ವಿನಮ್ರ ಭಾವದಿ ವಂದನೆ ಸಲಿಸುತ

ವಿನಮ್ರ ಭಾವದಿ ವಂದನೆ ಸಲಿಸುತ ಗೈಯುವ ಈ ದಿನ ಶ್ರೀಗುರುಪೂಜನ || ಪ || ಉಜ್ವಲವೆಮ್ಮದು ಆರ್ಯಸಂಸ್ಕೃತಿ ಸಾರುತಲಿದೆ ಧ್ವಜ ಅದರದೆ ಕೀರ್ತಿ ಭಗವಾಧ್ವಜವಿದು ಗುರುಭಾರತಿ ಭಾರತಸಂತಾನಕೆ ಶುಭಭೂಷಣ || 1 || ತ್ಯಾಗ ತಪಸ್ಯಾ ವೈಭವ ಶೋಭಿತ ವಿಜಯ ಪರಾಕ್ರಮಗಳ ಸಂಕೇತ ಕ್ರಾಂತಿಯ ಶಾಂತಿಯ ಕೂಡಿಸಿದಂತಿದೆ ಧ್ವಜದಲಿ ಭಗವಾವರ್ಣದ ಮಿಲನ || 2 || ರಾಷ್ಟ್ರದ ಸೇವೆಗೆ ತ್ಯಾಗವ ಗೈಯುವ ವೈಭವ ಶಿಖರಕೆ ರಾಷ್ಟ್ರವನೊಯ್ಯುವ ಹಾರುತ ಮೆರೆಯಲಿ ಧ್ವಜವಿದು ಭಗವಾ ನೀಡುತ ಲೋಕಕೆ ಮಹಾನ ಬೋಧನ […]

Read More

ವಿಜಯದಶಮಿಗಳೆನಿತೊ ಕಳೆದರು

ವಿಜಯದಶಮಿಗಳೆನಿತೊ ಕಳೆದರು ತೀರದಿದೆ ದಿಗ್ವಿಜಯದಾಹ ಹೃದಯ ಹೃದಯದಿ ವಿಜಯಗಳಿಸುವ ದೇಶಪ್ರೇಮದ ದಿವ್ಯ ಮೋಹ || ಪ || ಹಿಂದುಭೂಮಿಯ ಬಸಿರಿನಾಳದ ಎನಿತೊ ದಿನಗಳ ಕನಸಿನಾಸೆ ಭಗವೆಯಾರಾಧಕರ ರೂಪವ ಧರಿಸಿ ಬಂದಿದೆ ವಿಜಯ ಗಳಿಸೆ || 1 || ಅಂದು ಜನಿಸಿದ ನಿತ್ಯಯಜ್ಞದ ಊಧ್ರ್ವಜ್ವಾಲೆಗೆ ಆಜ್ಯವೆರೆದು ಸಂದುಹೋದನು ಜನ್ಮದಾತನು ಸಂಘಜ್ಯೋತಿಯ ಅಮರ ಗೈದು || 2 || ಘೋರ ಹಾಲಾಹಲವ ಕುಡಿದರು ಬಾಳುತಿರುವುದು ಬೆಳೆಯುತಿಹುದು ಭಂಗವಿಲ್ಲವು ಸಂಘಶಕ್ತಿಗೆ ವಿಜಯರಥವನು ಸೆಳೆಯುತಿಹುದು || 3 ||

