ಹೊಸಮಾನದ ಶತಮಾನದ ಹಾಡು ಮಾರ್ದನಿಸುತಲಿದೆ ದೆಸೆದೆಸೆಗೆ ಮಾನವತೆಗೆ ಹಿಂದುತ್ವವೆ ಶಿರ ಏರುತ ಬಾ ಹೊಸ ಸಾಧನೆಗೆ ಹಿಂದೂ ಧರ್ಮಾರಾಧನೆಗೆ || ಪ || ಋಷಿಗಳ ಉಸಿರಲಿ ಸತ್ಯವೆ ಬದುಕು ದೊರೆವುದರಿವು ಬೆಳಕು ನಶಿಸಲಿ ನಡೆಯಲಿ ವಿರಸದ ಪಲುಕು ಸಮರಸತೆಯ ಬದುಕು ಸಂಗಚ್ಛಧ್ವಂ ಮಂತ್ರದ ಧ್ವನಿಯು ಮಾರ್ದನಿಸುತಲಿದೆ ದೆಸೆದೆಸೆಗೆ ಮಾನವತೆಗೆ ಹಿಂದುತ್ವವೆ ಶಿಖರ ಏರುತ ಬಾ ಹೊಸ ಸಾಧನೆಗೆ ಹಿಂದೂ ಧರ್ಮದಾರಾಧನೆಗೆ || 1 ||
ಯಾವನಯ್ಯ ಇವ ಯಾವನಯ್ಯ ಇವ ಯಾವನಯ್ಯ ಇವನು ? ನಮ್ಮ ಸಂಘದವನು || ಪ || ಸಂಘ ಅನ್ನುತಾನೆ ಶಾಖೆ ಅನ್ನುತಾನೆ ಬನ್ನಿ ಅನ್ನುತಾನೆ ಹೆಂಗೊ ಮಾತಾಡಿ ಸಣ್ಣ ದೊಡ್ಡವರ ಒಂದು ಮಾಡತಾನೆ | ಹಿಂಗೆ ಎಲ್ಲರನು ಮರಳು ಮಾಡುವ ಯಾವನಯ್ಯ ಇವನು ಯಾವನಲ್ಲ ಇವ ಹೇಳತೀನಿ ಕೇಳ ನಮ್ಮ ಸಂಘದವನು || 1 || ರೊಕ್ಕದಾಸೆ ಇವಗಿಟ್ಟು ಇಲ್ಲ | ಇವ ಸೊಕ್ಕಿನವನು ಅಲ್ಲ ಸಿಕ್ಕ ಸಿಕ್ಕವರ ಕರೆದು ಮಾತಾಡಿ ನಕ್ಕು ನಗಿಸಬಲ್ಲ | ಮಕ್ಕಳಾಟಿಕೆಯೋ […]
ಬೆಳಗಾಗುತಲಿದೆ ಹಿಂದೂಭುವಿಗೆ ಕಳೆದಿದೆ ಕತ್ತಲೆ ತೆರಳಿದೆ ಗವಿಗೆ || ಪ || ಕನಸೆನಿಸಿದ ತಿಳಿ ಕೇಸರಿ ಬಣ್ಣ ಕಡುಗತ್ತಲಿನಲೇ ತೆರೆಸಿತು ಕಣ್ಣ ಕಪ್ಪದು ಕೆಂಪಾಯಿತು ಕ್ಷಣ ಕ್ಷಣದಿ ಕೇಸರಿಯೇರಿತು ಗಗನಾಂಗಣದಿ ಬಂತಿದೋ ಕಾಲವು ಉದಯದ ರವಿಗೆ ಬೆಳಗಾಗುತಲಿದೆ ಹಿಂದೂ ಭುವಿಗೆ || 1 || ಹೃದಯಾಂತರ್ಯದಿ ಚಿಂತನ ಹೊಮ್ಮಿ ಮೈಮನದೊಳು ಚೇತನ ಸೆಲೆ ಚಿಮ್ಮಿ ಕಸುವುಕ್ಕಲು ಹಾಸಿಗೆಯನು ಒದ್ದು ನೆಗೆಯಿತು ಯೌವನ ಬಲ ಸಿಡಿದೆದ್ದು ಭೇರಿಯ ಕರೆ ಕೇಳುತಲಿರೆ ಕಿವಿಗೆ ಬೆಳಗಾಗುತಲಿದೆ ಹಿಂದೂಭುವಿಗೆ || 2 || […]
