ಕಾರ್ಮೋಡಗಳ ಸೀಳಿ ಕೋಲ್ಮಿಂಚು ಮೈದಾಳಿ

ಕಾರ್ಮೋಡಗಳ ಸೀಳಿ ಕೋಲ್ಮಿಂಚು ಮೈದಾಳಿ ಗುಡುಗಿತು ನಭೋಮಂಡಲ ರಾಮನ ನೆಲದಿಂದ ಧರ್ಮದ ನೆಲೆಯಿಂದ ಬೆಳಗಲಿ ಭೂಮಿಯಂಗಳ ರಾಮನಾಮದಿ ಬೆಳಗಲಿ ಭೂಮಿಯಂಗಳ || ಪ || ಸಾಮಗಾನದ ಶೃತಿಗಿಹುದೇ ಲಯ ಸಾಮರಸ್ಯದ ಕೃತಿಗೆಲ್ಲಿಯ ಕ್ಷಯ ವಿಷಮದ ವ್ಯಾಪಾರ ವಿಶ್ವದಿ ನಶಿಸಲಿ ರಸಪೂರ್ಣವೆನಿಸಲಿ ಈ ತಾಯ್ನೆಲ || 1 || ಜಡತೆಯ ವಂಶಕೆ ವಜ್ರಾಘಾತ ಜಾಗೃತ ಜ್ವಾಲೆಗೆ ಝಂಝೂವಾತ ನಿದ್ರೆಯ ಮುದ್ರೆಯ ಒದ್ದೋಡಿಸುತಾ ಸದ್ದನು ಮರೆಯಲಿ ಸ್ವರಸಂಕುಲ || 2 || ಉಜ್ವಲ ಸಂಸ್ಕೃತಿ ಉದ್ದೀಪಿಸಿದೆ ಉತ್ಕರ್ಷಕೆ ಜಗ ಉಡ್ಡಯಿಸುತಿದೆ […]

Read More

ಕಟ್ಟುವೆವು ನಾವು ಹೊಸ ನಾಡೊಂದನು

ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು || ಪ || ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ ಹರಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ನಮ್ಮದೆಯ ಕನಸುಗಳೆ ಕಾಮಧೇನು – ಆದಾವು ಕರೆದಾವು ವಾಂಛಿತವನು || 1 || ಕರೆವ ಕೈಗಿಹುದಿದೋ ಕನಸುಗಳ ಹರಕೆ ಗುರಿತಪ್ಪದೊಮ್ಮುಖದ ಬಯಕೆ ಬೆಂಬಲಕೆ ಜಾತಿ ಮತ ಭೇದಗಳ ಕಂದಕವು […]

Read More

ಓರ್ವ ಕೇಶವ ಓರ್ವ ಮಾಧವ

ಓರ್ವ ಕೇಶವ ಓರ್ವ ಮಾಧವ ಅಮರ ಪಂಕ್ತಿಗೆ ಯಾದವ “ಜಯಿಸು ಅಜೇಯವ ಸೆಣಸು ಸವಾಲಿಗೆ” ಸೂತ್ರ ಮೊಳಗಿದ ಬಾಂಧವ || || ಪ || ಬಾಲ್ಯದಲಿ ಸಂಗೀತ ಸುಧೆಯಲಿ ಬಾಲಭಾಸ್ಕರ ಎನಿಸಿದೆ ಕನ್ನಡ ನೆಲದಲಿ ಸಂಘಧ್ಯೇಯದ ತಾನ ಪಲ್ಲವಿ ಉಲಿಸಿದೆ || || 1 || ಬಾನಿನೆತ್ತರ ಭಾವ ಬಿತ್ತರ ಹೊಸದು ಆಯಾಮಗಳ ಮಜಲು ಹಿಂದು ಭಾವನೆ ಬೆಳೆದು ಬೆಳಗಲು ಹಬ್ಬಿಸಿದೆಯಾ ಅಪೂರ್ವ ಬಿಳಲು || 2 || ದಿಟ್ಟ ಮನಸಿನ ಕಠಿಣ ತಪಸಿನ ಮನು ಹೃದಯಗಳ […]

