ಹರಸಿ ಧರೆಗವತರಿಸಿದೋ

ಹರಸಿ ಧರೆಗವತರಿಸಿದೋ ಸಿಡಿಲಾಳು ಮಾನವ ಕೇಶವ
ಆಳು ಶ್ವಾಸವನಾಳು ಹೃದಯವ ಸ್ಪರ್ಶಿಸಿದೊ ಸರ್ವಸ್ವವ            || ಪ ||

ಕಲಿಬಲೋನ್ನತ ನೆಲದ ಯುವಕುಲವಿರಲು ದಾರಿಯೆ ತೋರದೆ
ಧ್ಯೇಯದೇಗುಲ ತೆರೆದು ಬಾಗಿಲ ಕರೆದ ಕರದೊಳು ಹರಿದಿದೆ
ನಿನ್ನ ಜೀವನದಮರ ಧಾರೆಯ ಅರುಣವಾರಿಯ ಹನಿಹನಿ
ಯೋಧಹೃದಯದ ಧರೆಯ ಹರೆಯಕೆ ಪ್ರಖರತರ ಸಂಜೀವಿನಿ    || 1 ||

ಹೋಮಧೂಮದ ತಪೋಧಾಮದ ಯೋಗ ಯಾಗದ ತಪಸಿಗೆ
ಸಾರ್ಥಕತೆ ತಂದೀವ ಮಂತ್ರವ ಕಥಿಸಿ ಕೃತಿಸಿದ ಕೀರ್ತಿಗೆ
ಶತಕವಿದರೊಳು ಭಾರತಕೆ ಸಂಘಟನ ಸೂತ್ರದ ರಕ್ಷೆಯ
ತೊಡಿಸಿದಾತನು ನೀನೆ ಪಾರ್ಥನು ನಿನ್ನ ನೆನಪಿಹುದಕ್ಷಯ        || 2 ||

ಜೀವನದಿಗಳ ತಡೆದು ಶಕ್ತಿಯ ಕಡೆದು ಕೂಡಿದ ಕೋವಿದ
ಜೀವನದ ಗುರಿ ಭವ್ಯ ಮಾಡಿದ ಕುಶಲ ಕರದ ಕಲಾವಿದ
ಪರಿಹರಿಸಲು ತೇದೆ ಶ್ರಮಿಸಿದೆ ತಾಯಿ ಭೂಮಿಯ ಕ್ಲೇಶವ
ಕರ್ಮ ಶೂರನೆ ಯಶವಿಶಾಲನೆ ಯುಗಪುರುಷ ಓ ಕೇಶವ           || 3 ||

ಜಗದ ಆದಿಯೊಳುದಿಸಿ ಉಳಿದಿಹ ಹಿಂದುದ್ರುಮದಾರೈಕೆಗೆ
ಯುಗದ ಆದಿಯ ದಿನವೆ ಜನಿಸಿದ ಜಗದರಿಕೆ ಹಾರೈಕೆಗೆ
ಪೀಠವಿರಿಸುತ ಹೃದಯವಗಣಿತ ನೀನು ಸೃಜಿಸಿದ ಬಯಕೆಗೆ
ಧಾವಿಸಿಹೆವತಿ ವೇಗ ತ್ಯಾಗದಿ ಧ್ಯೇಯಪಥ ಪೂರೈಕೆಗೆ                  || 4 ||

Leave a Reply

Your email address will not be published. Required fields are marked *