ನಡೆ ನಿರಂತರ

ನಡೆ ನಿರಂತರ ನಡೆ ನಿರಂತರ
ನಿಲದೆ ನಡೆ ನಿರಂತರ ಉತ್ತರೋತ್ತರ
ಲೋಕಲೋಕಕೊದಗಲಿದೆ ಹಿಂದು ಮನ್ವಂತರ
ಏಕಮನದಿ ಧೀರಪಥದಿ ನಡೆ ನಿರಂತರ || ಪ ||

ವೇದಕಾಲದಾಳದಿಂದ ನಡೆ ನಿರಂತರ
ಪುರಾಣಗಳ ಪೂರ್ವದಿಂದ ನಡೆ ನಿರಂತರ
ತತ್ತ್ವಕಾವ್ಯ ವಿಸ್ತರಕ್ಕೆ ನಡೆ ನಿರಂತರ
ರಾಮಭರತರೊಡನೆ ಬೆರೆತು ಕೃಷ್ಣಪಾರ್ಥರೊಡನೆ ಕಲೆತು
ಬಾಹುಬಲಿಯ ಎತ್ತರಕ್ಕೆ ನಡೆ ನಿರಂತರ || 1 ||

ಘೋರಿ ಘಜನಿ ಪಡೆಯ ತರಿದು ನಡೆ ನಿರಂತರ
ಆಮಿಷಗಳ ಮಲೆಯ ತೊರೆದು ನಡೆ ನಿರಂತರ
ಸ್ವಾಭಿಮಾನ ಸೂತ್ರಪಿಡಿದು ನಡೆ ನಿರಂತರ
ಅಣುಶಸ್ತ್ರದಿ ಎಚ್ಚರಿಸಿ, ಕಾರ್ಗಿಲ್‍ಗಳನುತ್ತರಿಸಿ
ಚರೈವೇತಿ ಮಂತ್ರಪಠಿಸಿ ನಡೆ ನಿರಂತರ || 2 ||

ಜಾತಿಮತದ ಪೊರೆಯ ಹರಿದು ನಡೆ ನಿರಂತರ
ಮೌಢ್ಯ ಮೋಹದೆದೆಯ ಬಿರಿದು ನಡೆ ನಿರಂತರ
ನಿಂದೆ ಸ್ತುತಿಯನೆಲ್ಲ ಗೆಲುತ ನಡೆ ನಿರಂತರ
ನೂರು ಬಗೆಯ ನೋವ ನುಂಗಿ ಚಾರುಮಂದಹಾಸ ಬೆಳಗಿ
ನಾಡನೆಲ್ಲನಗಿಸಿ ನಗುತ ನಡೆ ನಿರಂತರ || 3 ||

ಸ್ವಾಭಿಮಾನದುಸಿರ ಹಿಡಿದು ನಡೆ ನಿರಂತರ
ದಾಸ್ಯಮತಿಯ ನೆನಪ ತೊರೆದು ನಡೆ ನಿರಂತರ
ಸ್ವತ್ವದ ಸುಮಗಂಧ ಸೂಸಿ ನಡೆ ನಿರಂತರ
ಶ್ರದ್ಧೆಶ್ರಮವನಾರಾಧಿಸಿ ಧ್ಯೇಯ ವ್ರತವ ಪರಿಪಾಲಿಸಿ
ಚರೈವೇತಿ ಮಂತ್ರಪಠಿಸಿ ನಡೆ ನಿರಂತರ || 4 ||

Leave a Reply

Your email address will not be published. Required fields are marked *

*

code