ಸುರನದಿಯನು ಧರೆಗಿಳಿಸಿದ

ಸುರನದಿಯನು ಧರೆಗಿಳಿಸಿದ ಧೀರನ ವಾರಸುದಾರರು ನಾವು ಸೋಲನೆ ಗೆಲುವಿನ ಸಾಧನಗೊಳಿಸುವ ಸಾಹಸಗಾರರು ನಾವು ಭಾರತವೀರರು ನಾವು… ನವಭಾರತ ವೀರರು ನಾವು || ಪ || ಅಡಿಗಡಿಗೆದುರಾಗಿಹ ಅಡೆತಡೆಗಳ ಅಡಿಯಿಂದಲೆ ಕಿತ್ತೆಸೆಯುವೆವು ನಾಡಿನ ಗಡಿಗೌರವ ರಕ್ಷಣೆಗೆ ಪ್ರಾಣವನೇ ಮುಡಿಪಿರಿಸುವೆವು || 1 || ಸ್ವಂತದ ಚಿಂತನೆಗಳನು ಬದಿಗಿರಿಸಿ ರಾಷ್ಟ್ರದ ಚಿಂತನೆ ಮಾಡುವೆವು ಕಠಿಣ ಸವಾಲುಗಳನು ಸ್ವೀಕರಿಸಿ ದೇಶದ ಹಿತ ಕಾಪಾಡುವೆವು || 2 || ನಮ್ಮಯ ಜನರೇ ಸುಮ್ಮನೆ ನಿಂದಿಸಿ ಹುಸಿ ಅಪವಾದವ ಹೊರಿಸಿರಲು ಅಗ್ನಿಪರೀಕ್ಷೆಗೆ ಒಳಗಾಗಿಹೆವು ಮಿಥ್ಯೆಗಳಿಂದಲಿ […]

Read More

ಸುತರೆದೆಯಾಳದಿ ಸ್ಪಂದನವೇಳಲಿ

ಸುತರೆದೆಯಾಳದಿ ಸ್ಪಂದನವೇಳಲಿ ಏಳಲಿ ಪ್ರತಿ ಭಾರತಪ್ರೇಮಿ ಸೀಮಾ ವಲಯದಿ ರಕ್ಷಿತವಾಗಲಿ ಅಂಗುಲ ಅಂಗುಲವೀ ಭೂಮಿ                         || ಪ || ಸಹ್ಯಾದ್ರಿಯ ಗಿರಿ ಕಂದರ ಕಾನನ, ಹಿಮವತ್ಪರ್ವತದುನ್ನತ ಸ್ಥಾನ ಗಂಗಾಭಗಿನಿಯ ಸಿಂಧೂ ಜಲಧಿಯ, ಸಂಗಮ ಹಿಂದು ಮಹೋದಧಿಗಾನ ಹಾರೈಸಲಿ ಹರಸಲಿ ದಿಗ್ವಿಜಯಕೆ, ಜನಮನವಿಂದಾಗಲಿ ರಣಗಾಮಿ                     || 1 || ಬಾಹುದ್ವಯಕೇರಲಿ […]

Read More

ಸಿಂಹನೊಡನಾಡುತ್ತ

ಸಿಂಹನೊಡನಾಡುತ್ತ ಹಲ್ಲುಗಳನೆಣಿಸಿದವ ಹಾಲ್ಗಲ್ಲ ಹಸುಳೆ ಇವ ನಮ್ಮ ಭರತ ಬಲ್ಲೆಯಾ ಕಿರಾತ ಅವನ ಛಲಬಲಭರಿತ ಒಂದೊಂದು ಜೀವವೂ ಭರತ ಸಹಜಾತ || ಪ || ಹೊಯ್ ಎನಲು ಹುಲಿ ಹೊಯ್ದ ಸಳ ನಮ್ಮ ನಾಯಕ ಅರಿಯೆಯಾ ಮಂದಮತಿ ಖಳನಾಯಕ ತಾತ್ವಿಕರ ಸಾತ್ವಿಕರ ದಳ ನಮ್ಮದಾಗಿರಲು ಸಲ್ಲದಿರು ಸ್ನೇಹದಲಿ ತುಡುಕಾಯಕ || 1 || ಹೂ ಹಸಿರು ಎಲೆ ಚಿಗುರು ಹೊದರು ಹೊಮ್ಮುವ ವನದಿ ಒಂದು ವಿಷ ಜಂತುವಿಗೆ ಹೆಸರೇನನಿಡಲಿ? ಯಾವ ಶಾಪದ ರೂಪವಿಂದು ಕುಣಿದೆದ್ದಿಹುದು ನಮ್ಮದೊಂದೊಂದುಗುರು ಪರಶುರಾಮನ […]

