ಎದ್ದಿದೆ ಮೇಲೆದ್ದಿದೆ

ಎದ್ದಿದೆ ಮೇಲೆದ್ದಿದೆ ಹಿಂದುವಿನಭಿಮಾನದ ಅಲೆ ನಭಕೆ ಬಿದ್ದಿದೆ ಮುಗ್ಗರಿಸಿದೆ ರಾಷ್ಟ್ರದ ಅಪಮಾನದ ಹೊರೆ ನೆಲಕೆ || ಪ || ಧ್ಯೇಯನಿಷ್ಠ ದುಡಿವ ಪಡೆ ತಾಯ ಮೊಗದಿ ನಲಿವ ನಗೆ ಮುಕ್ತಳೀಗ ಮರೆತು ಆಕೆ ನೂರು ನೋವು ಚಿಂತೆ ಜನನಿಯಾಕೆ ಭುವನಕೆ ಪ್ರೀತಿಧಾರೆ ಲೋಕಕೆ ಅವಳೆ ಜ್ಞಾನದೀವಿಗೆ ಬಯಸಿ ವಿಶ್ವದೇಳಿಗೆ || 1 || ವೇದಘೋಷ ಮೊರೆದ ನೆಲ ಸರ್ವಹಿತವ ಮೆರೆದ ಬಲ ಇತಿಹಾಸವು ಮರುಕಳಿಸಿದೆ ಬೆಳ್ಳಿ ಬೆಳಕು ಚೆಲ್ಲಿದೆ ಚಾಣಕ್ಯರ ದರ್ಶನ ಅರಿಗಳಿಗದು ತಲ್ಲಣ ವಿಜಯವೊಂದೇ ಚಿಂತನ […]

Read More

ಎತ್ತ ಹೋದರು ನನ್ನ ತೃಷೆ ನೀಗದಾಯಿತು

ಎತ್ತ ಹೋದರು ನನ್ನ ತೃಷೆ ನೀಗದಾಯಿತು ಬತ್ತದಂಥ ಸಂಘಸುಧೆ ನನ್ನದಾಯಿತು ಕೊನೆಗು ನನ್ನದಾಯಿತು || ಪ || ಮಧುರ ಮಧುರ ಅದರ ಪಾನ ಅಮೃತ ಸಮಾನ ಇದರ ಸ್ಫೂರ್ತಿ ನಮಗೆ ಎಂದು ನಿತ್ಯ ನೂತನ ಬೆಳಕು ಮೂಡಿತು ಕಣ್ಣು ತೆರೆಯಿತು ದೃಷ್ಟಿ ಬೆಳೆಯಿತು ಬತ್ತದಂಥ…|| 1 || ನಾನು ಮಾತ್ರ ಇದನು ಕುಡಿದು ಸ್ವಾರ್ಥಿಯಾಗೆನು ತೃಪ್ತಿ ಹೊಂದಿ ದೇವನಲ್ಲಿ ಮುಕ್ತಿ ಬೇಡೆನು ಜಾಡ್ಯ ಕಳೆಯಿತು ಮೌಢ್ಯ ಸರಿಯಿತು ನಿಚ್ಚಳಾಯಿತು ಬತ್ತದಂಥ… || 2 || ತಿಲಕ ಧರಿಸಿ […]

Read More

ಎಂಥ ಬಲು ಸೊಬಗಿನದು ನಮ್ಮ ದೇಶ

ಎಂಥ ಬಲು ಸೊಬಗಿನದು ನಮ್ಮ ದೇಶ ! ಈ ನಮ್ಮ ತಾಯ್ನೆಲ                              || ಪ || ಉತ್ತರಕೆ ನೋಡಲ್ಲಿ ಯಾರಿಹನು? ಕಿರೀಟದಂತೆ ಶೋಭಿಸುವ ಹಿಮರಾಜ ತಾನಿಹನು ದಕ್ಷಿಣದ ಕಡೆ ನೋಡಲಲ್ಲಿ, ವಿಶಾಲ ಸಾಗರ ತಾನು ಮಾತೆಯ ಪಾದವನ್ನು ತೊಳೆಯುತಾಲಿರುವಾ, ವೈಭವದ ನಾಡು                        […]

