ಇಂದು ನಿನ್ನಯ ಸರ್ವದೇವರು

ಇಂದು ನಿನ್ನಯ ಸರ್ವ ದೇವರು ಹಿಂದು ಹೆಸರಿನ ಬಂಧು ಜನರು || ಪ || ಚರಿತೆ ಮರೆಯುತಲಂಧರಾಗಿಹ ಅವರೆ ಇಂದಿನ ಮಾತ ಪಿತರು ಸ್ವಾರ್ಥ ಕಲಹದಿ ರಾಷ್ಟ್ರ ಮರೆಯುತ ಪೂರ್ಣ ವೈಭವದಿಂದಲುರುಳಿ ಕಣ್ಣ ತೆರೆಸುವ ನೀತಿ ಕಲಿಸುವ ಜ್ವಾನದಾತರು ಗುರುವರ್ಯರು ಕಣ್ಗೆ ಕಾಣುವುದೊಂದೆ ದೇವರು ಭವ್ಯ ಜಾತಿಯ ದಿವ್ಯ ನರರು || 1 || ಶಾಲಿವಾಹನ ಶ್ವೇತವಾಹನ ಭೀಮ ಭೀಷ್ಮರ ಸಂಜಾತರು ಬಾಣ ಚದುರರ ದಾನಶೂರರ ದ್ರೋಣ ಕರ್ಣರ ಸಂತಾನರು ಪತಿತ ಪಾಮರ ದೀನ ಹೀನರ ನಿನ್ನ […]

Read More

ಆ ಹಿಂದು ಮಹೋದಧಿಯೆದೆಯಾಳದ ಒಳಗೆ

ಆ ಹಿಂದು ಮಹೋದಧಿಯೆದೆಯಾಳದ ಒಳಗೆ ಅಪಮಾನದ ಜ್ವಾಲಾಮುಖಿ ಧಗಧಗಿಸುತಿದೆ ಸಾಗರದೊಳಗೇರಿಳಿಯುವ ಹೆದ್ದೆರೆಗಳಲಿ ಅಲೆಯಲೆಯೊಳಗೂ ತುಂಬಿಹುದಾಕ್ರಂದನವು || ಪ || ಗಂಗಾಧರೆಯು ಪ್ರಶ್ನೆಯನೆಸೆಯುತಲಿಹುದು ಸಗರನ ಸುತರನು ಮೀರಿಸಿ ಮೃತವಾಯಿತೆ ಧರ್ಮದ ಕರ್ಮದ ನೆಲೆಮನೆ ಭಾರತವಿಂದು ? ಸಿಂಧೂಧಾರೆಯು ಬಿಸುಸುಯ್ಯುತಲಿಹುದು ತನ್ನನು ಭಂಗಿಸಿದವರಜ್ಞಾನಕೆ ನೊಂದು || 1 || ಜನನಿಯ ಶೋಕವ ಪರಿಹರಿಸದೆ ಬದುಕಿದ ಪುತ್ರರ ಬಾಳಿಗೆ ಶತಶಾಪಗಳಿರಲೆಂದು ಸುಖ ಸವಿಭೋಗದ ಮೋಹದಿ ನಿದ್ರಿಸುತಿಹ ಜನರಾಯುಷ್ಯವು ಸಾರ್ಥಕರಹಿತವದೆಂದು ಶಪಿಸುತಲಿದೆ ಭೂಗಗನಳಿಂದು || 2 || ಗತ ವಿಭವಂಗಳೊಳಭಿಮಾನವ ತಳೆದು ಭವ್ಯ […]

