ಹುಟ್ಟಿದವರೆಷ್ಟೋ ಯುಗಾದಿಯ ದಿನ

ಹುಟ್ಟಿದವರೆಷ್ಟೋ ಯುಗಾದಿಯ ದಿನ ಹೊಸ ಯುಗಾದಿ ಸೃಷ್ಟಿಸಿದವರೆಷ್ಟು ಜನ? || ಪ || ಹಾಗೂ ಒಬ್ಬರು ಅವರೂ ಅವರನ್ನೂ ಹಡೆದದ್ದು ಯುಗಾದಿ ಹಿಡಿದದ್ದು ಹೊಸ ಹಾದಿ ಪಡೆದದ್ದು ಮುಳ್ಳಿನ ಗಾದಿ ನುಡಿದದ್ದು ನಡೆದದ್ದು ದುಡಿದದ್ದು ದೇಶಕ್ಕೆ ಭದ್ರ ಬುನಾದಿ ಹರಿಸಿದ್ದು ಜೀವನದ ಜೀವನದಿ ಸೇರಿದ್ದು ಯುವಮನದ ನಿಸ್ಸೀಮ ಜಲಧಿ || 1 || ತುರ್ತಿನ ವರ್ತುಲ ಸುತ್ತಿಸುವ ಕಡಲುಗಳ್ಳರ ಬೀಸುಗತ್ತಿಗೆ ಹೆದ್ದೆರೆ ಸಾಯುವುದಿಲ್ಲ ಅವರನ್ನಳಿಸಲು ಕಾಯುವುದಿಲ್ಲ ಅಳಿಸಿ ತಳಕಿಳಿಸಲು ನೋಯುವುದಿಲ್ಲ || 2 || ದಡದಲ್ಲಿ ದೃಢವಾಗಿ […]

Read More

ಹಿಮಗಿರಿಯಿಂದಿಳಿಯುತಲಿದೆ

ಹಿಮಗಿರಿಯಿಂದಿಳಿಯುತಲಿದೆ ಪಶುಚೀನದ ವಿಷಧಾರೆ ಹಿಂಗಿಸೆ ಶಂಕರರಾಗುತ ಏಳಿರಿ ಭಾರತ ಸುತರೆ || ಪ || ಕಳೆದಿದೆ – ಒಣ ಹೆಮ್ಮೆಯ ತಳೆಯುತ ಮೂಲೆಯಲೊರಗುತ ಕನವರಿಸುವ ಕಾಲ ಕಳೆದಿದೆ ಸರಕಾರದಿ ವಿಶ್ವಾಸವನಿರಿಸುವ ಕಾಲ ! || 1 || ಇತಿಹಾಸದ ಪುಟಪುಟದಲಿ ಪುಟಿಯುವ ರಕ್ತಾಕ್ಷರಗಳ ಕೆಳಗೆ ಹೊಸ ಹಸ್ತಾಕ್ಷರಗಳ ಅಂಕಿತಗೊಳಿಸಲು ಸ್ಥಳ ಕಾದಿದೆ ನಿಮಗೆ ! || 2 ||

Read More

ಹಿಮಗಿರಿಗು ಹಿಂದುಸಾಗರಕು ನಡುವೆ

ಹಿಮಗಿರಿಗು ಹಿಂದುಸಾಗರಕು ನಡುವೆ ಭಾರತದ ಶತಕಗಳ ಸುಖದುಃಖ ಪದರಗಳು ಮೈಮುರಿದು ದಾಸ್ಯ ದೌರ್ಬಲ್ಯ, ನೈರಾಶ್ಯಗಳ ಪರದೆಗಳ ಹರಿದು ದಿಕ್ಕುದಿಕ್ಕಿನ ಹೊಡೆತ ಒತ್ತಡಕೆ ಉಬ್ಬುತಲಿ ಮೊಳೆತು ಮೇಲೆದ್ದು ಬೆಳೆಯಿತು ದಿಬ್ಬ ಮಹೋನ್ನತ ಪರ್ವತವೆ ಕಡೆಗಾಯ್ತು, ಅಬ್ಬ ! || ಪ || ಸುತ್ತೆಲ್ಲ ಹಸುರು ವನ ಪಸರಿಸುತ ಹತ್ತಿ ನೆತ್ತಿಯನೇರಿ ನಿಲ್ಲಲಾಶಿಸಿದಾಗ ನಸುನಕ್ಕು ಮೈ ಝಾಡಿಸಿತು ನಗದೇಹ. ಒಳಗೆಲ್ಲ ನೂರು ಸಮರದ ನೋವು ಕೊತಕೊತನೆ ಕುದಿವೆದೆಯ ಯಾತನೆಯ ಕಾವು ಹಬೆಯ ಬೇಗೆಗೆ ಸಿಲುಕಿ ಅಪಜಯದ ಬೇರುಗಳ ಸಾವು ! […]

