ಹಿಂದುತ್ವದ ಅವತಾರ

ಹಿಂದುತ್ವದ ಅವತಾರ ಆಗಿದೆ ಇಲ್ಲಿ ಸಾಕಾರ
ಹಿಂದುಗಳನ್ನು ಸಂಘಟಿಸಿ ಸಜ್ಜನ ಶಕ್ತಿಯನೆಚ್ಚರಿಸಿ
ಅಧರ್ಮವನಳಿಸಿ ಧರ್ಮವನುಳಿಸಲು ಆಗಿದೆ ಸಾಕಾರ || ಪ ||

ಪ್ರಾಂತ ಭಾಷೆಗಳು ಹಲವಾರು ಜಾತಿಪಂಥಗಳು ನೂರಾರು
ವಿವಿಧತೆಯಲ್ಲಿನ ಏಕತೆ ಸಾರುವ ಹಿಂದುಗಳಾಗಿ ಬಂದಿಹರು
ಅಶಕ್ತ ಬಿಂದುಗಳು ಸೇರಿ ಮೆರೆಯುತಿರೆ ಶಕ್ತ ಸಿಂಧುವಿನ ರೂಪದಲಿ
ಹಿಂದುತ್ವದ ಹೆದ್ದೆರೆಯಲ್ಲಿ || 1 ||

ಧರ್ಮವ ಬೆಳಗಿದ ಋಷಿ ಪರಂಪರೆ ರಾಷ್ಟ್ರ ರಕ್ಷಿಸಿದ ಸಂಘರ್ಷ
ಹಿಂದುತ್ವದ ಜಯಭೇರಿಯ ಮೊಳಗಿದೆ ವಿವೇಕಾದಿಗಳ ಆದರ್ಶ
ಜನಜನರೆದೆಯಲಿ ತುಂಬುತ ಸ್ಫೂರ್ತಿ ಧರ್ಮಜಾಗೃತಿಯು ಮೂಡುತಿದೆ
ನವ ಸೂರ್ಯೋದಯವಾಗುತಿದೆ || 2 ||

ಕೃಷ್ಣನು ಪಾರ್ಥಗೆ ತುಂಬಿದ ಧೈರ್ಯ ವಿಶ್ವರೂಪ ದರ್ಶನದಿಂದ
ಆತ್ಮವಿಸ್ಮೃತಿಯ ಕಳೆದು ನಿಂತನು ನವೋತ್ಸಾಹದಲಿ ಛಲದಿಂದ
ಕೇಶವ ತೋರಿದ ಸಂಘ ಮಾರ್ಗದಲಿ ನಡೆಯುತ ಸಾಗಿಹ ಈ ದೃಶ್ಯ
ವಿರಾಟಪುರುಷಗೆ ಸಾದೃಶ್ಯ || 3 ||

Leave a Reply

Your email address will not be published. Required fields are marked *

*

code