ಬಾಳಬೇರಿನ ಬಾಯ್ಗೆ ಹರಿವ ಸಂಸ್ಕೃತಿಯೊರತೆ ಹೊರಡಿಸುವ ಹಾಡಿನಲಿ ಕರಗಿ ಕೊರತೆ ಮಣ್ಣಿನಲಿ ಮಲಗಿಯೂ ಚೈತನ್ಯವಾಗೆದ್ದು ನಡೆದು ನುಡಿವಂಥ ಈ ನಾಡ ಚರಿತೆ || ಪ || ಬುವಿಯ ಬಸಿರಿನ ಆಳದಾಳದಲಿ ಆಚೀಚೆ ಅಂಡಲೆವ ಸ್ರೋತಗಳ ಏತ ಹೊಡೆದು ಹಲಬಗೆಯ ಬಣ್ಣಗಳ ಸತ್ವಗಳ ತತ್ವಗಳ ಹೂ ಹಣ್ಣ ರೂಪಿಸುವ ಚಕ್ರಕರ್ಮ || 1 || ನುಡಿಗೆ ನಡೆಯೇ ಭಾವಾನುವಾದಂತೆ ಹಿರಿಬದುಕು ಬಾಳ್ದವರ ಮುಖಮಾಲಿಕೆ ತಳಿರ ಸೊಂಪಿನೆಡೆಯೆಡೆಯಲ್ಲು ತೋರುತಲೆದ್ದು ಸಿಂಗಾರವಾದಂತೆ ಬೋಧಿ ಮರಕೆ || 2 || ‘ಕತ್ತಿ ಮುರುಕ’ನ […]
ಪ್ರಿಯ ಹಿಮಾಲಯ ಗಿರಿಯದೋ ಭಾರತಕೆ ಭೂಷಣವೆನಿಸುತಿಹುದು || ಪ || ಬದರಿಕಾಶ್ರಮ ಹರಿಯ ದ್ವಾರಾ ಅಮರೇಶ ಹೃಷಿಕೇಶದಿರವು ಕೇದಾರ ಗಂಗೋತ್ರಿಯಿರಲು ಗುಹೆಗುಹೆಯು ತಾಪಸರ ಗೃಹವು ದೃಷ್ಟಿ ಬೀರುತ ಸೃಷ್ಟಿ ಪ್ರಲಯವ ಗೈವ ಶ್ರೇಷ್ಠರ ಧ್ಯಾನಶಿಬಿರ ಸಾಂದ್ರ ಗಿರಿವನರಾಜಿ ರಂಜಿತ ಓ ನಗಾಧಿಪ ಮಾನಬಿಂದು || 1 || ಶಿಷ್ಯಕುಲ ಗುರುಕುಲದಿ ನಿಂದು ಧನಿಕ ಬಡವರ ಭೇದ ತೊರೆದು ದೇಶ ಧರ್ಮವ ಪೊರೆದು ಪೋಷಿಸೆ ಶಸ್ತ್ರ ಶಾಸ್ತ್ರದ ಜ್ಞಾನ ಪಡೆದು ವಿಶ್ವದೊಡೆತನ ಗೈವ ಕ್ಷಮತೆಯ ನೀಡಿದಾರ್ಯತೆ ನಿನ್ನದಿಹುದು ಓ […]
ಪುಣ್ಯಪಾವನ ಧ್ಯೇಯ ಸಾಧಿಸಿ ಧನ್ಯವಾಗಲಿ ನಮ್ಮ ಜೀವನ || ಪ || ಮಾತೆ ಸೀತೆಯ, ರಾಮಚಂದ್ರನ ಪಾವನಾಂಘ್ರಿಯ ಸ್ಪರ್ಶ ಹೊಂದಿದ ತಾಯೆ ನಿನ್ನಯ ಧೂಳಿನಿಂದಲಿ ಸ್ವಚ್ಛಗೊಳ್ಳಲಿ ಮಲಿನ ತನುಮನ || 1 || ರಜಪುತಾನದ ಚಿತೆಗಳಿಂದಲಿ ಧಗಧಗಿಸಿ ಉರಿದಗ್ನಿಜ್ವಾಲೆಯ ಕಿಡಿಯು ಬೆಳಗಲು ಅಂತರಂಗವ ಅಳಿದು ಕಳೆವುದು ದೌಷ್ಟ್ಯಭೀಷಣ || 2 || ತುಚ್ಛ ಆಸೆಯು ಮನದೊಳಿಲ್ಲವು ತೃಣಸಮಾನವು ಒಡವೆ ವಸ್ತ್ರವು ಶುಭದ ವಸನವೆ ನಮ್ಮ ವೇಷವು ಶೀಲ ನಮ್ಮಯ ದಿವ್ಯ ಭೂಷಣ || 3 || ಮಾತೃಭೂಮಿಯ […]
ಪಾವನೆ ವೀರ ಶಿವಾಜಿಯ ಮಹತಾಯಿ ವಂದನೆ ಸಲಿಪೆವು ಓ ಜೀಜಾಬಾಯಿ || ಪ || ತಾಯ್ನೆಲ ಮ್ಲೇಚ್ಛರ ಹಾವಳಿಗೀಡಾಗಿ ದಾಸ್ಯದ ಕತ್ತಲೆ ಹಬ್ಬಿರೆ ನೀ ಮರುಗಿ ಸ್ವಾರ್ಥವ ಬಯಸದೆ ಜನಹಿತ ಚಿಂತಿಸಿದೆ ಕಡುಗಲಿ ಪುತ್ರನ ಜನ್ಮಕೆ ಪ್ರಾರ್ಥಿಸಿದೆ || 1 || ಮಿಡಿಯಿತು ಸ್ವದೇಶಪ್ರೇಮವು ಎದೆಯೊಳಗೆ ಕರುಳಿನ ಕುಡಿ ಚಿಗುರೊಡೆಯಿತು ನಿನ್ನೊಳಗೆ ನವರವಿ ಉದಿಸಿದ ಕಾರ್ಗತ್ತಲ ಸೀಳಿ ಧೈರ್ಯ ಪರಾಕ್ರಮ ಬಂದೊಲು ಮೈತಾಳಿ || 2 || ರಾಮನ ಶ್ಯಾಮನ ಕಥೆಗಳ ವರ್ಣಿಸಿದೆ ಸುತನಿಗೆ ಭೀಮಾರ್ಜುನರನು ನೆನಪಿಸಿದೆ […]
ನೋಡದೊ ಹರಿದೋಡುತಲಿದೆ ನದಿ ವಾರಿಧಿಗೆ ಮಾನವನೇ ! ಗುರುವಹುದದು ಜೀವನಝರಿಗೆ || ಪ || ಪಥಕೆದುರಾಗುವ ಪರ್ವತಪಂಕ್ತಿಯ ಕೊರೆದು ಸಂಕಟಗಳ ಸೀಳುತ ಹೊಸದಾರಿಯ ತೆರೆದು ಚಿಮ್ಮುವ ಧಾರೆಯ ಬಲುಮೆಯ ನೋಡದೊ ನೋಡು ಹಿಂಬಾಲಿಸು, ನಿನ್ನೀ ಜೀವನಕದೆ ಜಾಡು || 1 || ಸುಗುಣದ ಸುರಸುಂದರ ಹೂಬನಗಳ ಬೆಳೆಸಿ ತಪದಾಗರ ಗಿರಿಕಂದರ ಗವಿಗಳ ಬಳಸಿ ಅಜರಾಮರ ಆದರ್ಶದ ಸಾಧನೆಗೆಳೆಸಿ ಜೀವನಝರಿ ಹರಿದೋಡಲಿ ಕಲುಷವನಳಿಸಿ || 2 || ಬಾಳುದ್ದದ ಸೋಪಾನಕೆ ಜನರನು ಕರೆದು ಚಣನಿಲ್ಲದೆ ಮುಂಬರಿಯುವ ನೀತಿಯನೊರೆದು ಸ್ನೇಹದ […]
