ಏಳಿ ಎಚ್ಚರಗೊಳ್ಳಿ ಕೆಚ್ಚೆದೆಯ ಕಲಿಗಳೇ

ಏಳಿ ಎಚ್ಚರಗೊಳ್ಳಿ ಕೆಚ್ಚೆದೆಯ ಕಲಿಗಳೇ
ನೆತ್ತರೋಕುಳಿಯಲ್ಲಿ ನಾಟ್ಯವಾಡೆ
ತಾಯೆದೆಯ ರಂಗದಲಿ ಬಾಳನೆತ್ತವನಾಡಿ
ಹಗೆಯ ತಲೆ ನಗ್ಗೊತ್ತಿ ಮೆಟ್ಟಲಿಂದೇ || ಪ ||

ಎತ್ತಿಹಿಡಿ ಹೊಸಕಹಳೆ ಒತ್ತೊತ್ತಿ ಊದಿಬಿಡಿ
ನಾಡನಾಡಿಯನೆಲ್ಲ ಮಿಡಿಯುವಂತೆ
ನೂತ್ನ ಚೇತನ ವಹ್ನಿ ಪ್ರಜ್ವಲಿಸಿ ಪಸರಿಸಲಿ
ಸತ್ತಮನ ಮೈವೊದರಿ ಸಿಡಿಯುವಂತೆ || 1 ||

ವೈರಿ ಸಾಗರವಿರಲಿ ನೀನಗಸ್ತ್ಯನೆ ಆಗು
ಆಪೋಶನಂ ಗೈಯ್ಯೆ ಚುಳಕದಲ್ಲೇ
ತೂಗು ಪುರುಷವನಿಂದೆ ಹೆರರ ದಬ್ಬಾಳಿಕೆಗೆ
ಏಣಿಗಣ್ಚಾಸಿರಂ ಉರುಳಲಿಲ್ಲೇ || 2 ||

ಹಿಮವಂತನುನ್ನತಿಯ ತುಂಗಶೃಂಗದ ಮುಕುಟ
ಸಿಡಿದೊಡೆದು ಹುಡಿಗೊಂಬ ಕಾಲವಿಂದು
ಬಡತನವೋ, ಒಡೆತನವೋ ನುಡಿಯು ನೂರಾಗಿರಲಿ
ಒಂದಾಗಿ ಬನ್ನಿರೈ ಗುಡಿಯೆತ್ತಲೆಂದು || 3 ||

Leave a Reply

Your email address will not be published. Required fields are marked *

*

code