ಏಳಿ ಎದ್ದೇಳಿ, ನಿಲ್ಲದಿರಿ ಗುರಿಮುಟ್ಟುವ ತನಕ ಏಳಿ ಎದ್ದೇಳಿ || ಪ ||
ಭಾರತಮಾತೆಯ ಪ್ರೀತಿಯ ಮಕ್ಕಳು ನಿದ್ರಾಪರವಶರಾಗಿಹರು
ನಿದ್ರಿಸುತಿರುವೀ ಬಂಧುವನೆಲ್ಲಾ ನಾವೆ ಎಚ್ಚರಗೊಳಿಸಲೇಬೇಕು || 1 ||
ಮಾತೃಭೂಮಿಯ, ದೇಶಧರ್ಮದ ಭ್ರಾತೃಭಾವವ ಕ್ಷಾತ್ರ ತೇಜವ
ಮರೆತು ನಿದ್ರಿಸುತಿರುವೀ ಬಂಧುವ ನಾವೇ ಎಚ್ಚರಗೊಳಿಸಲೇಬೇಕು || 2 ||
ಪ್ರಾಂತ ಭೇದದಿ, ಪಕ್ಷ ಭೇದದಿ, ಜಾತಿ ಭೇದದಿ ಭಾಷಾ ಭೇದದಿ
ಜಗಳವನಾಡುತಲಿರುವೀ ಜನರನು ನಾವೇ ಎಚ್ಚರಗೊಳಿಸಲೇಬೇಕು || 3 ||
ನಿದ್ದೆಯ ಮಾಡುವ, ಸಮಯವಿದಲ್ಲವು ಜಾಗೃತಿಗೈಯುವ ಪರ್ವಕಾಲವಿದು
ಹಿಂದುಬಂಧುಗಳೆಲ್ಲರನು ನಾವೇ ಎಚ್ಚರಗೊಳಿಸಲೇಬೇಕು || 4 ||