Read More

ಸಿಡಿಲೆರಗಿದರೂ ಬಂದೊದಗಿದರೂ

ಸಿಡಿಲೆರಗಿದರೂ ಬಂದೊದಗಿದರೂ ಕಡು ಭೀಕರ ಅಗ್ನಿ ಪರೀಕ್ಷೆ ಸಾಸಿರ ವಿಜಯದ ಭುಜಕೀರ್ತಿಯ ಜೊತೆ ಮನತೊಡುವುದೇ ಸೈ ಮರುದೀಕ್ಷೆ || ಪ || ನೆಲೆದೆದೆಯಾಳದ ಪ್ರಬಲ ಪ್ರವಾಹದ ಬುಗ್ಗೆಯಿದೋ ರಮ್ಯ ಅದಮ್ಯ ದೌಷ್ಟ್ಯಕೆ ದಮನಕೆ ಕುಗ್ಗದು ಚೇತನ, ಮನದೆಲ್ಲೆಯು ಕೋವಿಗಗಮ್ಯ || 1 || ಹನಿನೆತ್ತರು ಬಿದ್ದೆಡೆ ಹತ್ತಾಗುತ ಸತ್ತೆಡೆಸಾವಿರವಾಗುತಲಿ ತನುವೆತ್ತುವೆವೊ ತಲೆಯೆತ್ತುವೆವೊ ಮಣ್ಣಿನೊಳೆ ಹೊನ್ನಾಗುತಲಿ || 2 || ತಕ್ಷಕ ದಂಶಕೆ ಮಡಿದಶ್ವತ್ಥದ ಹಿಡಿಬೂದಿಯನಭಿಮಂತ್ರಿಸುತ ತಕ್ಷಣ ವೃಕ್ಷವ ಚಿಗುರಿಸುವುದೆ ಸೈ, ಅಶ್ವಿನಿಯರನಾಮಂತ್ರಿಸುತ || 3 ||

Read More

ಸಾಹಸದಿತಿಹಾಸವ ಬರೆಯೋಣ

ಸಾಹಸದಿತಿಹಾಸವ ಬರೆಯೋಣ ಹೊಸಬಾಳಿನ ಹಾಳೆಯ ತೆರೆಯೋಣ || ಪ || ಭಾರತಮಾತೆಯ ಕುವರ ಕಿಶೋರರು ಬಂದು ಸೇರಿಹೆವು ಒಂದಾಗಿ ದೇಶ ಧರ್ಮಗಳ ಘನತೆಯ ಸಾರಲು ದುಡಿವೆವು ನುಡಿವೆವು ಒಂದಾಗಿ ಓ ಹಗಲುಗಳೇ, ಬಿಳಿ ಮುಗಿಲುಗಳೇ, ಸುಳಿಗಾಳಿಯ ಅಲೆಗಳೇ ಹರಸಿ ಬಂಧುತ್ವದ ಧ್ಯೇಯಾದರ್ಶಗಳೇ ಅಂತರಂಗವನು ಆವರಿಸಿ           || 1 || ಧೈರ್ಯದ ಸ್ಥೈರ್ಯದ ಓ ಮೇರುಗಳೇ ಬೆಳೆಯಿರಿ ಭೀರುತೆಯನ್ನಳಿಸಿ ಸ್ನೇಹ ಸಲಿಲಗಳೇ ಜ್ಞಾನ ಸ್ರೋತಗಳೇ, ನಾಡಿ ನಾಡಿಯಲಿ ಸಂಚರಿಸಿ ನಾಳೆ ನಾಳೆಗಳು ಕಳೆದರು […]