Read More

ಓ ಏಳು ಮೈತಾಳು ನವಯುಗ ನಿರ್ಮಾಪಕನೆ

ಓ ಏಳು ಮೈತಾಳು ನವಯುಗ ನಿರ್ಮಾಪಕನೆ || ಪ || ಬೊಬ್ಬಿರಿಯುವ ತೆರೆತೆರೆ ಹೃದಯಾಂಬುಧಿಯಂಚಿನಲಿ ಬರಸಿಡಿಲಿನ ಘನಗರ್ಜನೆ ಗಹನದ ಮಿಂಚಿನಲಿ ಉದ್ಧಟ ನದಿಯಾರ್ಭಟ ಸೆರೆಸೆರೆಯ ಪ್ರವಾಹದಲಿ ತೆರೆ ತೆರೆ ಭೀಕರ, ಉರಿಗಣ್ಣನು ಬಡಬಾನಲನೆ || 1 || ಗ್ರಹ ಗ್ರಹಗಳ ಸಿಡಿಸುವ ಅಣುಶಕ್ತಿಯ ಅಂಗಾರ ಪ್ರಲಯೇಶ್ವರನಿಗೆ ಸೃಷ್ಟಿಯ ಮೊದಲಿನ ಶೃಂಗಾರ ಕರೆ ಸಂಕ್ರಾಂತಿಯ ಜ್ಞಾನತುಷಾರ ಸ್ಥೈರ್ಯದಿ ಸೃಷ್ಟಿಸು ಪುನರಪಿ ರೂಪಿಸು ವಿಶ್ವವನೆ || 2 || ಎದೆಯನು ಮೆಟ್ಟುವ ಮಸಣದ ಭೂತವ ಹೊಡೆದಟ್ಟಿ ಜಡ ಮಸಣದ ಎದೆಯೊಳಗೂ […]

Read More

ಒಂದು ದಿನ ಸಂಜೆಯ ಸಮಯ

ಒಂದು ದಿನ ಸಂಜೆಯ ಸಮಯ ತಿರುಗಾಡಲು ಹೊರಟಾಗ ಕಂಡೆನು ನಾ ಮನವನು ಸೆಳೆವ ಸುಂದರ ದೃಶ್ಯವನೊಂದ || ಪ || ಮಾರ್ಗದ ಬದಿಯಲಿ ಬಯಲು, ಆ ಬಯಲಲಿ ಮಕ್ಕಳ ಹುಯಿಲು ಮಕ್ಕಳಿಗೆಲ್ಲಾ ಮುಖ್ಯನು ಒಬ್ಬ, ಗರ್ಜಿಸಿತವನಾ ಬಿಗಿಲು ಟಿರ್ರ್ ಟ್ರಿಕ್… ಟಿರ್ರ್ ಟ್ರಿಕ್ …. ತತ್ತರಿಸಿತು ಆ ಮುಗಿಲು || 1 || ದಕ್ಷ ಆರಮ ಆಜ್ಞೆ, ಅದು ಶಿಸ್ತಿಗೆ ಸೂಚಕ ಸಂಜ್ಞೆ ಸಂಜ್ಞೆಯನರಿತು ಸಾಗಿತು ಮುಂದೆ, ತರುಣರ ಬಾಲರ ಸೇನೆ ಏಕ್-ದೋ-ಏಕ್-ದೋ, ಏಕ್-ದೋ-ಏಕ್-ದೋ, ಸಂಪತಗೊಂಡಿತು ತಾನೇ […]

Read More

ಒಂದುಗೂಡುವಾ ಮುಂದೆ ಸಾಗುವಾ

ಒಂದುಗೂಡುವಾ ಮುಂದೆ ಸಾಗುವಾ ಬಂಧು ಭಾವದಿಂದ ಸೇರುವಾ ಹಿಂದುಭೂಮಿ ಸೇವೆ ಗೈಯ್ಯುವಾ || ಪ || ಅಂದು ತುಂಬಿ ತುಳುಕುತಿದ್ದ ಧನ ಧಾನ್ಯವೆತ್ತ ಸಾಗಿದೆ ಇಂದು ಜನತೆ ಅರ್ಧ ನಗ್ನವಾಗಿ ಬಡವಾಗಿದೆ ದುಡಿದು ಬೇಗ ಫಲವ ಗಳಿಸುವಾ ತಾಯಿನಾಡನು ಸಮೃದ್ಧಿಗೊಳಿಸುವಾ || 1 || ವಿಮಲ ಶೀಲ ದಿವ್ಯ ವಿದ್ಯೆ ಕಲೆಗಳೆಲ್ಲಿ ಪೋದವೂ ? ಭ್ರಮೆಯ ಹೊಂದಿ ಪರರ ಬಲೆಗೆ ಸಿಲುಕಿ ದೀನರಾದೆವೂ ಮರಳಿ ಜ್ಞಾನವನ್ನು ಪಡೆಯುವಾ ನಾವ್ ಧರೆಯ ಜನಕೆ ನಯದಿ ನೀಡುವಾ || 2 […]