ಈ ನೆಲ ನಮ್ಮದು ನಮ್ಮಯ ಜನನಿ ಕಸುವುಣಿಸಿದ ಮಮತಾಮಯಿ ಧರಣಿ || ಪ || ನಾಗರಿಕತೆ ನಲಿದಾಡಿದ ತೊಟ್ಟಿಲು ಮಾನವ್ಯದ ಗುರು ಮೋಕ್ಷದ ಮೆಟ್ಟಿಲು ಸಂಸ್ಕೃತಿ ಸಂಸ್ಕಾರದ ಸಿರಿ ಮಡಿಲು ಮೌಲ್ಯ ಮಣಿಗದೆ ಕಡಲು || 1 || ತತ್ತ್ವಗಳುದಿಸಿದ ಸತ್ತ್ವಗುಣಾನ್ವಿತೆ ನಿತ್ಯ ಮನೋಹರಿಣೀ ಸತ್ಯ – ಶಿವೇ ಸೌಂದರ್ಯ ಸಮನ್ವಿತೆ ಪುತ್ರ ಕೋಟಿ ಭರಣೀ || 2 || ತತ್ತ್ವಸಂಕುಲೆ ನಿತ್ಯ ಮಂಗಲೆ ಸತ್ಯಶಿವಂಕರಿಣೀ ಸೌಂದರ್ಯದಾ ಗಣೀ ಕಸುವುಣಿಸಿದ ಮಮತಾಮಯಿ ಧರಣೀ || 3 ||
ನಡೆ ನಿರಂತರ ನಡೆ ನಿರಂತರ ನಿಲದೆ ನಡೆ ನಿರಂತರ ಉತ್ತರೋತ್ತರ ಲೋಕಲೋಕಕೊದಗಲಿದೆ ಹಿಂದು ಮನ್ವಂತರ ಏಕಮನದಿ ಧೀರಪಥದಿ ನಡೆ ನಿರಂತರ || ಪ || ವೇದಕಾಲದಾಳದಿಂದ ನಡೆ ನಿರಂತರ ಪುರಾಣಗಳ ಪೂರ್ವದಿಂದ ನಡೆ ನಿರಂತರ ತತ್ತ್ವಕಾವ್ಯ ವಿಸ್ತರಕ್ಕೆ ನಡೆ ನಿರಂತರ ರಾಮಭರತರೊಡನೆ ಬೆರೆತು ಕೃಷ್ಣಪಾರ್ಥರೊಡನೆ ಕಲೆತು ಬಾಹುಬಲಿಯ ಎತ್ತರಕ್ಕೆ ನಡೆ ನಿರಂತರ || 1 || ಘೋರಿ ಘಜನಿ ಪಡೆಯ ತರಿದು ನಡೆ ನಿರಂತರ ಆಮಿಷಗಳ ಮಲೆಯ ತೊರೆದು ನಡೆ ನಿರಂತರ ಸ್ವಾಭಿಮಾನ ಸೂತ್ರಪಿಡಿದು ನಡೆ ನಿರಂತರ […]
