ಚೈತನ್ಯ ಮೂಡುತಿದೆ ಭಾರತದ ಬಾಂದಳದಿ

ಚೈತನ್ಯ ಮೂಡುತಿದೆ ಭಾರತದ ಬಾಂದಳದಿ
ವಿಶ್ವಾಸ ಉದಿಸುತಿದೆ ಜನಮನದ ತಳದಲ್ಲಿ || ಪ ||

ಹೊಂಗನಸ ಹೊಂಬಿಸಿಲ ಪ್ರೇರಣೆಯ ಕಿರಣಗಳು
ಸಾಕಾರ ಹೊಂದುತಿವೆ ಧನ್ಯತೆಯ ಪಡೆಯುತಿವೆ
ದುಃಸ್ವಪ್ನಗಳ ತೆರದಿ ಅಲ್ಲಲ್ಲಿ ಗೋಚರಿಪ
ದುಷ್ಕೃತ್ಯಗಳ ನಾಶ ಆಗಲಿದೆ ಧ್ರುವಸತ್ಯ || 1 ||

ಸ್ವಾರ್ಥತೊರೆದರ್ಪಣೆಯ ಭಾವಗಂಗೆಲಿ ಮಿಂದು
ಧ್ಯೇಯವಸನವ ಧರಿಸಿ ಪ್ರೇಮ ಸುಮನಗಳಿಂದ
ಮಾತೃ ಭೂ ಭಾರತಿಯ ಚರಣ ಸೇವಾವ್ರತದಿ
ಕಟಿಬದ್ಧರಾಗೋಣ ಅರ್ಚನೆಗೆ ಅಣಿಯಾಗಿ || 2 ||

Leave a Reply

Your email address will not be published. Required fields are marked *

*

code