ಸಂಘ ಜನಿಸಿತು ಕೇಶವನ ದಿವ್ಯದೃಷ್ಟಿಯಿಂದ

ಸಂಘ ಜನಿಸಿತು ಕೇಶವನ ದಿವ್ಯದೃಷ್ಟಿಯಿಂದ
ನಾಡಿನೆಲ್ಲೆಡೆ ಹರಡಿತು ಭರದಿ ತಪಸಿನ ಛಲದಿಂದ
ತಪಸಿನ ಫಲದಿಂದ ಅವನ ತ್ಯಾಗದ ಬಲದಿಂದ || ಪ ||

ಸಾವಿರ ವರುಷದ ದಾಸ್ಯಕೆ ಕಾರಣ ಐಕ್ಯತೆ ಇಲ್ಲದ ದೇಶ
ರಾಷ್ಟ್ರದೆಲ್ಲೆಡೆ ಮೊಳಗಿದೆ ಇಂದು ಹಿಂದು ಎಂಬ ಘೋಷ
ನಾವು ಹಿಂದು ಎಂಬ ಘೋಷ || 1 ||

ವೀರಪುರುಷರ ಬಾಳ ಕಥೆಗಳು ನೀಡಿವೆ ನಮಗೆ ಆಹ್ವಾನ
ತಾಯ ಗೌರವವ ಎತ್ತಿ ಹಿಡಿಯಲು ಮರಣವೆ ಸನ್ಮಾನ
ನಮಗೆ ಮರಣವೆ ಸನ್ಮಾನ || 2 ||

ಸಂಘದ ಕಾರ್ಯದ ಸೂರ್ಯನ ಬೆಳಕಲಿ ಬೆಳಗಿದೆ ವಿಜಯದ ಹಾದಿ
ಭರತಮಾತೆಯೆ ಎಲ್ಲರ ತಾಯಿ ಎಂದು ಜಗಕೆ ಸಾರಿ
ಇಂದು ಜಗಕೆ ದಾರಿ ತೋರಿ || 3 ||

Leave a Reply

Your email address will not be published. Required fields are marked *

*

code