ಜೈಜೈ ಎನುತಾ ಹಿಂದು ಧರ್ಮಕೆ ಜೈ ಎನುತಾ

ಜೈ ಜೈ ಎನುತಾ ಹಿಂದು ಧರ್ಮಕೆ ಜೈ ಎನುತಾ
ವಿಶ್ವಧರ್ಮಕೆ ಜೈ ಎನುತಾ
ಬನ್ನಿರಿ ಬೆಳಗುವ ಸಂಘಜ್ಯೋತಿಯ ಮನೆ ಮನೆಗಳಿಗೀಗ || ಪ ||

ನಮ್ಮ ನಾಡಿದು ನಮ್ಮ ಹೊನ್ನಿನ ಬೀಡಿದು ನಮ್ಮ ಹೃದಯವ ಕರೆದಿಹುದು
ಜಗವನು ಬೆಳಗಿದ ಋಷಿಗಳ ಆಧ್ಯಾತ್ಮದ ತವರೂರು
ಶೌರ್ಯದಿ ಕೆಚ್ಚದಿ ಕಾದಿಹ ವೀರರ ಸ್ಮರಿಸುತ ಸಾಗುವೆವು || 1 ||

ಪುಣ್ಯಭೂಮಿಯು ಇದುವೆ ಮೋಕ್ಷಭೂಮಿಯು ಶ್ರೇಷ್ಠ ಜೀವನಪದ್ಧತಿಯು
ಜಗವನು ಶ್ರೇಷ್ಠತೆಗೊಯ್ಯಲು ನಾವು ಶಪಥವ ಮಾಡುವೆವು
ಪವಿತ್ರ ಕಾರ್ಯದ ಸಾಧನೆಗಾಗಿ ತನು ಮನ ಅರ್ಪಿತವು || 2 ||

ನೊಂದವರು ಇಂದು ಜಾಗೃತರಾಗಿಹೆವು, ನಾವು ಗೆಲ್ಲಲು ಅರಿತಿಹೆವು
ಶತಶತಮಾನದ ಜ್ಞಾನವು ನಮ್ಮದು ಪಡೆಯುತ ಸಾಗುವೆವು
ಜಗದಲ್ಲಿ ಹಿಂದುತ್ವದ ಬೆಳಗುತಿಹ ರಾಷ್ಟ್ರದ ಸೇವಕರು…. || 3 ||

ನಮ್ಮ ಶಾಖೆಯು ಸಂಸ್ಕಾರವ ನೀಡುವುದು, ಉತ್ತಮ ಗುಣಗಳ ಕಲಿಸುವುದು
ಧೈರ್ಯ ಸಾಹಸ ಸ್ಪೂರ್ತಿ ಪರಿಶ್ರಮ – ತಾಳ್ಮೆಯ ಬೆಳೆಸುವುದು
ಧ್ಯೇಯದ ಸಾಧನೆ ಸಾಧಕವಾಗುವ ಸ್ಫೂರ್ತಿಯ ಕೊಡುತಿಹುದು || 4 ||

Leave a Reply

Your email address will not be published. Required fields are marked *

*

code