Read More

ಸಾಸಿರ ಪದಯುಗ ಸಾಸಿರನೇತ್ರ

ಸಾಸಿರ ಪದಯುಗ ಸಾಸಿರನೇತ್ರ ಸಾಸಿರ ಸಾಸಿರ ಶೀರ್ಷಾ ಸಾಕ್ಷಾತ್ಕರಿಸಿದೆ ಅಭಂಗ ಏಕತೆ ಸಮರಸತೆಯ ಸಂದೇಶ ವ್ಯಾಪಿಸಿ ವಿಶ್ವದ ತಲೆ ಎತ್ತಿಹ ಹೇ ಅಸೀಮ ಸಮಾಜ ಪುರುಷ || ಪ || ಎಲ್ಲಿದೆ ತರತಮ ಜಾತಿನೀತಿ ಕುಲ ಎಲ್ಲಿದೆ ಎಲ್ಲಿದೆ ಭಿನ್ನಮತ ಹಿಂದುತ್ವದಿ ನಿಜ ಬಾಂಧವರೆನಿಸಲು ಇಲ್ಲಿದೆ ಇಲ್ಲಿದೆ ಕರ್ಮಪಥ || 1 || ಸೃಷ್ಟಿಗೆ ಗೋಚರ ನವ ಮನ್ವಂತರ ಸೃಷ್ಟಿ ಸಿದ್ದಿಯ ಮಾರ್ಗಕೆ ಉದಯಿಸಿತೋ ಶಿವಶಕ್ತಿ ಸಕಲ ಜೀವಕುಲ ಸುಖವ ಕಾಣಲಿದೆ ಪ್ರಕೃತಿಗೆ ಮರು ವಿಶ್ವಾಸ || […]

Read More

ಸರ್ವ ಸುಂದರ ನಾಡು

ಸರ್ವ ಸುಂದರ ನಾಡು ವೀರವರ್ಯರ ಬೀಡು ಕರ್ಮಭೂಮಿಯ ನೋಡು ಭಾರತದೊಳಿಲ್ಲಿ || ಪ || ಸಾಗರದ ಅಂಚಿನಲಿ ಹಿಮಗಿರಿಯ ಪಾದದಲಿ ದಿವ್ಯ ಭೂಭಾಗವಿದು ಮೆರೆಯುತಿಹುದಿಲ್ಲಿ || 1 || ಪುಣ್ಯನದಿಗಳ ತಟದಿ ಭವ್ಯದೇಗುಲ ನೆಲೆಸಿ ಸರ್ವಶಕ್ತಿಯ ರೂಪ ಬೆಳಗುತಿಹುದಿಲ್ಲಿ || 2 || ವೇದ ಘೋಷವ ಗೈವ ಋಷಿವರ್ಯರಾಶ್ರಮವು ಸಾಧು ಸಂತರ ಬಾಳ್ವೆ ಸಾಗುತಿಹುದಿಲ್ಲಿ || 3 || ಸೌಜನ್ಯದಾ ಪುಷ್ಪ ಘಮಘಮಿಸಿ ಸೂಸಿರಲು ಸೌಹಾರ್ದದಾ ಎಲರು ಬೀಸುತಿಹುದಿಲ್ಲಿ || 4 || ವಿಶ್ವಶಾಂತಿಯ ನಾದ ಜಗಕೆಲ್ಲ […]

Read More

ಸಮಾಜಪುರುಷನ ಅಭಂಗ ಪೂಜೆಗೆ

ಸಮಾಜಪುರುಷನ ಅಭಂಗ ಪೂಜೆಗೆ ಅಸಂಖ್ಯ ಕಮಲಗಳರಳುತಿವೆ ಅಸೀಮ ಸ್ಫೂರ್ತಿಯ ಸಶಕ್ತ ಯುವಕರ ಪ್ರಬುದ್ಧ ಹೃದಯಗಳರಳುತಿವೆ || ಪ || ಪ್ರಭಾತ ಭಾಸ್ಕರ ಮುದದಿಂದುದಿಸುತ ಪೂರ್ಣಾಕಾರದಿ ಬರುತಿಹನು ನವರಾಗದ ನವಗಾನದ ನವೀನ ಸಂದೇಶವನದೊ ತರುತಿಹನು ಅನಂತ ಪ್ರೇರಣೆ ದಿಗಂತ ತುಂಬುತ ಸಜೀವ ತಳೆಯುತಲಿದೆ ನಾಡು ಸನ್ಮಂಗಳ ಜಯಗಾನವ ಪಾಡುವ ರಣಕಹಳೆಗಳೆದ್ದಿವೆ ನೋಡು || 1 || ರಾಷ್ಟ್ರದ ದೈವಾರಾಧನೆ ಬಂದಿದೆ ಬೆಂಕಿಯ ಕೊಡು ನಿಜ ಜೀವನಕೆ ಪ್ರಜ್ವಲಿಸಲಿ ಯಜ್ಞದ ಜ್ವಾಲಾಪ್ರಭೆ ಧುಮುಕೊಮ್ಮೆಗೆ ಸಮರಾಂಗಣಕೆ ಈ ಜೀವನವಾಗಲಿ ಆಜ್ಯಾಹುತಿ ಭೂರಜಕಾಗಲಿ […]