Read More

ರಾಷ್ಟ್ರೋದ್ಧಾರಕೆ ಶ್ರಮಿಸಿದ ಯೋಗಿ

ರಾಷ್ಟ್ರೋದ್ಧಾರಕೆ ಶ್ರಮಿಸಿದ ಯೋಗಿ ಸ್ವದೇಶ ಸ್ವಧರ್ಮಗಳನುರಾಗಿ                       || ಪ || ಸೀತಾಬರ್ಡಿಯ ಕಿಲ್ಲೆಯ ಮೇಲೆ ದಾಸ್ಯದ ಧ್ವಜ ಹಾರಾಡುತಲಿರಲು ಕೊಠಡಿಯ ನೆಲದಿಂ ಕೋಟೆಯ ಒಳಕೆ ಅಗೆದು ಸುರಂಗವ ಅದ ಕಿತ್ತೆಸೆಯುವ ಸಾಹಸ ಸ್ಪುರಿಸಿತು ಹಸುಳೆಯ ಮನದಿ        || 1 || ಆಂಗ್ಲ ಗುಲಾಮಿಯ ವೀಕ್ಷಕನೋರ್ವ ಶಾಲೆಯ ದ್ವಾರದಿ ಕಾಲನ್ನಿಡಲು ಸಿಡಿಯಿತದೋs ‘ವಂದೇ ಮಾತರಂ’ ಸಾವಿರ ಕಂಠದ ಸಿಡಿಲಿನ ಘೋಷ […]

Read More

ಮೊದಲನೆಯ ನಮಸ್ಕಾರ

ಮೊದಲನೆಯ ನಮಸ್ಕಾರ…. ಉದಯೋನ್ಮುಖ ಭಾಸ್ಕರಗೆ ತೇಜೋರಾಶಿಯ ದೊರೆಗೆ || 1 || ಎರಡನೆಯ ನಮಸ್ಕಾರ…. ಗೈವೆವು ಯಜ್ಞೇಶ್ವರಗೆ ಪ್ರಭುಸೇವಕ ಪಾವಕಗೆ || 2 || ಮೂರನೆಯ ನಮಸ್ಕಾರ…. ಜಲದೇವತೆ ವರುಣನಿಗೆ ಜೀವನರಸದಾತನಿಗೆ || 3 || ನಾಲ್ಕನೆಯ ನಮಸ್ಕಾರ…. ಸನ್ಮಾತೆ ವಸುಂಧರೆಗೆ ಆಶ್ರಯದಾತೆಗೆ ಧರೆಗೆ || 4 || ಐದನೆಯ ನಮಸ್ಕಾರ…. ಗೈವೆವು ಶ್ರೀ ಭಾರತಿಗೆ ಸನ್ಮಾನದ ಮೂರುತಿಗೆ || 5 || ಆರನೆಯ ನಮಸ್ಕಾರ…. ಜನನೀಜನಕರ ಅಡಿಗೆ ವಾತ್ಸಲ್ಯದ ವಾರಿಧಿಗೆ || 6 || ಏಳನೆಯ […]

Read More

ಮಾತೃಮಂದಿರದೊಳಗಿದೋ ಬಾ

ಮಾತೃಮಂದಿರದೊಳಗಿದೋ ಬಾ ಬೆಳಗಿಸಲು ಶುಭ ಆರತಿ || ಪ || ಅಳಿದಿರಲು ಹಿಂದಿನದು ಗರಿಮೆ ಬಂಧನದೊಳಿರೆ ಮಾತೆ ಪ್ರತಿಮೆ ವಿಭವ ಸಂಪದಹೀನ ಪ್ರತಿಮೆಯ ನಗ್ನತೆಯೆ ತಾ ಕರೆಯುತಿಹುದು || 1 || ಇಂದು ನಡೆಯಲಿ ಮಾತೃವಂದನ ಕಡಿದು ಬೀಳಲಿ ತಾಯ ಬಂಧನ ಕೋಟಿ ಕಂಠದಿ ಗರ್ಜಿಸಲಿ ರಣವಾದ್ಯ ತಾ ತಾಯ್ನೆಲದ ಜಯಕೆ || 2 || ತೂರ್ಯಘೋಷವು ಮೊಳಗುತಿರಲು ದೀಪಜ್ಯೋತಿಯು ಬೆಳಗುತಿರಲು ಕರುಣೆಯಿಂದೆದೆ ತುಂಬಿ ವೀಣೆಯು ತಾನೆ ತಾ ಝೇಂಕರಿಸುತಿರಲು || 3 ||

