ಹಾಡುವೆವು ಹೊಸತೊಂದು ಹಾಡು

ಹಾಡುವೆವು ಹೊಸತೊಂದು ಹಾಡು
ಕಟ್ಟುವೆವು ಹೊಸತೊಂದು ನಾಡು
ಹಿಡಿದಿಹೆವು ಐಕ್ಯತೆಯ ಜಾಡು
ನೀಗುವೆವು ತಾಯ್ನಾಡ ಪಾಡು || ಪ ||

ಮತಜಾತಿಗಳ ಸೀಮೆ ದಾಟಿ
ನವಚೇತನದ ತಂತಿ ಮೀಟಿ
ಸುತರಿರಲು ನಾವ್ ನೂರು ಕೋಟಿ
ಭುವಿಯಲ್ಲಿ ನಮಗಾರು ಸಾಟಿ || 1 ||

ಪ್ರಾಚೀನ ಇತಿಹಾಸವೆಮದು
ಭವಿತವ್ಯವತಿಭವ್ಯ ನಮದು
ಬಿತ್ತರಿಸಿ ತಾಯ್ನಾಡ ಹಿರಿಮೆ
ಗಳಿಸುವೆವು ಗತಮಾನ ಗರಿಮೆ || 2 ||

ಶತ್ರುಗಳ ಷಡ್ಯಂತ್ರ ಕುಟಿಲ
ಪರಿಹಾರ ಸಂಕೀರ್ಣ ಜಟಿಲ
ಎದೆಗುಂದದೆಯೆ ಮುಂದೆ ಸಾಗಿ
ಹೋರಾಡಿ ಜಯಶೀಲರಾಗಿ || 3 ||

Leave a Reply

Your email address will not be published. Required fields are marked *

*

code