ಕಾವಿಯ ವರ್ಣದ ಧ್ವಜವೂ ನಮ್ಮ ಧ್ವಜವೂ
ಭಾರತ ಮಾತೆಯ ಕೈಯೊಳಗಿರುವ
ಹಿಂದೂವೀರರ ಸ್ಫೂರ್ತಿಯ ಧ್ವಜವಿದು || ಪ ||
ಹಿಂದೂಸ್ಥಾನವನೇಕೀಕರಿಸುವ
ಅಮರಾಕಾಂಕ್ಷೆಯ ಕೇಂದ್ರವಿದು
ತ್ಯಾಗದ ಶೌರ್ಯದ ತೇಜದಿ ಬೆಳಗುವ || 1 ||
ಉಜ್ವಲ ದೇಶದ ಪರಂಪರೆಯನು
ಬೆಳಗುವ ನಾಡಿನ ಸೂರ್ಯವಿದು
ಪವಿತ್ರ ಗುಡಿಗಳ ಶಿಖರದ ಮೇಲಿನ || 2 ||
ಪ್ರತಾಪ ಶಿವರಾ ಮಾನದ ಬಿಂದು
ವಿಜಯಾನಗರದ ತೇಜವಿದು
ಹಿಂದೂವಿಜಯದ ಚಿಹ್ನೆಯಿದು ನಮ್ಮ || 3 ||
ನಾಡಿನ ವೈಭವ ಸಾಧಿಸಲಿಂದು
ಮಾರ್ಗವ ತೋರುವ ದೀಪವಿದು
ನಮ್ಮೀ ಜೀವನ ಪಾವನಗೊಳಿಸುವ || 4 ||