ಸಿಂಹನೊಡನಾಡುತ್ತ

ಸಿಂಹನೊಡನಾಡುತ್ತ ಹಲ್ಲುಗಳನೆಣಿಸಿದವ
ಹಾಲ್ಗಲ್ಲ ಹಸುಳೆ ಇವ ನಮ್ಮ ಭರತ
ಬಲ್ಲೆಯಾ ಕಿರಾತ ಅವನ ಛಲಬಲಭರಿತ
ಒಂದೊಂದು ಜೀವವೂ ಭರತ ಸಹಜಾತ || ಪ ||

ಹೊಯ್ ಎನಲು ಹುಲಿ ಹೊಯ್ದ ಸಳ ನಮ್ಮ ನಾಯಕ
ಅರಿಯೆಯಾ ಮಂದಮತಿ ಖಳನಾಯಕ
ತಾತ್ವಿಕರ ಸಾತ್ವಿಕರ ದಳ ನಮ್ಮದಾಗಿರಲು
ಸಲ್ಲದಿರು ಸ್ನೇಹದಲಿ ತುಡುಕಾಯಕ || 1 ||

ಹೂ ಹಸಿರು ಎಲೆ ಚಿಗುರು ಹೊದರು ಹೊಮ್ಮುವ ವನದಿ
ಒಂದು ವಿಷ ಜಂತುವಿಗೆ ಹೆಸರೇನನಿಡಲಿ?
ಯಾವ ಶಾಪದ ರೂಪವಿಂದು ಕುಣಿದೆದ್ದಿಹುದು
ನಮ್ಮದೊಂದೊಂದುಗುರು ಪರಶುರಾಮನ ಕೊಡಲಿ
ಪರಶುರಾಮನ ಕೊಡಲಿ || 2 ||

Leave a Reply

Your email address will not be published. Required fields are marked *