ಸಂಘದಂಗಳದಲ್ಲಿ ನಡೆದಿದೆ
ಧ್ಯೇಯ ಸಾಧನೆ ಅವಿರತ
ಹಸಿವು ಕಾಣದು ತೃಷೆಯು ಕಾಡದು
ಅಸುವು ರಾಷ್ಟ್ರ ಸಮರ್ಪಿತ || ಪ ||
ಕಸುವು ಕುಂದುವ ಮೊದಲೆ ಮೋಸದ
ಮುಸುಕ ಸರಿಸುವ ಹಂಬಲ
ವಸುಧೆಗೊದಗಿದ ನೋವ ನೀಗಲು
ನಮಗೆ ದೇವರೆ ಬೆಂಬಲ || 1 ||
ಶುದ್ಧ ಸಾತ್ವಿಕ ತಪದ ಜತೆಗಿದೆ
ಶಸ್ತ್ರ ಶಾಸ್ತ್ರ ಪ್ರಬುದ್ಧತೆ
ಯುದ್ಧ ಸಿದ್ಧತೆ ಭರದಿ ನಡೆದಿದೆ
ಬುದ್ಧವಚನಕು ಬದ್ಧತೆ || 2 ||
ಸದ್ದು ಗದ್ದಲವಿರದೆ ಸಭ್ಯತೆ
ಹೃದಯ ಗದ್ದುಗೆ ಏರಿದೆ
ವಿದ್ಯೆ ಬುದ್ಧಿಗೆ ಸಹಜ ಸವಿನಯ
ಸದ್ಗುಣವು ಜತೆಗೂಡಿದೆ || 3 ||
ಹೆಗಲನೊಡ್ಡಿಹೆ ರಾಷ್ಟ್ರಕಾರ್ಯಕೆ
ನಡುವೆ ನಿಲುಗಡೆ ಸಲ್ಲದು
ಪರಮ ವೈಭವ ಗುರಿಯ ತಲುಪದೆ
ಒರಗಲೀ ತನು ಒಲ್ಲದು || 3 ||
Very helpful
ಬಹಳ ಅರ್ಥ ಗರ್ಭಿತ ಹಾಡು,..