ಜಯ ಭಾರತ ಜಯ ಭಾರತ

ಜಯ ಭಾರತ ಜಯ ಭಾರತ ಜಯ ಭಾರತವೆನ್ನಿರಿ
ಜಗನ್ಮಾತೆ ಭಾರತಿಯ ಚರಣಕೆಲ್ಲ ನಮಿಸಿರಿ || ಪ ||

ಮಲಗಿರುವ ಹಿಂದುಗಳ ಎಚ್ಚರಿಸಿ ಏಳಿಸುವ
ಸಂಘಶಕ್ತಿ ಬೆಳದಿಹ ವಿಶ್ವರೂಪ ತೋರಿಸುವ
ನವಭಾರತ ನಿರ್ಮಾಣಕೆ ಒಂದಾಗಿ ದುಡಿಯುವ
ಹಿಂದುಗಳ ಸಂಘಟಿಸಿ ಭಾರತವ ರಕ್ಷಿಸುವ || 1 ||

ಜಗಕೆಲ್ಲ ಕೊಡುವಂಥ ಜ್ಞಾನ ನಮ್ಮಲ್ಲಿರಲು
ನಾವು ಹೀನ ದೀನರಲ್ಲ ಎಂದು ಜಗಕೆ ತೋರುವ
ಜಗವನ್ನೇ ಗೆಲ್ಲುವಂಥ ಶಕ್ತಿ ಭುಜದಲ್ಲಿರಲು
ನಮ್ಮ ಶೌರ್ಯದಿತಿಹಾಸ ಮತ್ತೊಮ್ಮೆ ಬರೆಯುವ || 2 ||

ಭಾಷೆ ವೇಷ ಜಾತಿಮತ ಬೇರೆ ಬೇರೆಯಾದರು
ಒಳಜಗಳದ ಉಸಿರಿಲ್ಲ, ಹೊಡೆದಾಟದ ದೃಶ್ಯವಿಲ್ಲ
ನಾನು ನನ್ನದೆಂಬ ಮೋಹ ಎನಿತು ಇಲ್ಲ ಇಲ್ಲ
ಒಂದೇ ಹಿಂದು ಸಂಸ್ಕೃತಿ, ನಮ್ಮ ಬಾಳ್ಗೆ ಸದ್ಗತಿ || 3 ||

Leave a Reply

Your email address will not be published. Required fields are marked *

*

code