Read More

ಏಳಿ ಎದ್ದೇಳಿ ನಿಲ್ಲದಿರಿ ಗುರಿಮುಟ್ಟುವ ತನಕ

ಏಳಿ ಎದ್ದೇಳಿ, ನಿಲ್ಲದಿರಿ ಗುರಿಮುಟ್ಟುವ ತನಕ ಏಳಿ ಎದ್ದೇಳಿ || ಪ || ಭಾರತಮಾತೆಯ ಪ್ರೀತಿಯ ಮಕ್ಕಳು ನಿದ್ರಾಪರವಶರಾಗಿಹರು ನಿದ್ರಿಸುತಿರುವೀ ಬಂಧುವನೆಲ್ಲಾ ನಾವೆ ಎಚ್ಚರಗೊಳಿಸಲೇಬೇಕು || 1 || ಮಾತೃಭೂಮಿಯ, ದೇಶಧರ್ಮದ ಭ್ರಾತೃಭಾವವ ಕ್ಷಾತ್ರ ತೇಜವ ಮರೆತು ನಿದ್ರಿಸುತಿರುವೀ ಬಂಧುವ ನಾವೇ ಎಚ್ಚರಗೊಳಿಸಲೇಬೇಕು || 2 || ಪ್ರಾಂತ ಭೇದದಿ, ಪಕ್ಷ ಭೇದದಿ, ಜಾತಿ ಭೇದದಿ ಭಾಷಾ ಭೇದದಿ ಜಗಳವನಾಡುತಲಿರುವೀ ಜನರನು ನಾವೇ ಎಚ್ಚರಗೊಳಿಸಲೇಬೇಕು || 3 || ನಿದ್ದೆಯ ಮಾಡುವ, ಸಮಯವಿದಲ್ಲವು ಜಾಗೃತಿಗೈಯುವ ಪರ್ವಕಾಲವಿದು ಹಿಂದುಬಂಧುಗಳೆಲ್ಲರನು […]

Read More

ಏಳಿ ಎದ್ದೇಳಿ ಅಮೃತಾತ್ಮರಾದವರೆ

ಏಳಿ ಎದ್ದೇಳಿ ಅಮೃತಾತ್ಮರಾದವರೆ || ಪ || ಏಳಿ ಜಾಗೃತಗೊಳ್ಳಿ ಚೈತನ್ಯಶಾಲಿಗಳೆ || ಅ.ಪ || ಹಿಮಗಿರಿಯ ಮಡುವಿನಲಿ ಘನವಿಷದ ಹೆಬ್ಬಾವು ಬುಸುಗುಟ್ಟಿ ಬಾಯ್ಬಿಟ್ಟು ತಲೆ ಎತ್ತಿದೆ ಕಾಶ್ಮೀರ ಸರಹದ್ದಿನಲ್ಲಿ ಕಾರ್ಕೋಟಕವು ವಿಷಕಾರುತಾ ತಲೆಯ ಮೇಲೆತ್ತಿದೆ ಆ ಫಣಿಗಳ ಫಣಿ ತುಳಿದು ನರ್ತನವನಾಡೋಣ ಕಾಳಿಂದ ಮರ್ದನನ ಕುಲಜರಾವು || 1 || ಭರತವಂಶದ ಪುತ್ರರಾವು ಕೇಸರಿ ಇರಲಿ ಹಲ್ಲುಗಳನೆಣಿಸೇವು ಭಯವಿಲ್ಲದೆ ವಿಷದ ಲಡ್ಡುಗೆಯನ್ನು ತಿಂದು ಕರಗಿಸಿದಂತ ಭೀಮಬಲರಾವೆನ್ನಿ ಭಯವಿಲ್ಲದೆ ಬನ್ನಿ ಹೋರಾಟಕ್ಕೆ ದೇಶದೇಳ್ಗೆಯ ನಡೆಸಿ ನಿತ್ಯಕರ್ಮದ ಚಕ್ರ […]