Read More

ಅವನ ಸ್ಮೃತಿಗಳು ಕೊನರಿ

ಅವನ ಸ್ಮೃತಿಗಳು ಕೊನರಿ ಕವನ ಕುಸುಮಗಳರಳಿ ಚೈತ್ರ ಚೇತನದೆದುರು ಜಡ ಸಮಾಧಿ ಹಸಿರಾದ ಭಾವಗಳ ಹೊಸ ಬೆಳಕಿನಲಿ ಬೆಳೆಸಿ ದೃಢಗೊಳಿಸ ಬಂತಿದೋ ಹೊಸ ಯುಗಾದಿ ಅವನ ನೆನಪಿಗೆ ಬಂತೊ ಹೊಸ ಯುಗಾದಿ || ಪ || ಭೀಮಕಾಯದ ಸುಮನ ಕೋಮಲ ಕಮನೀಯ ಮೆಚ್ಚುಗೆಯ ಬಿಟ್ಟಿರುವ ಲೋಕ ಕುಣಿಸಿ ಹತ್ತಿರಕೆ ಕರೆದು ನೀನಾರೆಂದು ಏಕೆಂದು ಹೊಚ್ಚ ಹೊಸ ತನು ತೊಡಿಸಿ, ಉಣಿಸಿ, ಮಣಿಸಿ, ಎತ್ತರಕೆ ಬೆಳೆದವನ ನೆನಪಿದೋ ನಾಡಿನಲಿ ಲೋಕ ಕಂಡಿದೆ ಇಲ್ಲಿ ಹೊಸದು ಹಾದಿ || 1 […]

Read More

ಅಧರ್ಮ ಆಸುರಿ ವೃತ್ತಿಯನಳಿಸುವ

ಅಧರ್ಮ ಆಸುರಿ ವೃತ್ತಿಯನಳಿಸುವ ಧರ್ಮೋದ್ಧಾರವೇ ನಮ್ಮ ಮತ ಸಾವಿನ ಮುಖದಲು ಅಂಜದೆ ಅಳುಕದೆ ಅಂತಿಮ ವಿಜಯವು ನಮ್ಮ ಮತ || ಪ || ಕಾದಾಡುವ ಕೈಗೊಂಡ ಗುರಿಯನು ಮುಟ್ಟುವುದೇ ನಿಜ ಪುರುಷಾರ್ಥ ರಾಮ ಕೃಷ್ಣ ವಿದ್ಯಾರಣ್ಯರು ವೀರ ಶಿವಾಜಿಯ ಸಫಲವ್ರತ || 1 || ನಮ್ಮೀ ರಾಷ್ಟ್ರದ ಧರ್ಮ ಸಂಸ್ಕೃತಿಯ ವಿಸ್ತಾರಕೆ ಮೇಣ್ ರಕ್ಷಣೆಗೆ ರಾಷ್ಟ್ರ ಜೀವನವ ಸಂಪದಗೊಳಿಸುವ ಸಾಮರ್ಥ್ಯದ ಹಿರಿಗುರಿಯೆಡೆಗೆ || 2 || ಮಹಾನವಮಿಯ ಶಸ್ತ್ರ ಪೂಜೆಯಿದು ಶಕ್ತಿಯ ಘನತರ ಸಂದೇಶ ಎದೆಗುಂದದೆ ಮುನ್ನಡೆಯುತ […]

Read More

ಹೊಸಮಾನದ ಶತಮಾನದ ಹಾಡು

ಹೊಸಮಾನದ ಶತಮಾನದ ಹಾಡು ಮಾರ್ದನಿಸುತಲಿದೆ ದೆಸೆದೆಸೆಗೆ ಮಾನವತೆಗೆ ಹಿಂದುತ್ವವೆ ಶಿರ ಏರುತ ಬಾ ಹೊಸ ಸಾಧನೆಗೆ ಹಿಂದೂ ಧರ್ಮಾರಾಧನೆಗೆ || ಪ || ಋಷಿಗಳ ಉಸಿರಲಿ ಸತ್ಯವೆ ಬದುಕು ದೊರೆವುದರಿವು ಬೆಳಕು ನಶಿಸಲಿ ನಡೆಯಲಿ ವಿರಸದ ಪಲುಕು ಸಮರಸತೆಯ ಬದುಕು ಸಂಗಚ್ಛಧ್ವಂ ಮಂತ್ರದ ಧ್ವನಿಯು ಮಾರ್ದನಿಸುತಲಿದೆ ದೆಸೆದೆಸೆಗೆ ಮಾನವತೆಗೆ ಹಿಂದುತ್ವವೆ ಶಿಖರ ಏರುತ ಬಾ ಹೊಸ ಸಾಧನೆಗೆ ಹಿಂದೂ ಧರ್ಮದಾರಾಧನೆಗೆ || 1 ||

