಕವಂದಿತೆ ಜಗದ ಮನವ ಜಗದ ಜನರ ಮನವ ಸೆಳೆದ ಗೌರವಾನ್ವಿತೆ ಆದಿ ಅಂತ್ಯ ವಿರಹಿತೆ, ಸಾಧುರೂಪ ಸಂಹಿತೆ ಅವಳ ಹರಕೆ ಸ್ಫೂರ್ತಿ ನಮಗೆ ಕಾರ್ಯಕೇ || 2 || ತಡೆಯಬೇಡ ತಡೆದು ಹಿಡಿಯಬೇಡ ನಮ್ಮ ಎದೆ ಹಿಮಾಲಯ ಜಗ್ಗಲರಿಯ ತಾನು ಬಗ್ಗಲರಿಯ ನಮ್ಮ ಶಕ್ತಿ ಅಕ್ಷಯ ನಿನ್ನ […]

Read More

ಸೇವೆಯೆ ಜೀವನದ ಪರಮಧರ್ಮ

ಸೇವೆಯೆ ಜೀವನದ ಪರಮಧರ್ಮ ಜೀವಲೋಕದ ಹಿತದ ಆಧಾರಮರ್ಮ || ಪ || ಅದ್ವೈತ ಸಂಬಂಧ ದ್ವೈತದರಿವಿನೊಳಿಂದ ಅದ್ವಿತೀಯಾನಂದ ಸೇವೆಯಿಂದ ಸುದ್ದಿಗಳ ಸುಳಿವಿಲ್ಲ ಶಬ್ದದಾವುಟ ಸಲ್ಲ ಶುದ್ಧ ಸೇವಾಭಾವ ಇದು ಸಹಜ ನಿಜ ಕರ್ಮ || 1 || ಸಾಮಾಜಿಕರ ನಡುವೆ ಸಮರಸವನು ಎರೆದು ಸಾಂಮನಸ್ಯದ ಚಿಗುರು ಹೂವು ಪಡೆದು ಈ ಮಹಾ ಹಿಂದು ಜೀವನ ತರುವು ನಳನಳಿಸೆ ಸೇವಾವ್ರತವೆ ಪಥವು ಸಾರ್ಥಕವು ಜನ್ಮ || 1 || ನೀಗುವೆವು ಲೋಕಗಳ ಶೋಕಗಳ ಸಂಕುಲವ ನೀಡುವೆವು ಜನಮನಕೆ ಚೈತನ್ಯವ […]

Read More