Read More

ಹಗಲಿರುಳಿನಾಗಸದ

ಹಗಲಿರುಳಿನಾಗಸದ ಹಿಮಗಿರಿಯ ಕಂದರದ ವಿಸ್ತಾರ ಸಾಗರದ ಸಾಮ್ರಾಜ್ಞಿ ತಾಯೆ || ಪ || ಭವ್ಯ ಚೇತನದಿರವು ದಿವ್ಯ ದರ್ಶನದರಿವು ದೊರೆವಂತೆ ಹರಸೆಮ್ಮ ಓ ಮಾತೃಹೃದಯೆ ! || 1 || ಹೃದಯಶ್ರುತಿ ತೀವ್ರತೆಗೆ ಆವುದೋ ನಾದಸುಧೆ ಬಂದೆಮ್ಮ ಕಿವಿಗಳಿಗೆ ಕೇಳಿಸಿದ ಹಾಗೆ || 2 || ಇಂದ್ರಧನುವನೆ ತಂದು ತಿಂದು ನೋಡಿದ ಹಾಗೆ ಅವ್ಯಕ್ತ ಆನಂದ ನಿನ್ನಡಿಯಲೆಮಗೆ ! || 3 ||

Read More

ಸಿಂಧು ಸಾಗರದಿಂದ ಮಾರುತ

ಸಿಂಧುಸಾಗರದಿಂದ ಮಾರುತ ಬಂದು ಬಯಸುತ ಸ್ವಾಗತ ಹಿಂದುಹಿಂದುವು ಬನ್ನಿರಿಲ್ಲಿಗೆ ದೇವಸನ್ನಿಧಿಗೆನ್ನುತ || ಪ || ಪೂರ್ವದಿಕ್ಕಿನ ದ್ವಾರದ್ವಾರಕು ಹಸುರು ಘಟ್ಟದ ತೋರಣ ಕೆಳಗೆ ಪಶ್ಚಿಮ ತೀರದುದ್ದಕು ನೀಲವಾರಿಧಿಯಂಗಣ ನಡುವೆ ಅರಳಿದ ಬಾಳಸಂಪದವಿಲ್ಲಿ ಬಂಧುರ ಸುಂದರ ತಲೆಯ ತೂಗುವ ತಂಪನೆರೆಯುವ ತೆಂಗುಕಂಗಿನ ಹಂದರ || 1 || ವರುಷವೈದರ ಹಿಂದೆ ಶ್ರಾವಣ ಬಹುಳ ಅಷ್ಟಮಿ ಹಬ್ಬದ ದಿನವೆ ಜನಿಸಿತು ಭರದಿ ಬೆಳೆಯಿತು ವಿಶ್ವಹಿಂದೂಪರಿಷದ ತೀರ್ಥರಾಜ ಪ್ರಯಾಗ ಕ್ಷೇತ್ರದಿ ಕುಂಭಪರ್ವದಿ ಕಲೆಯುತ ವಿಶ್ವದಗಲಕು ಕುಡಿಯ ಚಾಚಿತು ಕುಡಿದು ತಾ ಧರ್ಮಾಮೃತ […]

Read More

ಸುರನದಿಯ ತೀರದಲಿ

ಸುರನದಿಯ ತೀರದಲಿ ಬೆಳ್ಳಿಗುಪ್ಪೆಗಳ ನಡುವೆ ಹಸಿರು ಶಾಂತಿಯ ತಂಪು ಹರಡಿದಾಗ ಎಷ್ಟರದು ಮೋಕ್ಷವದು ? ಕಾಲಡಿಯೆ ಸಿದ್ಧವಿದೆ ಕೊರಲೆತ್ತಿ ಕರೆದಾಗ ಆತ್ಮರಾಗ ! || ಪ || ಆದರಿಲ್ಲಿಯ ಕಥೆಯ ಕೋಟಿಕೋಟಿಯ ವ್ಯಥೆಯ ಹೇಳಿಕೇಳುವ ಭ್ರಾತೃ ಹೋಗಲಾಗದು ಹಾಗೆ ; ಓರ್ವಗೆತ್ತಣ ಮೋಕ್ಷ ? ಕ್ಷುದ್ರವದು ಬಲು ಕ್ಷುದ್ರ ರಾಷ್ಟ್ರಮುಕ್ತಿಯ ದೀಕ್ಷೆ ಕೈಗೊಂಡು ನಿಂತವಗೆ ! || 1 || ತಾಯ್ನೆಲದ ಧೂಳಿನೆಲೆ ತ್ಯಾಗಮಯ ಬಾಳಿನಲೆ ಸವೆಯುತಿಹ ದಿವ್ಯಾತ್ಮದಾವರಣವಿದು ದೇಹ ; ಕರ್ತೃತ್ವದೌನ್ನತ್ಯಕೇರೇರ್ದು ಕರಕರಗಿ ಭಾರತವ ಬೆಸೆಯುತಿಹ […]

Read More

ಸಾಗರ ಹಿಮಗಿರಿ ಶೋಭಿತ ಧರೆಯ (ಘೋಷ್ : ಕೇದಾರ್)

ಸಾಗರ ಹಿಮಗಿರಿ ಶೋಭಿತ ಧರೆಯ ಬಾಳಿಸೆ ಬೆಳಗಿಸೆ ಸಜ್ಜಾಗಿ || ಪ || ದೇಶದ ಹಿರಿಮೆಯ ಗರಿಮೆಯ ಹಾಡನು ಘೋಷದ ನಡೆಯಲಿ ನುಡಿಸುವೆವು || 1 || ಕರಕರ ಹಿಡಿದರೆ ಪರಿಪರಿಕರಣವನು ಮೊರೆಯಲಿ ಭರದಲಿ ವಾದ್ಯದ ಸ್ವರವು || 2 ||

Read More

ಸಮರತೂರ್ಯವು ಮೊಳಗಿ

ಸಮರತೂರ್ಯವು ಮೊಳಗಿ ವಿಜಯಭೇರಿಯು ಗುಡುಗಿ ಹೇಡಿಗಳ ವೀರರಾಗಿಸುವ ಹೊತ್ತು ವಿಸ್ಮೃತಿಯ ಗುಹೆಯಿಂದ ಕೇಸರಿಯೆ ಹೊರಹೊರಡು ವಿಶ್ವವನೆ ಗೆಲ್ಲುವಾಕಾಂಕ್ಷೆ ಹೊತ್ತು || ಪ || ಸಮರಾಂಗಣದ ನಡುವೆ ಸಾವಿರಲಿ ನೋವಿರಲಿ ನೋಡದಿರು ಓಡದಿರು ಸರಿದು ಹಿಂದೆ ಕಲ್ಲೆದೆಯ ಕಡುಗಲಿಯೆ ಸಾಗು ರಣಕೇಸರಿಯೆ ಜಯಪರಂಪರೆಯ ಸಾಧಿಸುತ ಮುಂದೆ || 1 || ಅಂಜುವುದು ಅಳುಕುವುದು ಹಿಂಜರಿದು ಕೂರುವುದು ಗಂಡೆದೆಗೆ ತರವಲ್ಲ ಸಮರವೀರ ಬಾಳಿನುದ್ದಕು ಹೆಜ್ಜೆ ಹೆಜ್ಜೆಗೂ ಹೋರಾಟ ನಡೆಸಿ ವಿಶ್ವವನೆ ಬದಲಿಸುವ ಬಾರ || 2 || ಉಂಡುಟ್ಟು ಅದಕೆಂದೆ […]