Read More

ಉದಯವಾಗಲಿ ನಮ್ಮ ವೈಭವದ ಸಿರಿನಾಡು

ಉದಯವಾಗಲಿ ನಮ್ಮ ವೈಭವದ ಸಿರಿನಾಡು ಮುದದಿ ಸೌಭಾಗ್ಯದಾ ರಾಮರಾಜ್ಯದ ಬೀಡು || ಪ || ಪರಿಪರಿಯ ವಿಜ್ಞಾನ ಫಲಪುಷ್ಪ ಧನ ಧಾನ್ಯ ಆರೋಗ್ಯ ದೀರ್ಘಾಯು ಸತ್ಯಶಾಂತಿಯ ನಾಡು ವರಶಿಲ್ಪ ಚಿತ್ರಕಲೆ ಸಾಹಿತ್ಯ ಸಂಗೀತ ನೆಲೆ ನಿರುತವಧ್ಯಾತ್ಮ ಸುಖ ಸೌಖ್ಯದಾ ನೆಲೆವೀಡು || 1 || ತ್ಯಾಗಮಯ ಜೀವನವೇ ರಾಗಾರುಣೋದಯ ಸೌಗುಣ್ಯ ತಂಗಾಳಿ ತೀಡುತಿಹ ಶುಭಕಾಲ ಬೇಗ ಮುಸುಕುವ ನಿಶೆಯ ತೆರದೊಳವಿವೇಕವ ನೀಗಾಡಿ ಸುಜ್ಞಾನ ರವಿಯ ಮೂಡುವ ಕಾಲ || 2 || ಗೀತೆಯೆಂಬಾಮೃತವನುಣಿಸಿದಾ ಮಾಧವನ ಇತಿಹಾಸ ಬೆಳಗಿದಾ […]

Read More

ಉಜ್ವಲ ಮಹಿಮೆಯ ಕಣಕಣ ಪಡೆದಿಹ

ಉಜ್ವಲ ಮಹಿಮೆಯ ಕಣಕಣ ಪಡೆದಿಹ ಮಣ್ಣಿನ ಮಕ್ಕಳೆ ಮೇಲೇಳಿ ಮಾನವ್ಯತೆ ದೇವತ್ವದ ಧರಿಸಿದ ಚರಿತೆಯ ಮೂಡಲಿ ಮೈತಾಳಿ || ಪ || ತಿಮಿರವ ತುಳಿಯುತ ಪರಾನುಕರಣೆಯ ಬೆನ್ನಿಗೆ ಮೂಡಿಸಿ ಪದಚಿಹ್ನೆ ಆರಾಧಿಪ ಬನ್ನಿರಿ ಜ್ಞಾನ ಶೀಲ ಭಾರತದೇಕಾತ್ಮತೆಯನ್ನೆ ತಾಯ್ನೆಲದಭಿಮಾನದ ಶ್ರುತಿ ಹೊಮ್ಮಿಸಿ ಹೃದಯದ ಭೇರಿಯ ನುಡಿಸೇಳಿ || 1 || ಮೈಮನದೊಳಗಾಂತರ್ಯದ ಸ್ಫೂರ್ತಿಯು ಹರಿದವತರಿಸಲಿ ನವಯುಗವು ಜಡತೆಗೆ ಚೇತನ ತುಂಬುತ ಹೊಮ್ಮಲಿ ಭಾರತದತಿ ದಿವ್ಯತೆಯರಿವು ಆತ್ಮದ ಅಮರತ್ವವ ಅನುಭವಿಸುತ ಸ್ವದೇಶಕೊಳಿತನು ತರಲೇಳಿ || 2 || ಹೃದಯದೊಳುದಿಸುವ […]