ನಿಲ್ಲದೆಯೆ ಗೆಲ್ಲುವುದೆ ನಮ್ಮ ಗುರಿಯು ನಿಲ್ಲದೆಯೆ ಓಡಲಿದೆ ನಿಲುಗಡೆಯ ಗಡಿಯು || ಪ || ವಿಜಯಗಳ ಬರಸೆಳೆದು ಸೋಲ ತುಳಿದು ಭುಜಕೀರ್ತಿ ಪ್ರಭೆ ಬೆಳಗಿ ಹಗೆಯ ಹಳಿದು ಸೊಕ್ಕು ಸುಲಿಗೆಯ ಗರ್ವ ಮದೋನ್ಮತೆಯ ಶವದಹನಕಿದೋ ತರುತಿಹೆವು ಉರಿಯ || 1 || ಕುರುಕ್ಷೇತ್ರ ಪಾನಿಪತ ಕಳೆದುದೊಮ್ಮೆ ಕಳೆಯದಿದೆ ಮಗುದೊಮ್ಮೆ ಬರುವ ಬಲುಮೆ ಅದೋ, ಪುನರುದಿಸುವಿತಿಹಾಸದೊಲುಮೆ ನಮ್ಮದಿದೆ ಸ್ವಾಗತಿಸುವತುಲ ಹೆಮ್ಮೆ || 2 || ಜಯಪಥದಿ ಜತೆಗಿಹುದು ಗೈದ ಶಪಥ ಧರ್ಮರಥಕಿಹುದು ಕರ್ಮಾಶ್ವ ನಿರುತ ಇಹೆವು ರಥಿಕರು ಧನುವ […]
ನಿನ್ನನು ಪೂಜಿಸಲೆಂದೆ ದೂರದಿಂದ ಬಂದೆ ಸಲಕರಣೆಯ ಬೇಕಾದುದು ಎಲ್ಲವ ತಂದೆ || ಪ || ಶಿರವಿದ ತಂದಿರುವೆ ನಮಿಸಲು ನಿನ್ನಡಿಗೆ ಕಣ್ಗಳ ನಿನ್ನಯ ಶುಭದರ್ಶನಕೆ ಕಿವಿಗಳು ಎರಡನು ಹದಗೊಳಿಸಿಟ್ಟಿರುವೆ ಗುಣಸಂಕೀರ್ತನೆಯನು ಕೇಳಲಿಕೆ ನಾಲಗೆಯನು ನಾ ಮೀಸಲು ಮಾಡಿರುವೆ ನಾಮಾಮೃತಸ್ರೋತವ ಸವಿಯಲಿಕೆ ಹೃದಯದ ಸಿಂಹಾಸನವನು ಅಣಿಗೊಳಿಸಿ ಮನವನೆ ಹಾಸಿಗೆಯೊಲು ಬಿಡಿಬಿಡಿಸಿ ಕಟ್ಟಿರುವೆನು ಭಾವನೆಗಳ ಉಯ್ಯಾಲೆ ತೂಗಲಿದೋ ಕಲ್ಪನೆಗಳ ಮಾಲೆ || 1 || ಅಭಿಷೇಕಕೆ ಬಾಷ್ಪಾಂಜಲಿ ತಂದಿರುವೆ ಶ್ವಾಸೋಚ್ಛ್ವಾಸವೆ ಮೃದುಚಾಮರವು ನಿನ್ನಯ ಪಾದವನೊತ್ತಲು ಹೇ ದೇವ ಎರಡೂ ಕೈಗಳನಿದೊ […]
ನಾಡನೊಡೆದು ಗಾದಿಪಡೆದು ಸ್ವತ್ವ ಮರೆತು ಸ್ವಾರ್ಥ ಕಲಿತು ಸ್ವಜನ, ಬಂಧು ಭಗಿನಿಯರನು ವೈರಿ ಸೆರೆಗೆ ದೂಡಿದೆ ; ಹೃದಯ ಹರಿದು ಮನವ ಮುರಿದು ರಾಷ್ಟ್ರದೊಡಲ ಕೊರೆದು ಕೊರೆದು ಮಾತೃಕ್ಷೀರ ಮೂಲೆಗಿರಿಸಿ ಘೋರವಿಷವನೂಡಿದೆ ! || ಪ || ಶೀಲ ಸತ್ಯ ನಲಿದ ನೆಲದಿ, ರಾಮರಾಜ್ಯ ಮೆರೆದ ಸ್ಥಳದಿ ಭ್ರಷ್ಟಗುಣವ ಬೆಳೆದು ಸತ್ಯದೆಲ್ಲ ಹತ್ಯೆಮಾಡಿದೆ ; ವೇದಗಾನ ಭಕ್ತಿಪಾನ, ಶೌರ್ಯ ವಿಭವ ಸ್ವಾಭಿಮಾನ ತೊರೆದು ನಿಂತು ಕರವ ನೀಡಿ ಜಗದಿ ಭಿಕ್ಷೆ ಬೇಡಿದೆ ! || 1 || […]
ನಡೆಸು ಮುನ್ನಡೆಸು ಹೇ ಭಗವತಿ ಬೆಳಗು ನಮ್ಮೊಳು ಧ್ಯೇಯಜ್ಯೋತಿ || ಪ || ಪ್ರೇರಣೆಯ ಸಸಿ ಮೊಳೆಸಿ ಬೆಳೆಸಲು ಹರಿಸುತಿರು ವಾತ್ಸಲ್ಯಧಾರೆ ಕಷ್ಟನಷ್ಟದ ರಾಶಿ ಎದುರಿಸೆ ನಿನ್ನ ನೆನಪೇ ಖಡ್ಗಧಾರೆ ಸತತವೂ ಪಥದಲೇ ನಡೆಸುತ ಗೊಳಿಸು ಸಾರ್ಥಕ ಜೀವನಗತಿ || 1 || ವ್ಯಾಘ್ರವಾಹನೆ ಸುಸ್ಮಿತಾನನೆ ಮೆಟ್ಟಿ ಬಾ ನಮ್ಮೆದೆಯ ಸ್ವಾರ್ಥ ಮುಟ್ಟು ಬಾ ಮನದಾಳದಾಳವ ತಟ್ಟಿ ತೆರೆ ಚೈತನ್ಯಸ್ರೋತ ಸುಪ್ತ ಶಕ್ತಿಯ ಎತ್ತಿ ಅರಳಿಸು ವಿಸ್ತರಿಸುವೊಲು ಕಾರ್ಯವ್ಯಾಪ್ತಿ || 2 || ಹಿಂದುಭಗಿನಿಯರಿಂದು ಹಾಡುವ ಐಕ್ಯಗಾನದ […]
ನಡೆ ಪಥಿಕನೆ ಅಡಿ ಮುಂದಿರಿಸಿ ಗುರಿಯೆಡೆಗೇ ಗಮನವನಿರಿಸಿ ಸಂಕಟಗಳ ಹಾದಿಯ ಗುಡಿಸಿ ಸಂಗಡಿಗರ ಪಡೆ ಸಂಘಟಿಸಿ || ಪ || ನೆಲೆಗೊಳ್ಳಲಿ ಭರವಸೆ ಬಲಿತು ಭೀತಿ ನಿರಾಶೆಯ ಬಿಡು ಮರೆತು ನಿಶಿದಿನ ಚಿಂತಿಸು ಹಂಬಲಿಸು ಕರ್ತವ್ಯವನೊಂದನೆ ಕುರಿತು ತ್ವರೆಗೊಳ್ಳುತ ಧಾವಿಸು ಮುಂದೆ ಸ್ವಾರ್ಥತೆ ಕ್ಷುದ್ರತೆ ಬದಿಗಿರಿಸಿ || 1 || ನವಚೇತನ ತುಂಬಲಿ ಭರದಿ ಹಿಂದುಸ್ಥಾನದ ಜೀವನದಿ ಒಗ್ಗೂಡುತ ನುಗ್ಗುವ ನಮ್ಮೀ ಹಿಂದುತ್ವದ ಜೀವನದ ನದಿ ನಿಶ್ಚಿತವಿದು ಪಥ ಓ ಪಾಂಥ ನಡೆ ನಡೆ ಬಾಳನು ಮುಡುಪಿರಿಸಿ […]