Read More

ಸತ್ಪಥ ದೃಢವ್ರತಗಳ ಪೋಷಣೆಗೆ

ಸತ್ಪಥ ದೃಢವ್ರತಗಳ ಪೋಷಣೆಗೆ ಜೀವನ ಬೆಳಗುವ ಪರಿವರ್ತನೆ ಸಕಾಲವೀ ಸಂಕ್ರಾಂತಿಯ ಘಳಿಗೆ || ಪ || ಚೇತನಹೀನತೆ ಆಶಾಶೂನ್ಯತೆ ಸೀಳಿ ಬೀಸಿದೆ ಶುಭಕ್ರಾಂತಿಯ ಸವಿಗಾಳಿ ರವಿಸಂಚಾರದಿ ಬೆಳೆಯುವ ಬೆಳಕಿನ ಹರಕೆ ಪಾವನವೀ ಸಂಕ್ರಾಂತಿಯ ದಿನಕೆ || 1 || ಕುಗ್ಗುವ ಅಜ್ಞಾನದ ತಿಮಿರದ ಹೆಗ್ಗಡಲು ಚದುರೋಡುವ ಕೆಡುಕಿನ ಕಾರ್ಮುಗಿಲು ಸಗ್ಗದ ಪಥ ಉತ್ತರಾಯನವು ತೆರೆದವೊಲು ಹಿರಿಹಿಗ್ಗಿದೆ ಸುಜ್ಞಾನದ ಹಗಲು || 2 || ಜಡತೆಯನಾಂತಿಹ ಸೃಷ್ಟಿಗೆ ದೃಷ್ಟಿಯ ನೀಡಿ ಯಶಪ್ರಾಪ್ತಿಗೆ ಹೊಸ ದಾರಿಯ ಮಾಡಿ ತಿಮಿರವಿನಾಶದ ಋಜುವಿಜಯದ […]

Read More

ಶಸ್ತ್ರಪಾಣಿ ತೇಜಸ್ವಿನಿ

ಶಸ್ತ್ರಪಾಣಿ ತೇಜಸ್ವಿನಿ ನಮೋ ಸ್ಪೂರ್ತಿಸಿಂಹಿಣಿ || ಪ || ಕಡುದಾಸ್ಯದ ಕಗ್ಗತ್ತಲ ಕಾರೊಡಲಲಿ ಮೊಳಮೊಳಗಿದ ಸ್ವಾತಂತ್ರದ ಯುಗವಾಣಿ ಹೋರಾಟದ ರಣಹಾದಿಯ ಖಡ್ಗದ ಮಿಂಚಲಿ ಬೆಳಗಿದ ಕಡುಗಲಿ ಝಾನ್ಸೀರಾಣಿ || 1 || ಬಿಡಲೊಲ್ಲೆನು ಅಂಗುಲ ನೆಲ ಕೊಡಬಲ್ಲೆನು ಪ್ರಾಣವನೇ ಎಂದು ಗರ್ಜಿಸಿದೆ ಸೆಣಸಿ ಅರ್ಪಿಸುತಲಿ ತನುಮನಧನ ಸ್ವದೇಶರಕ್ಷೆಗೆ ಜೀವನ ಹಿರಿಯಾದರ್ಶನ ನಿಲಿಸಿ || 2 || ಇತಿಹಾಸದಿ ಅಜರಾಮರ ಶತಮಾನದ ಸ್ವರ್ಣಾಕ್ಷರ ಝಾನ್ಸಿಯ ದ್ವಾರದ ಸಮರ ಉನ್ನತ ಅಶ್ವಾರೋಹಿಣಿ ನಾಡಿನ ಮಹೋಪಕಾರಿಣಿ ಧವಳಕೀರ್ತಿರೂಪಿಣಿ || 3 ||

Read More