Read More

ಭಾರತದಾಲಯ ಬಿರಿಯುತಿದೆ

ಭಾರತದಾಲಯ ಬಿರಿಯುತಿದೆ ಗೃಹದೊಡತಿಯ ಕಣ್ಣುರಿಯುತಿದೆ || ಪ || ವಾಯವ್ಯದ ದ್ವಾರದ ಹಿಮಪಂಕ್ತಿಯ ರಂಗೋಲೆ ವನರಾಜಿಯ ತೋರಣದುಯ್ಯಾಲೆ ವೈರಿಯ ಪದಘಾತಕೆ ಕರಸೆಳೆತಕೆ ಸಿಲುಕುತಲೆ ಹುಡಿಯಾಗುರುಳಿದೆ ಮಣ್ಣಿನ ಮೇಲೆ ! || 1 || ನಂಬಿಕೆ ನಿದ್ದೆಯ ದ್ರೋಹದ ದಾಳಿಯು ಕಡಿವ ಪರಿ ಕೈದಿಯದೋ ಹಿಮಶಿಖರದ ಪ್ರಹರಿ; ಬುಟ್ಟಿಯೊಳೇಳುವ ನಾಗರ ನಿಟ್ಟುಸಿರನು ಮೀರಿ ಏರಿಳಿಯುತಲಿದೆ ಸಿಂಧೂಲಹರಿ ! || 2 || ಚಿತ್ರಾಂಗದೆ ಚರಿಸಿದ ರವಿಯುದಯದ ಸೀಮೆಯಲಿ ಧರ್ಮಜನನುಜಗೆ ಧಿಕ್ಕಾರದುಲಿ ! ಕ್ರಾಂತಿಯ ನೆಲೆ ಗಂಗಾ ತೀರದ ಬಂಗಾಲದಲಿ […]

Read More

ಭಾರತದ ಪ್ರಾಚೀನ ಪ್ರತಿಭೆ

ಭಾರತದ ಪ್ರಾಚೀನ ಪ್ರತಿಭೆಯೆಮ್ಮೊಡನೆ ಮಾತನಾಡಿದ ಜಿಹ್ವೆ ಈತನದು || ಪ || ಸದಮಲ ಸಂಸ್ಕೃತಿಯದೆಮ್ಮೊಡನೆ ನಡೆದೈದ ದಿವ್ಯ ಅಡಿದಾವರೆಗಳೀತನದು || 1 || ಹೌತಾತ್ಮ್ಯದೌನ್ನತ್ಯವೆಮಗಿತ್ತ ಪ್ರೇರಣೆಯ ಆದರ್ಶ ಬಾಳುವೆಯು ಈತನದು || 2 || ಭವ್ಯ ಭವಿತವ್ಯವದು ಅಸುವಾಂತು ನೆಗೆದೆದ್ದ ಮಹಾನ್ಮರಣವೂ ಈತನದೆ ! || 3 || ಎಮ್ಮೊಳಗೆ ಶತಲಕ್ಷ ಪದಧಾರಿಯಿಂದಿಗು ವರ ವಿಶ್ವಸಂಚಾರಿಯೀತ || 4 || ಲಕ್ಷೋಪಲಕ್ಷ ಭುಜಧಾರಿ ಕೆಚ್ಚೆದೆಯ ಕಲಿ ಶತವಿಘ್ನಸಂಹಾರಿಯೀತ || 5 || ಎಮ್ಮದೀ ದಿನದಿನದ ಸಮ್ಮೇಳನದ ಸುಮದಿ […]

Read More

ಭಾರತದ ಕೀರ್ತಿಯನು (ಘೋಷ್ : ದೇಶಕಾರ್)