Read More

ಯಾವನಯ್ಯ ಇವ

ಯಾವನಯ್ಯ ಇವ ಯಾವನಯ್ಯ ಇವ ಯಾವನಯ್ಯ ಇವನು ? ನಮ್ಮ ಸಂಘದವನು || ಪ || ಸಂಘ ಅನ್ನುತಾನೆ ಶಾಖೆ ಅನ್ನುತಾನೆ ಬನ್ನಿ ಅನ್ನುತಾನೆ ಹೆಂಗೊ ಮಾತಾಡಿ ಸಣ್ಣ ದೊಡ್ಡವರ ಒಂದು ಮಾಡತಾನೆ | ಹಿಂಗೆ ಎಲ್ಲರನು ಮರಳು ಮಾಡುವ ಯಾವನಯ್ಯ ಇವನು ಯಾವನಲ್ಲ ಇವ ಹೇಳತೀನಿ ಕೇಳ ನಮ್ಮ ಸಂಘದವನು || 1 || ರೊಕ್ಕದಾಸೆ ಇವಗಿಟ್ಟು ಇಲ್ಲ | ಇವ ಸೊಕ್ಕಿನವನು ಅಲ್ಲ ಸಿಕ್ಕ ಸಿಕ್ಕವರ ಕರೆದು ಮಾತಾಡಿ ನಕ್ಕು ನಗಿಸಬಲ್ಲ | ಮಕ್ಕಳಾಟಿಕೆಯೋ […]

Read More

ಬೆಳಗಾಗುತಲಿದೆ ಹಿಂದೂ ಭುವಿಗೆ

ಬೆಳಗಾಗುತಲಿದೆ ಹಿಂದೂಭುವಿಗೆ ಕಳೆದಿದೆ ಕತ್ತಲೆ ತೆರಳಿದೆ ಗವಿಗೆ || ಪ || ಕನಸೆನಿಸಿದ ತಿಳಿ ಕೇಸರಿ ಬಣ್ಣ ಕಡುಗತ್ತಲಿನಲೇ ತೆರೆಸಿತು ಕಣ್ಣ ಕಪ್ಪದು ಕೆಂಪಾಯಿತು ಕ್ಷಣ ಕ್ಷಣದಿ ಕೇಸರಿಯೇರಿತು ಗಗನಾಂಗಣದಿ ಬಂತಿದೋ ಕಾಲವು ಉದಯದ ರವಿಗೆ ಬೆಳಗಾಗುತಲಿದೆ ಹಿಂದೂ ಭುವಿಗೆ || 1 || ಹೃದಯಾಂತರ್ಯದಿ ಚಿಂತನ ಹೊಮ್ಮಿ ಮೈಮನದೊಳು ಚೇತನ ಸೆಲೆ ಚಿಮ್ಮಿ ಕಸುವುಕ್ಕಲು ಹಾಸಿಗೆಯನು ಒದ್ದು ನೆಗೆಯಿತು ಯೌವನ ಬಲ ಸಿಡಿದೆದ್ದು ಭೇರಿಯ ಕರೆ ಕೇಳುತಲಿರೆ ಕಿವಿಗೆ ಬೆಳಗಾಗುತಲಿದೆ ಹಿಂದೂಭುವಿಗೆ || 2 || […]