Read More

ಸಮರಸ ಭಾವದ ಸರಿಗಮ ಸ್ವರದಲಿ

ಸಮರಸ ಭಾವದ ಸರಿಗಮ ಸ್ವರದಲಿ ಹೊಸ ಹಾಡೊಂದನು ಹಾಡೋಣ ತರತಮವಿಲ್ಲದ ಸರಿಸಮ ಸೂತ್ರದಿ ಹೊಸ ನಾಡೊಂದನು ಕಟ್ಟೋಣ || ಪ || ಕುಡಿಯುವ ಜಲ ಉಸಿರಾಡುವ ಗಾಳಿ ನಡೆದಾಡುವ ನೆಲ ನಮಗೊಂದೇ ನಮ್ಮ ಶರೀರದ ಕಣಕಣಗಳಲಿ ಹರಿಯುವ ನೆತ್ತರು ತಾನೊಂದೇ || 1 || ಜಾತಿ ಭೇಧಗಳ ಮೇಲುಕೀಳುಗಳ ಬೇರು ಸಹಿತ ಕಿತ್ತೆಸೆಯೋಣ ಬಂಧುತ್ವದ ಭಾವೈಕ್ಯದ ನಂಟಲಿ ಹೃದಯ ಹೃದಯಗಳ ಬೆಸೆಯೋಣ || 2 || ಸೋಲು ಗೆಲುವುಗಳು ನೋವು ನಲಿವುಗಳು ಬದಲಿಸದಿರಲಿ ಬದ್ಧತೆಯ ರೋಷ ದ್ವೇಷಗಳ […]

Read More

ಸದ್ವಿಚಾರ ಧಾರೆಯಿಂದ ಚಿಮ್ಮಲಿ ಸ್ಫೂರ್ತಿ

ಸದ್ವಿಚಾರ ಧಾರೆಯಿಂದ ಚಿಮ್ಮಲಿ ಸ್ಫೂರ್ತಿ ನವೋತ್ಸಾಹದಿಂದ ಹೊರಗೆ ಹೊಮ್ಮಲಿ ಶಕ್ತಿ || ಪ || ಭವ್ಯ ರಾಷ್ಟ್ರಗುಡಿಯ ಶಿಲ್ಪಕಾರರು ನಾವು ದಿವ್ಯ ಪರಂಪರೆಯ ನವಕುಮಾರರು ನಾವು ನವ್ಯರು ನಾವು, ನವೋನವ್ಯರು ನಾವು ನಾವೆ ಇರಲು ತಾಯಿಗಿನ್ನು ಎಲ್ಲಿಯ ನೋವು? ಇನ್ನು ಎಲ್ಲಿಯ ನೋವು || 1 || ಪಾದಘಾತದಿಂದ ಅರಿಯ ತೊತ್ತಳತುಳಿದು ಬಾಹು ಬೆಳೆಸಿ ಭೂಮಿ ಬಾನಿನೆತ್ತರ ಬೆಳೆದು ಅರಳಿ ನಗುವೆವು, ಸಿರಿಯ ಮರಳಿ ತರುವೆವು ಅಳಿದ ಪಿತರ ಆತ್ಮತೃಪ್ತಿಗೊಳಿಸಿ ಮೆರೆವೆವು ತೃಪ್ತಿಗೊಳಿಸಿ ಮೆರೆವೆವು || 2 […]

Read More