ಒಂದುಗೂಡುವಾ ಮುಂದೆ ಸಾಗುವಾ

ಒಂದುಗೂಡುವಾ ಮುಂದೆ ಸಾಗುವಾ
ಬಂಧು ಭಾವದಿಂದ ಸೇರುವಾ
ಹಿಂದುಭೂಮಿ ಸೇವೆ ಗೈಯ್ಯುವಾ || ಪ ||

ಅಂದು ತುಂಬಿ ತುಳುಕುತಿದ್ದ ಧನ ಧಾನ್ಯವೆತ್ತ ಸಾಗಿದೆ
ಇಂದು ಜನತೆ ಅರ್ಧ ನಗ್ನವಾಗಿ ಬಡವಾಗಿದೆ
ದುಡಿದು ಬೇಗ ಫಲವ ಗಳಿಸುವಾ
ತಾಯಿನಾಡನು ಸಮೃದ್ಧಿಗೊಳಿಸುವಾ || 1 ||

ವಿಮಲ ಶೀಲ ದಿವ್ಯ ವಿದ್ಯೆ ಕಲೆಗಳೆಲ್ಲಿ ಪೋದವೂ ?
ಭ್ರಮೆಯ ಹೊಂದಿ ಪರರ ಬಲೆಗೆ ಸಿಲುಕಿ ದೀನರಾದೆವೂ
ಮರಳಿ ಜ್ಞಾನವನ್ನು ಪಡೆಯುವಾ
ನಾವ್ ಧರೆಯ ಜನಕೆ ನಯದಿ ನೀಡುವಾ || 2 ||

ವೀರ ಧೀರರಾರ್ಯರತುಲ ತ್ಯಾಗ ಶೌರ್ಯವೆಲ್ಲಿದೆ ?
ಭಾರತ ವಿಚ್ಛೇದವಾಯ್ತು ಗೌರವವೇ ಇಲ್ಲದೆ
ದೇಶ ಭಕ್ತರೆದ್ದು ತುಂಬಲೀ
ಸಂತೋಷದಿಂದ ನೀಡಲೀ ಬಲಿ || 3 ||

ಹಿಂದೆ ಸತ್ವದಿಂದ ಮೆರೆದ ಧರ್ಮ ಲೋಪವಾಗಿದೆ
ಬಂಧು ಭಾವ ಮಾಯವಾಗಿ ನ್ಯಾಯನೀತಿ ನೀಗಿದೆ
ಹಿಂದು ತತ್ವವನ್ನು ಜ್ವಲಿಸುವಾ
ಅತಿ ಚಂದದಿಂದ ಜಗವನೊಲಿಸುವಾ || 4 ||

ದಿವ್ಯ ಭಗವ ಸೂರ್ಯನಿಗೆ ಕಾಲಮೇಘ ಮುಸುಕಿದೆ
ಭವ್ಯಶಾಲಿ ಅಮರ ತತ್ವ ತೇಜವೆಲ್ಲ ಮುಸುಕಿದೆ
ಅರುಣಕೇತು ನಭದಿ ನಲಿಯಲೀ
ಈ ಭರತ ವರ್ಷ ಜಗದಿ ಮೆರೆಯಲೀ || 5 ||

Leave a Reply

Your email address will not be published. Required fields are marked *