ಇದೋ ಶ್ರದ್ಧಾಂಜಲಿ

ಇದೋ ಶ್ರದ್ಧಾಂಜಲಿ ರಾಷ್ಟ್ರಪುರುಷ – ಶತ –
ಕೋಟಿ ಹೃದಯಗಳ ಸಮವರಳುತಿವೆ |
ಈ ದಿನ ನಿಮ್ಮಯ ಪೂಜಾ ಕಾರ್ಯಕೆ
ಸೇತು ಹಿಮಾಚಲ ಸಂಗಮಿಸುತಿವೆ || ಪ ||

ಮಾತೆಯ ಪದ ಪದ್ಮಾಂಚಲದಲಿ ನೀ
ಅಮೂಲ್ಯಕಾಣಿಕೆ ಅರ್ಪಿಸಿದೆ |
ಅಕ್ಷಯ ಚಿರ ಸತ್ಯವ ನುಡಿದೆ
ಹಿಂದುತ್ವಕೆ ಅಮೃತವ ಉಣ್ಣಿಸಿದೆ |
ತವ ಸಂಸ್ಕಾರವು ಸೃಜಿಸಿದ ತನುಮನ
ಅಭೇದ್ಯ ಕೋಟೆಗಳೋ ಎನಿಸುತಿವೆ || 1 ||

ನಡೆದೇ ಸದಾ ಕಠೋರ ನಿಯಮದಿ
ಲೋಕಪ್ರಸಿದ್ಧಿ ಪರಾಙ್ಮುಖ ಪಥದಿ
ನಿಶ್ಚಲ ನಿಲುವಿನ ಸಾಧಕನೆನಿಸಿದೆ
ಹಿಂದೂ ರಾಷ್ಟ್ರದ ಭೀಷ್ಮನ ತೆರದಿ
ಪೂಜ್ಯನೆ ನಿನ್ನಯ ಘೋರತಪಸ್ಯೆಯ
ಸುಮಧುರ ಫಲಗಳು ನಳನಳಿಸುತಿವೆ || 2 ||

ಅಜಾತವೈರಿ ಹೇ ಲೋಕಸಂಗ್ರಹಿ
ಸಂಘಶಕ್ತಿಯಾ ಮಂತ್ರಮಹರ್ಷಿ
ಮೌನದಿ ತಣಿದರು ಪ್ರತಿಪಕ್ಷಿಗಳು
ಏನಿದು ಅಚ್ಚರಿ ಯಾವುದು ಮೋಡಿ
ಆಲಿಸಿ ನಿನ್ನಯ ಪಾವನ ಚರಿತೆಯ
ಕೋಟಿ ಹೃದಯಗಳ ಶಿಲೆ ಕರಗುತಿವೆ || 3 ||

ಈ ದಿನ ನಿನ್ನಯ ಪಾರ್ಥಿವ ಪ್ರತಿಮೆಯು
ಚರ್ಮ ಚಕ್ಷುವಿಗೆ ಗೋಚರವಾಗದು
ಕೋಟಿ ಕೋಟಿ ಹೃನ್ಮಂದಿರದಲಿ ತವ
ದಿವ್ಯ ಮೂರುತಿಯು ನೆಲೆಯಾಗಿಹುದು
ತೇಜೋಮಯ ತವ ಪ್ರತಿಬಿಂಬಗಳೋ
ಅಗಣಿತ ರೂಪದಿ ಹೊರಹೊಮ್ಮುತಿವೆ || 4 ||

(ಡಾಕ್ಟರಜೀ ಬಗ್ಗೆ ಹಿಂದಿ ಹಾಡು ’ಲೋ ಶ್ರದ್ಧಾಂಜಲಿ’ ಯ ಕನ್ನಡಾನುವಾದ)

Leave a Reply

Your email address will not be published. Required fields are marked *

*

code