ಧರ್ಮಾಧರ್ಮದ ಕರುರಣರಂಗದಿ ಕೇಶವ ತೋರು ವಿವೇಕ ಹೇ ಯುಗಸಾರಥಿ ಗೊಂದಲ ತೊಲಗಿಸು ಮನದೊಳು ಕವಿದಿದೆ ಅವಿವೇಕ || ಪ || ಸತ್ಪಾತ್ರರ ವಿನಯದಿ ಕರೆದಿತ್ತರೆ ದಾನವಿದೆನ್ನನುವ ಘನಕೀರ್ತಿ ಪಾತ್ರತೆ ಹೀನಗೆ ದಾನವನಿತ್ತರೆ ವ್ಯರ್ಥ-ಅಧರ್ಮ ಅನರ್ಥಗತಿ ನೀರಸ ತೃಣಕಣ ಕಸವನೆ ತಿಂದರು ಕ್ಷೀರಾಮೃತ ಈವುದು ಗೋವು ಕ್ಷೀರವ ಕುಡಿಕುಡಿದೂ ವಿಷಜ್ವಲೆಯ ಕಕ್ಕುವುದೈ ನಾಗರಹಾವು ಸಾರ್ಥಕದಾನದ ಸಾಧ್ಯತೆಯೊಂದೇ ಪಾತ್ರಾಪಾತ್ರ ವಿವೇಕ | ಹೇ ಯುಗ ಸಾರಥಿ || 1 || ಘೋರ ಕಪಟಿ ಆ ಘೋರಿಯ ಮೋಡಿಗೆ ಪೃಥ್ವಿರಾಜ ಕೈಸೆರೆಯಾದ […]
ತುಂಬಿಸಿದೆ ಜಗದಗಲ ನಂಬಿಗೆಯ ಬೆಳಕ | ಬಿಂಬಿಸಿದೆ ಧ್ಯೇಯ ವಿಜೃಂಭಿಸಿದೆ ಪುಳಕ || ಪ || ಗ್ರಾಮಗುಹೆಕಾನನವೆ ನಗರನಗಜಗವೆ ಛಾತ್ರ ಕಾರ್ಮಿಕ ಕೃಷಿಕ ಮಹಿಳೆಯೆ ಮಗುವೆ ರೂಪಿಸಿಹೆ ಸಂಸ್ಕೃತಿಯ ಬದಲಾಯ್ತು ಯುಗವೆ ವ್ಯಾಪಿಸಿಹೆ ಮನೆ ಮನವ ಅರಳಿಹುದು ಭಗವೆ || 1 || ಸಂಘಟನೆ ಸಂಘರ್ಷ ಸೃಷ್ಟಿ ಶೀಲತೆಯೆ ಲೋಕಮನ ಸಂಸ್ಕಾರ ನಿತ್ಯ ಜಾಗೃತಿಯೆ ಹಿಂದು ರಾಷ್ಟ್ರದ ಪರಮವೈಭವ ಶ್ರುತಿಯೆ ನಂದದಾದರ್ಶಗಳ ಮೂರ್ತ ಸತ್‍ಕೃತಿಯೆ || 2 || ಮಾನವತೆ ನೆಲೆಗೊಳಿಸಿ ಮೆರೆವ ಛಲಬಲವೆ | ಮನುಕುಲಕೆ […]
ತಾಯ್ನೆಲದ ಸದ್ಗುಣಗಳೇ ನನ್ನಲ್ಲಿ ಚಿಗುರಬನ್ನಿ ಆಂತರ್ಯದಾಳದಿಂದ ಉದ್ಗಮಿಸಿ ಜೀವ ತನ್ನಿ || ಪ || ಋಷಿ ದರ್ಶನವನು ಪಡೆದು ರಸಸ್ಪರ್ಶವನ್ನು ಕಡೆದು ಹೊಸ ಸೃಷ್ಟಿಗೊಪ್ಪುವಂತೆ ನನ್ನಲ್ಲಿ ಚಿಗುರ ಬನ್ನಿ || 1 || ಶ್ರೀರಾಮಕೃಷ್ಣರಿಂದ ಬಸವಣ್ಣ ಬುದ್ಧರಿಂದ ಇತಿಹಾಸದೊಳಗಿನಿಂದ ನನ್ನಲ್ಲಿ ಚಿಗುರ ಬನ್ನಿ || 2 || ಗುರುಭಕ್ತಿ ಎನಗೆ ಬರಲಿ ಸತ್ಯದೊಳು ಶ್ರದ್ಧೆಯಿರಲಿ ಸದ್ವಿಚಾರಗಳ ಸೆಲೆಯೇ ನನ್ನಲ್ಲಿ ಚಿಗುರ ಬನ್ನಿ || 3 || ನುಡಿತಪ್ಪದಂತೆ ನಡೆವ ಅಡಿ ತಪ್ಪದಂತೆ ಬೆಳೆವ ಸಿರಿವಂತ ಚಿಂತನೆಗಳೇ ನನ್ನಲ್ಲಿ […]
ಒಂದಾಗೋಣ | ಒಂದಾಗೋಣ ಹಿಂದುಬಂಧುಗಳು ಒಂದಾಗೋಣ ಮಧುಮಂತ್ರವ ಸಿರಿತಂತ್ರದ ಬಾಳಿಗೆ ಮುಂದಾಗೋಣ || ಪ || ಒಂದೇ ಭಾರತ ಒಂದೇ ಭೂಮಿ ಒಂದೇ ಸಂಸ್ಕೃತಿ ಒಂದೇ ಜನಾಂಗ ಹೊಮ್ಮಿಸಿ ಹಲಬಗೆ ಧರ್ಮಸಮನ್ವಯ ಒಮ್ಮತ ಬದುಕನು ಸವೆಸೋಣ || 1 || ಭೀತಿವಾದ ಹಿಮ್ಮೆಟ್ಟುವ ಕೆಲಸ ಜಾತಿಗೋಡೆಗಳ ಪುಡಿಗಟ್ಟುವ ರಭಸ ಬುದ್ಧಿಯ ಝಳಪಿಸಿ ಶ್ರದ್ಧೆಯ ಹೊಳಪಿಸಿ ಎದ್ದೇಳಲಿ ಹಿಂದುತ್ವದ ಪ್ರಾಣ || 2 || ಕಲಿಗಳ ಕೃತಿಶೂರರ ಸಂಘಟಿಸಿ ಬಲಿದಾನದ ಹೊಸಮಂತ್ರೋಚ್ಚರಿಸಿ ಸಾಮದಂಡಗಳ ಹೋಮಕುಂಡದಲಿ ಶಸ್ತ್ರವ ಶಾಸ್ತ್ರವ ಪಠಿಸೋಣ […]
ಇದೋ ಶ್ರದ್ಧಾಂಜಲಿ ರಾಷ್ಟ್ರಪುರುಷ – ಶತ – ಕೋಟಿ ಹೃದಯಗಳ ಸಮವರಳುತಿವೆ | ಈ ದಿನ ನಿಮ್ಮಯ ಪೂಜಾ ಕಾರ್ಯಕೆ ಸೇತು ಹಿಮಾಚಲ ಸಂಗಮಿಸುತಿವೆ || ಪ || ಮಾತೆಯ ಪದ ಪದ್ಮಾಂಚಲದಲಿ ನೀ ಅಮೂಲ್ಯಕಾಣಿಕೆ ಅರ್ಪಿಸಿದೆ | ಅಕ್ಷಯ ಚಿರ ಸತ್ಯವ ನುಡಿದೆ ಹಿಂದುತ್ವಕೆ ಅಮೃತವ ಉಣ್ಣಿಸಿದೆ | ತವ ಸಂಸ್ಕಾರವು ಸೃಜಿಸಿದ ತನುಮನ ಅಭೇದ್ಯ ಕೋಟೆಗಳೋ ಎನಿಸುತಿವೆ || 1 || ನಡೆದೇ ಸದಾ ಕಠೋರ ನಿಯಮದಿ ಲೋಕಪ್ರಸಿದ್ಧಿ ಪರಾಙ್ಮುಖ ಪಥದಿ ನಿಶ್ಚಲ ನಿಲುವಿನ […]