ಜೈ ಜೈ ಎನುತಾ ಹಿಂದು ಧರ್ಮಕೆ ಜೈ ಎನುತಾ ವಿಶ್ವಧರ್ಮಕೆ ಜೈ ಎನುತಾ ಬನ್ನಿರಿ ಬೆಳಗುವ ಸಂಘಜ್ಯೋತಿಯ ಮನೆ ಮನೆಗಳಿಗೀಗ || ಪ || ನಮ್ಮ ನಾಡಿದು ನಮ್ಮ ಹೊನ್ನಿನ ಬೀಡಿದು ನಮ್ಮ ಹೃದಯವ ಕರೆದಿಹುದು ಜಗವನು ಬೆಳಗಿದ ಋಷಿಗಳ ಆಧ್ಯಾತ್ಮದ ತವರೂರು ಶೌರ್ಯದಿ ಕೆಚ್ಚದಿ ಕಾದಿಹ ವೀರರ ಸ್ಮರಿಸುತ ಸಾಗುವೆವು || 1 || ಪುಣ್ಯಭೂಮಿಯು ಇದುವೆ ಮೋಕ್ಷಭೂಮಿಯು ಶ್ರೇಷ್ಠ ಜೀವನಪದ್ಧತಿಯು ಜಗವನು ಶ್ರೇಷ್ಠತೆಗೊಯ್ಯಲು ನಾವು ಶಪಥವ ಮಾಡುವೆವು ಪವಿತ್ರ ಕಾರ್ಯದ ಸಾಧನೆಗಾಗಿ ತನು ಮನ […]
ಜಯ ಭಾರತ ಜಯ ಭಾರತ ಜಯ ಭಾರತವೆನ್ನಿರಿ ಜಗನ್ಮಾತೆ ಭಾರತಿಯ ಚರಣಕೆಲ್ಲ ನಮಿಸಿರಿ || ಪ || ಮಲಗಿರುವ ಹಿಂದುಗಳ ಎಚ್ಚರಿಸಿ ಏಳಿಸುವ ಸಂಘಶಕ್ತಿ ಬೆಳದಿಹ ವಿಶ್ವರೂಪ ತೋರಿಸುವ ನವಭಾರತ ನಿರ್ಮಾಣಕೆ ಒಂದಾಗಿ ದುಡಿಯುವ ಹಿಂದುಗಳ ಸಂಘಟಿಸಿ ಭಾರತವ ರಕ್ಷಿಸುವ || 1 || ಜಗಕೆಲ್ಲ ಕೊಡುವಂಥ ಜ್ಞಾನ ನಮ್ಮಲ್ಲಿರಲು ನಾವು ಹೀನ ದೀನರಲ್ಲ ಎಂದು ಜಗಕೆ ತೋರುವ ಜಗವನ್ನೇ ಗೆಲ್ಲುವಂಥ ಶಕ್ತಿ ಭುಜದಲ್ಲಿರಲು ನಮ್ಮ ಶೌರ್ಯದಿತಿಹಾಸ ಮತ್ತೊಮ್ಮೆ ಬರೆಯುವ || 2 || ಭಾಷೆ ವೇಷ […]
ಜಯ ಜಯ ಭಾರತ ದೇಶ || ಪ || ಮುಗಿಲನು ನಿಲುಕಿದ ಚೆಲುವು ಹಿಮಾಚಲ ಸಿಂಧು ಸುರನದಿ ಸದಮಲ ಸಲಿಲ ಎಡಬಿಡದೆಲೆ ನಿನ್ನಡಿ ತೊಳೆಯುತಲಿ ತುಂಬಿದೆ ಹಿಂದು ಮಹಾಸಾಗರ ಜಲ ನಿನ್ನಯ ಮೇಲ್ಮೆಯ ಗೆಲುವಿನ ಗುಡಿಯು ಮೆರೆಯಲಿ ದೇಶ ವಿದೇಶ || 1 || ಮಾ ಸ್ವತಂತ್ರ ನೀ ಸುತರಿಗೆ ಸತತ ನೀಡಿದೆ ಸದ್ಧರ್ಮದ ಜಯ ಪಂಥ ಅದರಿಂದಾಗಲಿ ಈ ಜಗ ಶಾಂತ ಸೌಖ್ಯ ಸಮೃದ್ಧ ಸ್ವತಂತ್ರವನಂತ ಮೈ ತಾಳುತ ಪುನಃ ಕೇಳ್ಬರಲಿಂದು ಗೀತೆಯ ಮಹದುಪದೇಶ || […]
ಜಯ ಜಯ ಜನ್ಮಭೂಮಿ ಜಯ ಜಯ ಜಯ ಭಾರತ ಭೂಮಿ || ಪ || ಆಕಾಶಗಂಗೆ ಇಳಿದು ಬಂದ ಭೂಮಿ ಶ್ರೀಕೃಷ್ಣಗೀತೆಯ ಅಮೃತವಿತ್ತ ಭೂಮಿ || ಅಪ || ಸ್ನೇಹದಕುಸುಮಮಾಲೆ ಧರಿಸಿದ ಭೂಮಿ ತ್ಯಾಗಿಗಳು ಜನಿಸಿರುವ ಪಾವನ ಭೂಮಿ ವೇದಾಂತ ಸಾರ ವಿಹಾರ ಪುಣ್ಯ ಭೂಮಿ ಭಾರತ ಭೂಮಿ ಭಾಸುರ ಭೂಮಿ || 1 || ಹೈಮಾದ್ರಿ ವಿಂಧ್ಯಗಳ ಉನ್ನತ ಭೂಮಿ ಕಾವೇರಿ ಗಂಗೆಗಳು ಹರಿಯುವ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತ ಭೂಮಿ ಭಾಸುರ […]
ಚೈತನ್ಯ ಮೂಡುತಿದೆ ಭಾರತದ ಬಾಂದಳದಿ ವಿಶ್ವಾಸ ಉದಿಸುತಿದೆ ಜನಮನದ ತಳದಲ್ಲಿ || ಪ || ಹೊಂಗನಸ ಹೊಂಬಿಸಿಲ ಪ್ರೇರಣೆಯ ಕಿರಣಗಳು ಸಾಕಾರ ಹೊಂದುತಿವೆ ಧನ್ಯತೆಯ ಪಡೆಯುತಿವೆ ದುಃಸ್ವಪ್ನಗಳ ತೆರದಿ ಅಲ್ಲಲ್ಲಿ ಗೋಚರಿಪ ದುಷ್ಕೃತ್ಯಗಳ ನಾಶ ಆಗಲಿದೆ ಧ್ರುವಸತ್ಯ || 1 || ಸ್ವಾರ್ಥತೊರೆದರ್ಪಣೆಯ ಭಾವಗಂಗೆಲಿ ಮಿಂದು ಧ್ಯೇಯವಸನವ ಧರಿಸಿ ಪ್ರೇಮ ಸುಮನಗಳಿಂದ ಮಾತೃ ಭೂ ಭಾರತಿಯ ಚರಣ ಸೇವಾವ್ರತದಿ ಕಟಿಬದ್ಧರಾಗೋಣ ಅರ್ಚನೆಗೆ ಅಣಿಯಾಗಿ || 2 ||
ಗಣವೇಷ ಎಂದರೆ ರೈಸಬೇಕು | ಕಂಡವರ ಕಣ್ಣು ಕೋರೈಸಬೇಕು ಮನಸು ತುಂಬಿ ಶುಭವ ಹಾರೈಸಬೇಕು || ಪ || ಹಾಲು ಬಿಳುಪಿನ ಅಂಗಿನ ತೋಳು ಮಡಿಸಿದ ಭಂಗಿ ಮೇಲಾಗಿ ಕಪ್ಪು ಶಿರವೇಷ | ಒಪ್ಪುವಂತೆ ಕಾಲಲ್ಲಿ ಕಪ್ಪು ಪದವೇಷ … ಪದವೇಷ ಧರಿಸಿ ಅರಿಯ ಜೈಸಬೇಕು || 1 || ನೀಟಾಗಿ ತೊಳೆದಿಟ್ಟ ಮಾಟಾಗಿ ಮಡಿಸಿಟ್ಟ ಖಾಕೀ ಬಣ್ಣದ ಅಂಗವಸ್ತ್ರ | ಧರಿಸಿದರೆ ಸಿಕ್ಕಂತೆ ಸಂಘದ ಸೂತ್ರ … ಸಂಘ ಸೂತ್ರದಲ್ಲಿ ಜಯವ ಗಳಿಸಬೇಕು || 2 […]
ಗಂಗಾ ಯಮುನಾ ಸಂಗಮ ಸಮತಲ ಭೂಮಿ ಸ್ವರ್ಗೀಯ ಸುಂದರ ಭೂಮಿ | ನಮ್ಮಿ ನಲ್ಮೆಯ ಭೂಮಿ | ಸ್ವತಂತ್ರ ಭಾರತ ಭೂಮಿ || ಪ || ಸಗರ ಸುಪುತ್ರರ ಸದ್ಗತಿ ದಾತನ ಸಾಹಸದೊಸಗೆಯ ಭೂಮಿ ಚಿನ್ನದ ತೆನೆಗಳ ಭೂಮಿ | ಉತ್ತರ ಭಾರತ ಭೂಮಿ | ಧರ್ಮಕ್ಷೇತ್ರದ ಭೂಮಿ || 1 || ದಕ್ಷಿಣ ಪಶ್ಚಿಮ ಪೂರ್ವಕೆ ಸಾಗರ | ಸಮುದ್ರ ಯೋಧನ ಭೂಮಿ | ಸುಭದ್ರ ಭಾರತ ಭೂಮಿ | ಪವಿತ್ರ ಭಾರತ ಭೂಮಿ | […]
