ಸಂಘ ವಿಚಾರವ ಮನದಲಿ ತುಂಬಿ

ಸಂಘ ವಿಚಾರವ ಮನದಲಿ ತುಂಬಿ
ಗ್ರಾಮ ಗ್ರಾಮಕೆ ತೆರಳೋಣ || ಪ ||

ಎಂದಿಗೂ ಮರೆಯದ ಸಂಘ ಕಾರ್ಯವ
ಜೀವನ ವ್ರತ ಸ್ವೀಕರಿಸೋಣ
ಹೃದಯದಿ ತುಂಬಿದ ಅಹಂಕಾರವ
ಮನಸ್ಸಿನಿಂದ ತೆಗೆಯೋಣ || 1 ||

ದೃಢ ಸಿದ್ಧಾಂತದ ಸಾಧಾರ
ಸಂಘ ಬುನಾದಿಯ ಕಟ್ಟೋಣ
ವಿಪತ್ತುಗಳನೆದುರಿಸಲು ನಾವು
ನಿರ್ಭಯರಾಗಿ ಶ್ರಮಿಸೋಣ || 2 ||

ಹೃದಯ ಸಾಗರದಂಚನು ದಾಟಿ
ಸ್ವರ್ಗಿಯ ಇತಿಹಾಸವ ರಚಿಸೋಣ
ತತ್ವ ಸುಧಾರಸ ಕುಂಭವ ಕುಡಿದು
ಅಮೃತ ಪುಂಗವರಾಗೋಣ || 3 ||

Leave a Reply

Your email address will not be published. Required fields are marked *

*

code