ಹಿಂದುತ್ವದ ಒಡಲಾಳದ ಬೆಂಕಿಯೆ

ಹಿಂದುತ್ವದ ಒಡಲಾಳದ ಬೆಂಕಿಯೆ
ಜಡತೆಯ ತೊರೆದು ಸಿಡಿದೇಳು
ಶತಶತಮಾನದ ಕಡು ಅಪಮಾನದ
ಅವಶೇಷಂಗಳ ದಹಿಸೇಳು… ಮುಗಿಲನು ಚುಂಬಿಸಿ ಭುಗಿಲೇಳು
ಸತ್ಯಮೇವ ಜಯತೇ… ಶೌರ್ಯಮೇವ ಜಯತೇ || ಪ ||

ನಿನ್ನಯ ಪೌರುಷಮಯ ಇತಿಹಾಸ
ಸ್ಮರಿಸದೆ ಮೈಮರೆತಿದೆ ಈ ದೇಶ
ಪ್ರಕಟಗೊಳ್ಳು ನೀ ಪ್ರಜ್ವಲಿಸುತಲಿ
ಬೆಳಗಲಿ ಭುವಿ ತವ ಪ್ರಖರ ಪ್ರಕಾಶ || 1 ||

ತುಷ್ಟೀಕರಣವ ಪುಷ್ಟೀಕರಿಸುವ
ತಾರತಮ್ಯಯುತ ಧೋರಣೆಯು
ಕಪಟ ಮತಾಂತರ ಕುಟಿಲ ಅವಾಂತರ
ರಾಷ್ಟಾಂತರಕಿದು ಪ್ರೇರಣೆಯು || 2 ||

ಸಂಘ ಶಕ್ತಿಯ ನೀ ಪ್ರತಿರೂಪ
ಹೊರಹೊಮ್ಮಿಸು ಬಾ ನಿನ್ನ ಪ್ರತಾಪ
ವಿಘ್ನ ವಿರೋಧಕ ಮಸಣದ ಬೂದಿ
ಸತ್ಯಕೆ ಅಂತಿಮ ವಿಜಯದ ಗಾದಿ || 3 ||

Leave a Reply

Your email address will not be published. Required fields are marked *

*

code