ಆ ಹಿಂದು ಮಹೋದಧಿಯೆದೆಯಾಳದ ಒಳಗೆ

ಆ ಹಿಂದು ಮಹೋದಧಿಯೆದೆಯಾಳದ ಒಳಗೆ
ಅಪಮಾನದ ಜ್ವಾಲಾಮುಖಿ ಧಗಧಗಿಸುತಿದೆ
ಸಾಗರದೊಳಗೇರಿಳಿಯುವ ಹೆದ್ದೆರೆಗಳಲಿ
ಅಲೆಯಲೆಯೊಳಗೂ ತುಂಬಿಹುದಾಕ್ರಂದನವು || ಪ ||

ಗಂಗಾಧರೆಯು ಪ್ರಶ್ನೆಯನೆಸೆಯುತಲಿಹುದು
ಸಗರನ ಸುತರನು ಮೀರಿಸಿ ಮೃತವಾಯಿತೆ
ಧರ್ಮದ ಕರ್ಮದ ನೆಲೆಮನೆ ಭಾರತವಿಂದು ?
ಸಿಂಧೂಧಾರೆಯು ಬಿಸುಸುಯ್ಯುತಲಿಹುದು
ತನ್ನನು ಭಂಗಿಸಿದವರಜ್ಞಾನಕೆ ನೊಂದು || 1 ||

ಜನನಿಯ ಶೋಕವ ಪರಿಹರಿಸದೆ ಬದುಕಿದ
ಪುತ್ರರ ಬಾಳಿಗೆ ಶತಶಾಪಗಳಿರಲೆಂದು
ಸುಖ ಸವಿಭೋಗದ ಮೋಹದಿ ನಿದ್ರಿಸುತಿಹ
ಜನರಾಯುಷ್ಯವು ಸಾರ್ಥಕರಹಿತವದೆಂದು
ಶಪಿಸುತಲಿದೆ ಭೂಗಗನಳಿಂದು || 2 ||

ಗತ ವಿಭವಂಗಳೊಳಭಿಮಾನವ ತಳೆದು
ಭವ್ಯ ಭವಿಷ್ಯದೊಳಾಶಾವರ್ಷವ ಸುರಿದು
ಕ್ಷತ್ರಿಯ ತೇಜದ ವಿಕ್ರಮ ಜ್ವಾಲೆಯೆ ಏಳು
ಕೌಟಿಲ್ಯನ ದೃಢ ನಿಶ್ಚಯವೇ ಮೇಲೇಳು || 3 ||

ಅಗಣಿತ ಸೀತಾಮಾತೆಯರಪಹೃತರಿಂದು
ಹನುಮಾನನೆ ಅನ್ವೇಷಣೆಯನು ತ್ವರೆಗೊಳಿಸು
ಎನಿತೋ ದ್ರೌಪದಿಯರು ಅಪಮಾನಿತರಿಂದು
ಸಂಗ್ರಾಮದಿ ಧೀರನೆ ಶರವರ್ಷವ ಸುರಿಸು || 4 ||

Leave a Reply

Your email address will not be published. Required fields are marked *

*

code