Read More

ಈ ತಾಯಿನಾಡಿನ ಯೋಧರು ನಾವು

ಈ ತಾಯಿನಾಡಿನ ಯೋಧರು ನಾವು ಸ್ವಾತಂತ್ರ್ಯದ ಉನ್ಮತ್ತರು ನಾವು || ಪ || ಬಲಿವೇದಿಕೆಯಲಿ ನಗುನಗುತ ತಲೆಯೊಡ್ಡುವ ವೀರರು ನಾವು ಜನನಿಯ ವೀರ ಪೂಜಾರಿಗಳು ಸರ್ವಸ್ವಾರ್ಪಣ ಗೈವವರು ದೇಶಪ್ರೇಮದ ಮಧುರಸದಿ || 1 || ದೇಶಪ್ರೇಮದ ಮಧುರಸದಿ ಮುಳುಗಿಹುದೆಮ್ಮೀ ಜೀವನವು ತನು ಮನ ಧನ ಜೀವನವೆಲ್ಲಾ ನಮ್ಮೀ ನಾಡಿಗೆ ಅರ್ಪಿತವು ಸಮರದೊಳಿಟ್ಟಡಿಯನು ಮರಳಿ ಹಿಂದೆಗೆಯದ ವೀರರು ನಾವು || 2 || ಆರ್ಯವೀರ ಸಂತಾನರು ನಾವು ಭಾರತ ಸಿರಿಯನು ಬೆಳಗುವೆವು ರಣದೊಳು ಕಾದುತ ಮಡಿಯುವೆವು ಸಮರ್ಥರೆನಿಸುತ ಬಾಳುವೆವು […]

Read More

ಇಂದು ನಿನ್ನಯ ಸರ್ವದೇವರು

ಇಂದು ನಿನ್ನಯ ಸರ್ವ ದೇವರು ಹಿಂದು ಹೆಸರಿನ ಬಂಧು ಜನರು || ಪ || ಚರಿತೆ ಮರೆಯುತಲಂಧರಾಗಿಹ ಅವರೆ ಇಂದಿನ ಮಾತ ಪಿತರು ಸ್ವಾರ್ಥ ಕಲಹದಿ ರಾಷ್ಟ್ರ ಮರೆಯುತ ಪೂರ್ಣ ವೈಭವದಿಂದಲುರುಳಿ ಕಣ್ಣ ತೆರೆಸುವ ನೀತಿ ಕಲಿಸುವ ಜ್ವಾನದಾತರು ಗುರುವರ್ಯರು ಕಣ್ಗೆ ಕಾಣುವುದೊಂದೆ ದೇವರು ಭವ್ಯ ಜಾತಿಯ ದಿವ್ಯ ನರರು || 1 || ಶಾಲಿವಾಹನ ಶ್ವೇತವಾಹನ ಭೀಮ ಭೀಷ್ಮರ ಸಂಜಾತರು ಬಾಣ ಚದುರರ ದಾನಶೂರರ ದ್ರೋಣ ಕರ್ಣರ ಸಂತಾನರು ಪತಿತ ಪಾಮರ ದೀನ ಹೀನರ ನಿನ್ನ […]

Read More

ಆ ಹಿಂದು ಮಹೋದಧಿಯೆದೆಯಾಳದ ಒಳಗೆ

ಆ ಹಿಂದು ಮಹೋದಧಿಯೆದೆಯಾಳದ ಒಳಗೆ ಅಪಮಾನದ ಜ್ವಾಲಾಮುಖಿ ಧಗಧಗಿಸುತಿದೆ ಸಾಗರದೊಳಗೇರಿಳಿಯುವ ಹೆದ್ದೆರೆಗಳಲಿ ಅಲೆಯಲೆಯೊಳಗೂ ತುಂಬಿಹುದಾಕ್ರಂದನವು || ಪ || ಗಂಗಾಧರೆಯು ಪ್ರಶ್ನೆಯನೆಸೆಯುತಲಿಹುದು ಸಗರನ ಸುತರನು ಮೀರಿಸಿ ಮೃತವಾಯಿತೆ ಧರ್ಮದ ಕರ್ಮದ ನೆಲೆಮನೆ ಭಾರತವಿಂದು ? ಸಿಂಧೂಧಾರೆಯು ಬಿಸುಸುಯ್ಯುತಲಿಹುದು ತನ್ನನು ಭಂಗಿಸಿದವರಜ್ಞಾನಕೆ ನೊಂದು || 1 || ಜನನಿಯ ಶೋಕವ ಪರಿಹರಿಸದೆ ಬದುಕಿದ ಪುತ್ರರ ಬಾಳಿಗೆ ಶತಶಾಪಗಳಿರಲೆಂದು ಸುಖ ಸವಿಭೋಗದ ಮೋಹದಿ ನಿದ್ರಿಸುತಿಹ ಜನರಾಯುಷ್ಯವು ಸಾರ್ಥಕರಹಿತವದೆಂದು ಶಪಿಸುತಲಿದೆ ಭೂಗಗನಳಿಂದು || 2 || ಗತ ವಿಭವಂಗಳೊಳಭಿಮಾನವ ತಳೆದು ಭವ್ಯ […]

