ಸಮರಸ ಭಾವದ ಸರಿಗಮ ಸ್ವರದಲಿ

ಸಮರಸ ಭಾವದ ಸರಿಗಮ ಸ್ವರದಲಿ
ಹೊಸ ಹಾಡೊಂದನು ಹಾಡೋಣ
ತರತಮವಿಲ್ಲದ ಸರಿಸಮ ಸೂತ್ರದಿ
ಹೊಸ ನಾಡೊಂದನು ಕಟ್ಟೋಣ || ಪ ||

ಕುಡಿಯುವ ಜಲ ಉಸಿರಾಡುವ ಗಾಳಿ
ನಡೆದಾಡುವ ನೆಲ ನಮಗೊಂದೇ
ನಮ್ಮ ಶರೀರದ ಕಣಕಣಗಳಲಿ
ಹರಿಯುವ ನೆತ್ತರು ತಾನೊಂದೇ || 1 ||

ಜಾತಿ ಭೇಧಗಳ ಮೇಲುಕೀಳುಗಳ
ಬೇರು ಸಹಿತ ಕಿತ್ತೆಸೆಯೋಣ
ಬಂಧುತ್ವದ ಭಾವೈಕ್ಯದ ನಂಟಲಿ
ಹೃದಯ ಹೃದಯಗಳ ಬೆಸೆಯೋಣ || 2 ||

ಸೋಲು ಗೆಲುವುಗಳು ನೋವು ನಲಿವುಗಳು
ಬದಲಿಸದಿರಲಿ ಬದ್ಧತೆಯ
ರೋಷ ದ್ವೇಷಗಳ ಕಿಡಿಸುಡದಿರಲಿ
ನವನಿರ್ಮಾಣದ ಸಿದ್ಧತೆಯ || 3 ||

ಅಂಜಿಕೆ ಅಸಹನೆ ಅಸ್ಪೃಶ್ಯತೆಗೆ
ಅಂತ್ಯ ವಿದಾಯವ ಸಾರೋಣ
ಸಾಮರಸ್ಯದ ಸಿರಿ ಸಂದೇಶವ
ನಾಡಿನೊಳೆಲ್ಲೆಡೆ ಬೀರೋಣ || 4 ||

Leave a Reply

Your email address will not be published. Required fields are marked *

*

code