ಹುಟ್ಟಿನಿಂದಲೇ ಜಾತಿ ಹಣೆಪಟ್ಟಿ ಹಚ್ಚುತ್ತ

ಹುಟ್ಟಿನಿಂದಲೇ ಜಾತಿ ಹಣೆಪಟ್ಟಿ ಹಚ್ಚುತ್ತ
ಮುಟ್ಟದೆ ಅಟ್ಟುವುದು ಸರಿಯೇ?
ಅಂತರಿಕ್ಷಕ್ಕೆ ಅಡಿಯಿಟ್ಟ ನರನಿಂದು
ಅಂತರವ ತೋರುವುದು ತರವೇ? || ಪ ||

ಪ್ರಾಣಿ ಪಕ್ಷಿಯಲಿನಿತು ಐಕ್ಯಮತ್ಯದ ಭಾವ
ಸಣ್ಣಿರುವೆ ತೆರೆಸೀತೆ ಕಣ್ಣ
ಅಣು ಅಣುವ ಸೃಷ್ಟಿ ಮಾಡಿರಲು ಮಾದೇವ
ಮತ್ತೇಕೆ ಅಸ್ಪೃಶ್ಯ ವರ್ಣ || 1 ||

ತರತಮದ ಮೌಢ್ಯ ಮನುಕುಲದ ಜಾಡ್ಯ
ಅಳಿಸೋಣ ಹರಿಸುತ್ತ ಒಲವ
ಗುರುತಿಸುತ ಆತ್ಮ ಬೆಸೆಯುತ್ತ ಸ್ನೇಹ
ಗಳಿಸೋಣ ಏಕತೆಯ ಬಲವ || 2 ||

ಸೇವೆಯೇ ವ್ರತವು ದುಡಿಮೆಯೇ ಬಲವು
ಸಹಕರಿಸಿ ನೀವೆಲ್ಲ ಜೊತೆಗೆ
ಮೇಲುಕೀಳಿಲ್ಲ ಕೀಳರಿಮೆ ಇಲ್ಲಿಲ್ಲ
ಓಗೊಡಿರಿ ಕಾಲದಾ ಕರೆಗೆ || 3 ||

ಗುಣದಲ್ಲಿ ಗರಿಮೆ ಏಕತೆಯ ಹಿರಿಮೆ
ಭಾರತಿಯ ಬೋಧನೆಯ ಮರ್ಮ
ಸಮರಸದ ಬಾಳ್ವೆ ಸಮಹಿತದ ದುಡಿಮೆ
ಅದುವೇ ನಿಜವಾದ ಧರ್ಮ || 4 ||

One thought on “ಹುಟ್ಟಿನಿಂದಲೇ ಜಾತಿ ಹಣೆಪಟ್ಟಿ ಹಚ್ಚುತ್ತ

Leave a Reply

Your email address will not be published. Required fields are marked *