Read More

ಅವನ ಸ್ಮೃತಿಗಳು ಕೊನರಿ

ಅವನ ಸ್ಮೃತಿಗಳು ಕೊನರಿ ಕವನ ಕುಸುಮಗಳರಳಿ ಚೈತ್ರ ಚೇತನದೆದುರು ಜಡ ಸಮಾಧಿ ಹಸಿರಾದ ಭಾವಗಳ ಹೊಸ ಬೆಳಕಿನಲಿ ಬೆಳೆಸಿ ದೃಢಗೊಳಿಸ ಬಂತಿದೋ ಹೊಸ ಯುಗಾದಿ ಅವನ ನೆನಪಿಗೆ ಬಂತೊ ಹೊಸ ಯುಗಾದಿ || ಪ || ಭೀಮಕಾಯದ ಸುಮನ ಕೋಮಲ ಕಮನೀಯ ಮೆಚ್ಚುಗೆಯ ಬಿಟ್ಟಿರುವ ಲೋಕ ಕುಣಿಸಿ ಹತ್ತಿರಕೆ ಕರೆದು ನೀನಾರೆಂದು ಏಕೆಂದು ಹೊಚ್ಚ ಹೊಸ ತನು ತೊಡಿಸಿ, ಉಣಿಸಿ, ಮಣಿಸಿ, ಎತ್ತರಕೆ ಬೆಳೆದವನ ನೆನಪಿದೋ ನಾಡಿನಲಿ ಲೋಕ ಕಂಡಿದೆ ಇಲ್ಲಿ ಹೊಸದು ಹಾದಿ || 1 […]

Read More

ಅಧರ್ಮ ಆಸುರಿ ವೃತ್ತಿಯನಳಿಸುವ

ಅಧರ್ಮ ಆಸುರಿ ವೃತ್ತಿಯನಳಿಸುವ ಧರ್ಮೋದ್ಧಾರವೇ ನಮ್ಮ ಮತ ಸಾವಿನ ಮುಖದಲು ಅಂಜದೆ ಅಳುಕದೆ ಅಂತಿಮ ವಿಜಯವು ನಮ್ಮ ಮತ || ಪ || ಕಾದಾಡುವ ಕೈಗೊಂಡ ಗುರಿಯನು ಮುಟ್ಟುವುದೇ ನಿಜ ಪುರುಷಾರ್ಥ ರಾಮ ಕೃಷ್ಣ ವಿದ್ಯಾರಣ್ಯರು ವೀರ ಶಿವಾಜಿಯ ಸಫಲವ್ರತ || 1 || ನಮ್ಮೀ ರಾಷ್ಟ್ರದ ಧರ್ಮ ಸಂಸ್ಕೃತಿಯ ವಿಸ್ತಾರಕೆ ಮೇಣ್ ರಕ್ಷಣೆಗೆ ರಾಷ್ಟ್ರ ಜೀವನವ ಸಂಪದಗೊಳಿಸುವ ಸಾಮರ್ಥ್ಯದ ಹಿರಿಗುರಿಯೆಡೆಗೆ || 2 || ಮಹಾನವಮಿಯ ಶಸ್ತ್ರ ಪೂಜೆಯಿದು ಶಕ್ತಿಯ ಘನತರ ಸಂದೇಶ ಎದೆಗುಂದದೆ ಮುನ್ನಡೆಯುತ […]

Read More