ಗಣವೇಷ ಎಂದರೆ ರೈಸಬೇಕು

ಗಣವೇಷ ಎಂದರೆ ರೈಸಬೇಕು | ಕಂಡವರ ಕಣ್ಣು ಕೋರೈಸಬೇಕು
ಮನಸು ತುಂಬಿ ಶುಭವ ಹಾರೈಸಬೇಕು || ಪ ||

ಹಾಲು ಬಿಳುಪಿನ ಅಂಗಿನ ತೋಳು ಮಡಿಸಿದ ಭಂಗಿ
ಮೇಲಾಗಿ ಕಪ್ಪು ಶಿರವೇಷ | ಒಪ್ಪುವಂತೆ
ಕಾಲಲ್ಲಿ ಕಪ್ಪು ಪದವೇಷ …
ಪದವೇಷ ಧರಿಸಿ ಅರಿಯ ಜೈಸಬೇಕು || 1 ||

ನೀಟಾಗಿ ತೊಳೆದಿಟ್ಟ ಮಾಟಾಗಿ ಮಡಿಸಿಟ್ಟ
ಖಾಕೀ ಬಣ್ಣದ ಅಂಗವಸ್ತ್ರ | ಧರಿಸಿದರೆ
ಸಿಕ್ಕಂತೆ ಸಂಘದ ಸೂತ್ರ …
ಸಂಘ ಸೂತ್ರದಲ್ಲಿ ಜಯವ ಗಳಿಸಬೇಕು || 2 ||

ಉಜ್ಜುಜ್ಜಿ ಹೊಳಪಿಸಿ ರೊಜ್ಜೆಲ್ಲ ತೊಲಗಿಸಿ
ಸಜ್ಜಾಗಿಸಿದ ಕೆಂಪು ಪಟ್ಟಿ | ಸೊಂಟ ಸುತ್ತ
ಬದ್ಧ ಸಂಕಲ್ಪದಿ ಕಟ್ಟಿ…
ಸಂಕಲ್ಪವನ್ನು ಪೂರೈಸಬೇಕು || 3 ||

Leave a Reply

Your email address will not be published. Required fields are marked *

*

code