Read More

ಈ ನೆಲ ನಮ್ಮದು ನಮ್ಮಯ ಜನನಿ

ಈ ನೆಲ ನಮ್ಮದು ನಮ್ಮಯ ಜನನಿ ಕಸುವುಣಿಸಿದ ಮಮತಾಮಯಿ ಧರಣಿ || ಪ || ನಾಗರಿಕತೆ ನಲಿದಾಡಿದ ತೊಟ್ಟಿಲು ಮಾನವ್ಯದ ಗುರು ಮೋಕ್ಷದ ಮೆಟ್ಟಿಲು ಸಂಸ್ಕೃತಿ ಸಂಸ್ಕಾರದ ಸಿರಿ ಮಡಿಲು ಮೌಲ್ಯ ಮಣಿಗದೆ ಕಡಲು || 1 || ತತ್ತ್ವಗಳುದಿಸಿದ ಸತ್ತ್ವಗುಣಾನ್ವಿತೆ ನಿತ್ಯ ಮನೋಹರಿಣೀ ಸತ್ಯ – ಶಿವೇ ಸೌಂದರ್ಯ ಸಮನ್ವಿತೆ ಪುತ್ರ ಕೋಟಿ ಭರಣೀ || 2 || ತತ್ತ್ವಸಂಕುಲೆ ನಿತ್ಯ ಮಂಗಲೆ ಸತ್ಯಶಿವಂಕರಿಣೀ ಸೌಂದರ್ಯದಾ ಗಣೀ ಕಸುವುಣಿಸಿದ ಮಮತಾಮಯಿ ಧರಣೀ || 3 ||

Read More

ನಡೆ ನಿರಂತರ

ನಡೆ ನಿರಂತರ ನಡೆ ನಿರಂತರ ನಿಲದೆ ನಡೆ ನಿರಂತರ ಉತ್ತರೋತ್ತರ ಲೋಕಲೋಕಕೊದಗಲಿದೆ ಹಿಂದು ಮನ್ವಂತರ ಏಕಮನದಿ ಧೀರಪಥದಿ ನಡೆ ನಿರಂತರ || ಪ || ವೇದಕಾಲದಾಳದಿಂದ ನಡೆ ನಿರಂತರ ಪುರಾಣಗಳ ಪೂರ್ವದಿಂದ ನಡೆ ನಿರಂತರ ತತ್ತ್ವಕಾವ್ಯ ವಿಸ್ತರಕ್ಕೆ ನಡೆ ನಿರಂತರ ರಾಮಭರತರೊಡನೆ ಬೆರೆತು ಕೃಷ್ಣಪಾರ್ಥರೊಡನೆ ಕಲೆತು ಬಾಹುಬಲಿಯ ಎತ್ತರಕ್ಕೆ ನಡೆ ನಿರಂತರ || 1 || ಘೋರಿ ಘಜನಿ ಪಡೆಯ ತರಿದು ನಡೆ ನಿರಂತರ ಆಮಿಷಗಳ ಮಲೆಯ ತೊರೆದು ನಡೆ ನಿರಂತರ ಸ್ವಾಭಿಮಾನ ಸೂತ್ರಪಿಡಿದು ನಡೆ ನಿರಂತರ […]

Read More

ಧರ್ಮಾಧರ್ಮದ ಕರುರಣರಂಗದಿ

ಧರ್ಮಾಧರ್ಮದ ಕರುರಣರಂಗದಿ ಕೇಶವ ತೋರು ವಿವೇಕ ಹೇ ಯುಗಸಾರಥಿ ಗೊಂದಲ ತೊಲಗಿಸು ಮನದೊಳು ಕವಿದಿದೆ ಅವಿವೇಕ || ಪ || ಸತ್ಪಾತ್ರರ ವಿನಯದಿ ಕರೆದಿತ್ತರೆ ದಾನವಿದೆನ್ನನುವ ಘನಕೀರ್ತಿ ಪಾತ್ರತೆ ಹೀನಗೆ ದಾನವನಿತ್ತರೆ ವ್ಯರ್ಥ-ಅಧರ್ಮ ಅನರ್ಥಗತಿ ನೀರಸ ತೃಣಕಣ ಕಸವನೆ ತಿಂದರು ಕ್ಷೀರಾಮೃತ ಈವುದು ಗೋವು ಕ್ಷೀರವ ಕುಡಿಕುಡಿದೂ ವಿಷಜ್ವಲೆಯ ಕಕ್ಕುವುದೈ ನಾಗರಹಾವು ಸಾರ್ಥಕದಾನದ ಸಾಧ್ಯತೆಯೊಂದೇ ಪಾತ್ರಾಪಾತ್ರ ವಿವೇಕ | ಹೇ ಯುಗ ಸಾರಥಿ || 1 || ಘೋರ ಕಪಟಿ ಆ ಘೋರಿಯ ಮೋಡಿಗೆ ಪೃಥ್ವಿರಾಜ ಕೈಸೆರೆಯಾದ […]

Read More