ಭಾರತದ ಕೀರ್ತಿಯನು ಹೊಮ್ಮಿಸುವ | ಜಯ್ ಭಾರತಿಯ ಮೂರ್ತಿಯನು ಪೂಜಿಸುವ ನಾವ್ || ಪ || ಶತ್ರುಪಡೆ ಒತ್ತಿ ಬರೆ ಹತ್ತಿ ತುಳಿ ನೆತ್ತಿಯಾ ಮತ್ತೆ ನಡೆ ಗೊತ್ತು ಗುರಿ ಮರೆಯದೆಯೆ ನೀ || 1 || ವಿದ್ಯೆಯಲಿ ಬುದ್ಧಿಯಲಿ ಶಕ್ತಿಯಲಿ ಭಕ್ತಿಯಲಿ ಶೀಲದಲಿ ಕಾರ್ಯದಲಿ ಸಿದ್ಧಿಯಲಿ ನಾವ್ || 2 || ಶ್ರೇಷ್ಠವಿದು ಸಂಸ್ಕೃತಿಯು ಮೂಲ ನೆಲೆ ನಮದು ಹಿಂದುಗಳ ಬಂಧುಗಳ ಸಂಘಟಿಸಿ ನಾವ್ || 3 ||

Read More

ಭರತದೇಶದ ಯುವಜನಾಂಗದ

ಭರತದೇಶದ ಯುವಜನಾಂಗದ ಹೃದಯದಾರಾಧನಾದೈವ ಪ್ರೀತಿ ಮಮತೆಯು ಘನಿಸಿದಂತಹ ನೇಹ ತುಂಬಿದ ಮೊಗದ ಭಾವ || ಪ || ಮಾತೃಸೇವೆಯೊಳುರಿಯುತಿರುವುದು ನಿನ್ನ ನೆತ್ತರ ಕಣವು ಕಣವು ನಿನ್ನ ಕರೆಗೋಗೊಡುತಲಿರುವುದು ನಿತ್ಯಜಾಗೃತ ಜನರ ಮನವು || 1 || ನಿನ್ನ ಶ್ವಾಸೋಚ್ಛ್ವಾಸದೊಳಗೂ ತುಂಬಿ ತುಳುಕಿದೆ ರಾಷ್ಟ್ರಭಕ್ತಿ ನಿನ್ನ ನಾಡಿಯ ಮಿಡಿತದೊಂದಿಗೆ ಒಂದುಗೂಡಿದೆ ಯುವಕಶಕ್ತಿ || 2 || ದಿವಿಜವೃಂದವು ಮನುಜರೊಳಿತಕೆ ಇಳೆಗೆ ಕಳುಹಿದ ದೇವದೂತ ನಿನಗಿದೋ ನಾವ್ ಬಯಸುತಿರುವೆವು ನಿತ್ಯ ನಿತ್ಯವು ಸುಸ್ವಾಗತ || 3 || ಸ್ವಾರ್ಥ ವೈರದ […]

Read More

ಬಂದಿದೆ ಬನ್ನಿ ಹುಟ್ಟಿದ ಹಬ್ಬ

ಬಂದಿದೆ ಬನ್ನಿ ಹುಟ್ಟಿದ ಹಬ್ಬ ಪುಟ್ಟ ಬಾಲಕ ಹುಟ್ಟಿದ ಹಬ್ಬ ರಾಮನು ಹುಟ್ಟಿದ ಹಬ್ಬ || ಪ || ಗೆಜ್ಜೆ ಕಟ್ಟಿ ಕುಣಿಯೋಣ ಬನ್ನಿ ಕೈಯ ತಟ್ಟಿ ಹಾಡೋಣ ಬನ್ನಿ ಶುಭಾಶಯವ ಹೇಳೋಣ ಬನ್ನಿ ಬನ್ನಿ ಬನ್ನಿ ಸಂತೋಷದ ಹಬ್ಬ || 1 || ಬಾರಿಬಾರಿಗೂ ಇಂಥಾ ದಿನ ಬರಲಿ ವರುಷ ವರುಷವೂ ಹರುಷವ ತರಲಿ ನಮ್ಮ ಬಾಯಿ ಸಿಹಿಸಿಹಿಯಾಗಿರಲಿ ಇಷ್ಟಮಿತ್ರರು ಸೇರುವ ಈ ಹಬ್ಬ || 2 || ಬಾಳೋ ಗೆಳೆಯ ನೂರು ವರುಷ ಹಿರಿಯರ […]

Read More