ಹಿಮಗಿರಿಯಲ್ಲಿನ ಉನ್ನತ ಶಿಖರ

ಹಿಮಗಿರಿಯಲ್ಲಿನ ಉನ್ನತ ಶಿಖರ, ಕನ್ಯಾಕುವರಿಯ ಹಿಂದೂಸಾಗರ
ನಡುವೆ ಬಾಳುವ ಕೋಟಿ ತರುಣರ ಮಾತೃಭೂಮಿ ಈ ಭೂಮಿ || ಪ ||

ಶಂಕರ ಮಧ್ವರ ಪವಿತ್ರಭೂಮಿ, ವಿದ್ಯಾರಣ್ಯರ ಕಾರ್ಯಕ್ಷೇತ್ರ
ರಾಮದಾಸರ ಸೇವಾಮಂತ್ರ ವಿವೇಕಾನಂದರ ಈ ಭೂಮಿ || 1 ||

ಪ್ರತಾಪ ರಾಣಾ ತೋರಿದ ನಾಡಿದು, ಶಿವಾಜಿ ಶೂರ ಬೆಳಗಿದ ಬೀಡಿದು
ಝಾನ್ಸಿರಾಣಿ ಕಾದಿದ ಜಾಡಿದು, ಕ್ಷಾತ್ರತೇಜದ ಈ ಭೂಮಿ || 2 ||

ಹೆಡಗೇವಾರರ ಸಂಘದ ದೀವಿಗೆ, ಚೇತನ ತುಂಬಿದೆ ಯುವಕರ ಬಾಳಿಗೆ
ರಾಷ್ಟ್ರ ಕಟ್ಟುವ ಪೂಜ್ಯ ಕಾರ್ಯಕೆ, ಸಂಘಸ್ಥಾನವೆ ಈ ಭೂಮಿ || 3 ||

Leave a Reply

Your email address will not be published. Required fields are marked *

*

code