ಏಳಿ ಎದ್ದೇಳಿ ಅಮೃತಾತ್ಮರಾದವರೆ

ಏಳಿ ಎದ್ದೇಳಿ ಅಮೃತಾತ್ಮರಾದವರೆ || ಪ ||
ಏಳಿ ಜಾಗೃತಗೊಳ್ಳಿ ಚೈತನ್ಯಶಾಲಿಗಳೆ || ಅ.ಪ ||

ಹಿಮಗಿರಿಯ ಮಡುವಿನಲಿ ಘನವಿಷದ ಹೆಬ್ಬಾವು
ಬುಸುಗುಟ್ಟಿ ಬಾಯ್ಬಿಟ್ಟು ತಲೆ ಎತ್ತಿದೆ
ಕಾಶ್ಮೀರ ಸರಹದ್ದಿನಲ್ಲಿ ಕಾರ್ಕೋಟಕವು ವಿಷಕಾರುತಾ ತಲೆಯ ಮೇಲೆತ್ತಿದೆ
ಆ ಫಣಿಗಳ ಫಣಿ ತುಳಿದು ನರ್ತನವನಾಡೋಣ
ಕಾಳಿಂದ ಮರ್ದನನ ಕುಲಜರಾವು || 1 ||

ಭರತವಂಶದ ಪುತ್ರರಾವು ಕೇಸರಿ ಇರಲಿ
ಹಲ್ಲುಗಳನೆಣಿಸೇವು ಭಯವಿಲ್ಲದೆ
ವಿಷದ ಲಡ್ಡುಗೆಯನ್ನು ತಿಂದು ಕರಗಿಸಿದಂತ ಭೀಮಬಲರಾವೆನ್ನಿ ಭಯವಿಲ್ಲದೆ
ಬನ್ನಿ ಹೋರಾಟಕ್ಕೆ ದೇಶದೇಳ್ಗೆಯ ನಡೆಸಿ
ನಿತ್ಯಕರ್ಮದ ಚಕ್ರ ರಭಸಗೊಳ್ಳಲಿ
ಕರ್ತವ್ಯದಸ್ತ್ರಗಳು ನೇರದಾರಿಯ ಹಿಡಿದು
ಗುರಿಗೊಂಡು ಶತ್ರುಗಳ ಹೊಡೆದಟ್ಟಲಿ || 2 ||

Leave a Reply

Your email address will not be published. Required fields are marked *

*

code