ಇಂದು ನಿನ್ನಯ ಸರ್ವದೇವರು

ಇಂದು ನಿನ್ನಯ ಸರ್ವ ದೇವರು
ಹಿಂದು ಹೆಸರಿನ ಬಂಧು ಜನರು || ಪ ||

ಚರಿತೆ ಮರೆಯುತಲಂಧರಾಗಿಹ
ಅವರೆ ಇಂದಿನ ಮಾತ ಪಿತರು
ಸ್ವಾರ್ಥ ಕಲಹದಿ ರಾಷ್ಟ್ರ ಮರೆಯುತ
ಪೂರ್ಣ ವೈಭವದಿಂದಲುರುಳಿ
ಕಣ್ಣ ತೆರೆಸುವ ನೀತಿ ಕಲಿಸುವ
ಜ್ವಾನದಾತರು ಗುರುವರ್ಯರು
ಕಣ್ಗೆ ಕಾಣುವುದೊಂದೆ ದೇವರು
ಭವ್ಯ ಜಾತಿಯ ದಿವ್ಯ ನರರು || 1 ||

ಶಾಲಿವಾಹನ ಶ್ವೇತವಾಹನ
ಭೀಮ ಭೀಷ್ಮರ ಸಂಜಾತರು
ಬಾಣ ಚದುರರ ದಾನಶೂರರ
ದ್ರೋಣ ಕರ್ಣರ ಸಂತಾನರು
ಪತಿತ ಪಾಮರ ದೀನ ಹೀನರ
ನಿನ್ನ ಪರುಕಿಸಿ ಪೂಜೆ ಪಡೆಯಲು
ಕಂಗೆಳೆದುರಿಗೆ ಕಾಯುತಿಹರು || 2 ||

ಹೃದಯ ಮಂದಿರದೊಳಗೆ ತಂಗಲಿ
ಹಿಂದು ಮೂರ್ತಿಯ ಪುಣ್ಯ ಚರಿತೆ
ನಿನ್ನ ಗತ ಇತಿಹಾಸ ಕೀರ್ತಿಯು
ನಿನ್ನ ದೇವರ ಭಕ್ತಿ ಗೀತೆ
ಸೂರ್ಯ ಚಂದ್ರರ ಕುಲದಿ ಜನಿಸಿಹ
ಹಿಂದು ಪುರುಷನೆ ಪರಮ ದೈವ
ಆತನರ್ಚನೆ ಪಾದಸೇವೆಗೆ
ನೀಡು ನಿನ್ನಯ ಜೀವ ಭಾವ || 3 ||

Leave a Reply

Your email address will not be published. Required fields are marked *

*

code