ಕೇಳೋ ಗೆಣೆಯಾ, ಕೇಳೋ ಗೆಣೆಯಾ ನಿಂದ ಕೈಯ ನಾ ಜೋಡಿಸಿಕೊಂಡು ಭಾರತ ಮಾತೆಗೆ ಹೇಳುವೆ ಕಣಿಯಾ || ಪ || ಅನ್ನರಗಡು ಅಗತೈತಿ, ಬನ್ನ ಬಗಡು ಹೋಗತೈತಿ ಸಣ್ಣತನ ನೀಗತೈತಿ, ಸಣ್ಣ ಸಣ್ಣತನ ನೀಗತೈತಿ ಅಣ್ಣ ತಮ್ಮ ಒಂದಾಗತೈತಿ || 1 || ಹಿಂದುವಾದಿ ಹಿಂದ್ಯಾಕ ಆದಿ, ಮುಂದೆ ನಡೆದರೈತಿ ಹಾದಿ ನಿಂದಿರದ ಹಿಂಗ್ಯಕ ಬಿದ್ದಿ, ನೀ ನಿಂದಿರದ ಹಿಂಗ್ಯಕ ಬಿದ್ದಿ ಚಂದವಲ್ಲವೀ ಮಂಪರು ನಿದ್ದಿ || 2 || ತಲಿಗೆಡಿಸೋ ಬುದ್ಧಿ ಸಾಕ, ಛಲ ಬೇಕಾ […]
ಕೇಳದೊ ! ಗಿರಿಗಹ್ವರದಿಂದೇಳುತ ಗರ್ಜಿಸುತಿರುವ ಸಮೀರ ಭಾರತಮಾತೆಯ ಕಾವಲುಪ್ರಹರಿಯ ಪ್ರಲಯಂಕರ ಹೂಂಕಾರ || ಪ || ಚೇತನಚಿಲುಮೆಯ ಶತಶತ ಧಾರೆಯ ರುಂದ್ರ ಪ್ರವಾಹವೆ ಹರಿದು ವಿಘ್ನ ವಿರೋಧವ ತೇಲಿಸಿ ಮುಳುಗಿಸಿ ಕೊಳೆ ತೊಳೆಯುತ ಭೋರ್ಗರೆದು ನಾಡಿನ ನರನಾಡಿಗಳೊಳು ನಡೆದಿದೆ ನವ ವಿಪ್ಲವ ಸಂಚಾರ || 1 || ಕರಕರದಲಿ ಮಿಂಚಲಿ ಹೊರನೆಗೆಯಲಿ ಕಾಪಿನ ಖಡ್ಗ ಕಠಾರಿ ರಕ್ಷಿತವಾಗಲಿ ಶುಭಕೃತಿ ಸಂಸ್ಕೃತಿ ಅರಿದನುಜರ ಶಿರ ಹಾರಿ ಶಿಲೆ ಶಿಲೆ ಸಿಡಿದಿದೊ ಬಿರುಗಣ್ ಬಿಡಲಿದೆ ನರಸಿಂಹನ ಅವತಾರ || 2 […]
ಕಾವಿಯ ವರ್ಣದ ಧ್ವಜವೂ ನಮ್ಮ ಧ್ವಜವೂ ಭಾರತ ಮಾತೆಯ ಕೈಯೊಳಗಿರುವ ಹಿಂದೂವೀರರ ಸ್ಫೂರ್ತಿಯ ಧ್ವಜವಿದು || ಪ || ಹಿಂದೂಸ್ಥಾನವನೇಕೀಕರಿಸುವ ಅಮರಾಕಾಂಕ್ಷೆಯ ಕೇಂದ್ರವಿದು ತ್ಯಾಗದ ಶೌರ್ಯದ ತೇಜದಿ ಬೆಳಗುವ || 1 || ಉಜ್ವಲ ದೇಶದ ಪರಂಪರೆಯನು ಬೆಳಗುವ ನಾಡಿನ ಸೂರ್ಯವಿದು ಪವಿತ್ರ ಗುಡಿಗಳ ಶಿಖರದ ಮೇಲಿನ || 2 || ಪ್ರತಾಪ ಶಿವರಾ ಮಾನದ ಬಿಂದು ವಿಜಯಾನಗರದ ತೇಜವಿದು ಹಿಂದೂವಿಜಯದ ಚಿಹ್ನೆಯಿದು ನಮ್ಮ || 3 || ನಾಡಿನ ವೈಭವ ಸಾಧಿಸಲಿಂದು ಮಾರ್ಗವ ತೋರುವ ದೀಪವಿದು […]