ಜಾತಿಭೇದಭಾವ ಬಿಟ್ಟು

ಜಾತಿಭೇದಭಾವ ಬಿಟ್ಟು ಪಂಥಪಂಗಡಾಚೆ ಇಟ್ಟು
ನಾವು ಹಿಂದು ನಾವು ಬಂಧು ಎಂದು ಸಾರಿರಿ
ಹಿಂದು ದೇಶ ಹಿಂದು ಧರ್ಮ ಹಿಂದುವಾಗಿ ಉಳಿಯಲೆಂದು
ಸಂಘ ಸೇರಿ ಹಿಂದು ಬಂಧು ಒಂದಾಗಿರಿ || ಪ ||

ರಾಮ ಮತ್ತೆ ಹುಟ್ಟಿ ಬರಲಿ, ಕೃಷ್ಣನಾಗಿ ಧರ್ಮ ತರಲಿ
ಧರ್ಮಗಂಭ ಮೇಲೆ ನಮ್ಮ ರಾಷ್ಟ್ರ ಕಟ್ಟಲಿ
ನಮ್ಮ ದೇಶ ನಮ್ಮ ನಾಡು ನಮ್ಮದಾಗಿ ಉಳಿಯಲೆಂದು
ನಮ್ಮತನವ ಬೆಳೆಸಲೆಂದು ಬಂದು ಸೇರಿರಿ || 1 ||

ಹರಿಹರಾದಿ ಭಕ್ತರೆಲ್ಲ ಒಂದೇ ತಾಯಿ ಮಕ್ಕಳೆಲ್ಲಾ
ತಾಯಿ ಭಾರತಾಂಬೆಯನ್ನು ಕೂಡಿ ನಮಿಸಿರಿ
ಮೇಲು ಕೀಳು ಮೆಟ್ಟಿ ಹಾಕಿ ಅಸ್ಪೃಶ್ಯತೆ ಸುಟ್ಟುಹಾಕಿ
ಸಪ್ತಗಿರಿಯ ಹಾಗೆ ಗಟ್ಟಿಯಾಗಿ ನಿಲ್ಲಿರಿ || 2 ||

ಹಿಂದು ಜನರ ಸಹನೆ ಸಿರಿಯ ದುಷ್ಟಶಕ್ತಿ ಕನ್ನಹಾಕಿ
ಕಬಳದಂತೆ ಧರ್ಮಸಿರಿಯ ರಕ್ಷೆ ಮಾಡಿರಿ
ದೈತ್ಯಶಕ್ತಿ ಮೆಟ್ಟಿಹಾಕಿ ದೇಶ ಧಕ್ಕೆ ಆಗದಂತೆ
ಎಚ್ಚರಾಗಿ ಹಿಂದು ಜನರೇ ಎದ್ದು ನಿಲ್ಲಿರಿ || 3 ||

Leave a Reply

Your email address will not be published. Required fields are marked *

*

code