Read More

ಏಳಿ ಎಚ್ಚರಗೊಳ್ಳಿ ಕೆಚ್ಚೆದೆಯ ಕಲಿಗಳೇ

ಏಳಿ ಎಚ್ಚರಗೊಳ್ಳಿ ಕೆಚ್ಚೆದೆಯ ಕಲಿಗಳೇ ನೆತ್ತರೋಕುಳಿಯಲ್ಲಿ ನಾಟ್ಯವಾಡೆ ತಾಯೆದೆಯ ರಂಗದಲಿ ಬಾಳನೆತ್ತವನಾಡಿ ಹಗೆಯ ತಲೆ ನಗ್ಗೊತ್ತಿ ಮೆಟ್ಟಲಿಂದೇ || ಪ || ಎತ್ತಿಹಿಡಿ ಹೊಸಕಹಳೆ ಒತ್ತೊತ್ತಿ ಊದಿಬಿಡಿ ನಾಡನಾಡಿಯನೆಲ್ಲ ಮಿಡಿಯುವಂತೆ ನೂತ್ನ ಚೇತನ ವಹ್ನಿ ಪ್ರಜ್ವಲಿಸಿ ಪಸರಿಸಲಿ ಸತ್ತಮನ ಮೈವೊದರಿ ಸಿಡಿಯುವಂತೆ || 1 || ವೈರಿ ಸಾಗರವಿರಲಿ ನೀನಗಸ್ತ್ಯನೆ ಆಗು ಆಪೋಶನಂ ಗೈಯ್ಯೆ ಚುಳಕದಲ್ಲೇ ತೂಗು ಪುರುಷವನಿಂದೆ ಹೆರರ ದಬ್ಬಾಳಿಕೆಗೆ ಏಣಿಗಣ್ಚಾಸಿರಂ ಉರುಳಲಿಲ್ಲೇ || 2 || ಹಿಮವಂತನುನ್ನತಿಯ ತುಂಗಶೃಂಗದ ಮುಕುಟ ಸಿಡಿದೊಡೆದು ಹುಡಿಗೊಂಬ ಕಾಲವಿಂದು […]

Read More

ಏ ಹಿಂದು ವೀರಾ ಭಿನ್ನಭಾವ ಬಿಟ್ಟು ಬಾರಯ್ಯ

ಏ ಹಿಂದು ವೀರಾ ! ಭಿನ್ನ ಭಾವ ಬಿಟ್ಟು ಬಾರಯ್ಯ ನೀ ಭಾರತಾಂಬೆ ಸೇವೆಗಾಗಿ ಕೂಡಿ ಸೇರಯ್ಯ || ಪ || ಹಿಂದುಜನತೆ ಸಂಘಟನೆಯೊಳಿರುವುದು ಶಕ್ತಿ ಆ ಶಕ್ತಿಯಿಂದ ಲಭಿಸುವುದು ಬಂಧವಿಮುಕ್ತಿ ಆ ಶಕ್ತಿಗಾಗಿ ಹಗಲಿರುಳು ದುಡಿಯಬೇಕಯ್ಯ ನೀ ಅದಕೆ ಸಂಘಕಿಂದು ಬಂದು ಸೇರಬೇಕಯ್ಯ || 1 || ಹಕ್ಕ ಬುಕ್ಕ ವೀರರಿಂದ ಸ್ಫೂರ್ತಿಯ ಗಳಿಸಿ ಪ್ರತಾಪ ಪೃಥ್ವಿರಾಜರಿಂದ ಧೈರ್ಯವ ಗಳಿಸಿ ನೀ ಛತ್ರಸಾಲ ಶಿವರ ಕೀರ್ತಿ ಉಳಿಸಬೇಕಯ್ಯ ಸ್ವಾತಂತ್ರ್ಯ ಸಮರ ಸ್ಮರಣೆಯ ನೀ ಮಾಡಬೇಕಯ್ಯ || […]

Read More