ಯಾವನಯ್ಯ ಇವ

ಯಾವನಯ್ಯ ಇವ ಯಾವನಯ್ಯ ಇವ
ಯಾವನಯ್ಯ ಇವನು ?
ನಮ್ಮ ಸಂಘದವನು || ಪ ||

ಸಂಘ ಅನ್ನುತಾನೆ ಶಾಖೆ ಅನ್ನುತಾನೆ ಬನ್ನಿ ಅನ್ನುತಾನೆ
ಹೆಂಗೊ ಮಾತಾಡಿ ಸಣ್ಣ ದೊಡ್ಡವರ ಒಂದು ಮಾಡತಾನೆ |
ಹಿಂಗೆ ಎಲ್ಲರನು ಮರಳು ಮಾಡುವ ಯಾವನಯ್ಯ ಇವನು
ಯಾವನಲ್ಲ ಇವ ಹೇಳತೀನಿ ಕೇಳ ನಮ್ಮ ಸಂಘದವನು || 1 ||

ರೊಕ್ಕದಾಸೆ ಇವಗಿಟ್ಟು ಇಲ್ಲ | ಇವ ಸೊಕ್ಕಿನವನು ಅಲ್ಲ
ಸಿಕ್ಕ ಸಿಕ್ಕವರ ಕರೆದು ಮಾತಾಡಿ ನಕ್ಕು ನಗಿಸಬಲ್ಲ |
ಮಕ್ಕಳಾಟಿಕೆಯೋ ಮಾಟಮಂತ್ರವೋ ಯಾವನಯ್ಯ ಇವನು
ಯಾವನಲ್ಲ ಇವ ಹೇಳತೀನಿ ಕೇಳ ನಮ್ಮ ಸಂಘದವನು || 2 ||

Leave a Reply

Your email address will not be published. Required fields are marked *

*

code