ತುಂಬಿದೆ ದೇಶವ ಒಡೆಯುವ ಭ್ರಷ್ಟತೆ ಕೆಟ್ಟಿತೆ ಶಾಸಕರದು ದೃಷ್ಟಿ ? ಮೈತಾಳಿತು ನಾಗಾದೇಶವಿದೋ – ನಾಯಕ ಮುಖ್ಯನ ನವಸೃಷ್ಟಿ ! || ಪ || ಹುಟ್ಟಿದ ದಿವಸಕೆ ಹೆಣಗಳ ಕಾಣಿಕೆ ದಿನಬೆಳಗಾದರೆ ಅಪಮಾನ ! ದಿನದಿನವೂ ಕಿರಿದಾಗುತಲಿದೆ ನೆಲ ಒಳನುಗ್ಗುತಲಿದೆ ನವಚೀನ ! || 1 || ಕಾರಣ ಸರಕಾರದ ಸಂಧಾನಕೆ ನಾಡಿನ ಗಡಿಗಳೊಳಜ್ಞಾನ ಸ್ವಾರ್ಥದ ಜನರೊಂದೆಡೆ, ಮತ್ತೊಂದೆಡೆ ಮಣ್ಗೂಡಿದೆ ರಾಷ್ಟ್ರದ ಮಾನ ! || 2 || ಕಿಂದರಿ ಗೀತೆಯು ಕೋಣನಿಗೇತಕೆ ಸಾಕಾಯಿತು ಕೇಳೀ ಕೇಳಿ […]
ಜನ್ಮವ ತಳೆದಿದೆ ಜನರೊಳು ಬೆಳೆದಿದೆ ಸಾಕಾರದಿ ಸಮಗ್ರ ಕ್ರಾಂತಿ ಮೋsಡದೊಡಲಿನ ಕ್ರಾಂsತಿಸೂರ್ಯನ ಬಿಡುಗಡೆಯೇ ನಿಜಸಂಕ್ರಾಂತಿ || ಪ || ಜನತಂತ್ರವ ಉಸಿರಾಡುವ ಮನೆಗಳ ದೀಪವನಾರಿಸುವ ಪ್ರಯತ್ನ ನಡೆಸಿದೆ ದುಶ್ಯಾಸನ ಮನೆಯೊಲೆಗಳ ಬೆಂಕಿಯ ಅಳಿಸುವ ಶತಯತ್ನ || 1 || ಸ್ವಾತಂತ್ರ್ಯದ ಬೆಂಕಿಯು ಮೃತ್ಯುಂಜಯ ಎಂದೆಂದಿಗು ತಾ ಅವಿನಾಶಿ ಮನೆಯೊಳು ಆರಿದವೊಲು ತೋರಿದರೂ ಮನದೊಳು ಉರಿದಿದೆ ಧಗಧಗಿಸಿ || 2 || ನಂದದ ಚ್ಯುತಿ ಹೊಂದದ ವಡಬಾನಲ ಹಿಂಸೆಯ ಕಡೆಗೋಲಿಗೆ ಸಿಲುಕಿ ಎದೆ ಕೆಚ್ಚಾಗುತ ಕಾಳ್ಗಿಚ್ಚಾಗುತ ಕಿಡಿಗೆದರಿದೆ ದಾಸ್ಯವ […]
ಜನಸ್ವಾತಂತ್ರ್ಯದ ಸೂರ್ಯೋದಯದಲಿ ಸುಸ್ವಾಗತ ಜನಮನ ದೊರೆಗೆ ಸುವಿಚಾರದ ಮಧುವೆರೆಯುತ ಬಂದಿಹ ಶ್ರೀ ಮಧುಕರ ದೇವರಸರಿಗೆ || ಪ || ಸೆರೆಮನೆಯಿಂದಲೆ ಸೂತ್ರವ ಆಡಿಸಿ ಎರೆದಿರಿ ಸ್ಫೂರ್ತಿಯ ಯುವಜನಕೆ ದಾಸ್ಯದ ದುಃಖವ ತೊಲಗಿಸಿದಾತನೆ ಸ್ವಾಗತವಿದೊ ಕರ್ನಾಟಕಕೆ || 1 || ತೆಂಕಣ ಅಡವಿಯ ಘೀಳಿಡುವಾನೆಯ ಸೊಂಡಿಲ ಕಹಳೆಯ ಮೊಳಗಿನಲಿ ಸಂತರ ಶರಣರ ದಾಸವರೇಣ್ಯರ ಬೋಧನೆ ಕೀರ್ತನೆ ವಚನದಲಿ || 2 || ತುಂಗಾಭದ್ರೆಯ ಕೃಷ್ಣಾ ಕಪಿಲೆಯ ಕಾವೇರಿಯ ಕಲರವದೊಳಗೆ ಕನ್ನಡ ಜನದಾತ್ಮೀಯತೆ ಸೂಸುವ ಶ್ರೀಗಂಧದ ಸೌರಭದೊಳಗೆ || 3 […]
ಗೌರೀಶಂಕರದೆತ್ತರಕೇರಲಿ ಜೀವನದಾಕಾಂಕ್ಷೆಯ ಪರ್ವತವು ಗಗನದ ವರವಿಸ್ತಾರವ ತಳೆಯಲಿ ಹೃದಯದ ಮಹದಾಸೆಯ ಸಾಗರವು || ಪ || ಧರ್ಮದ ಭೂಮಿಯ ದಿವ್ಯಾಕಾಶದ ನಾಡಿನ ಒಡೆತನ ವಹಿಸುವರಾರು ? ಇಲ್ಲೆಮಗಾಗಿಯೆ ಕಾಯುತ ಕರೆಯುತ ಭಾಗ್ಯವೆ ಕುಳಿತಿದೆ ಬರುವವರಾರು ? || 1 || ಸಿಂಧೂಸಾಗರ ಹಿಂದೂ ಸಾಗರ ಗಂಗಾಸಾಗರಗಳ ಪರಿವಾರ ಸುಂದರ ವನಗಳು ಪ್ರೀತಿಯ ಜನಗಳು ತೆರೆತೆರೆ ಗಿರಿಶಿಖರದ ಸಂಸಾರ ! || 2 || ನಮ್ಮಯ ನಾಡನು ಬಣ್ಣಿಪ ಹಾಡನು ಹೇಳಲು ಕೇಳಲು ಕನಿಕರಿಸುವೆಯಾ ? ಜನಗಳ ಪಾದದ […]
ಗೊತ್ತಿಲ್ಲ ಗುರಿಯಿಲ್ಲ ಎತ್ತೆಂದರತ್ತತ್ತ ಅವರಿವರ ಕಾಲ್ಚೆಂಡಿನಂತಾಗಿ ಒದ್ದೆಡೆಗೆ ಓಟ ಎದ್ದವರ ಕೆಳಗೆಳೆದು ನಾವೆ ನಮ್ಮನು ತುಳಿದು ಸೂರ್ಯ ಸಾಯುವ ಕಡೆಗೆ ದಾರಿಯರಸುವ ವಿಕಟ ನೋಟ || ಪ || ನೋಡಿದೆವು ಓಡಿದೆವು ಹೀಗೆ ಪರದಾಡಿದೆವು ನಾಲ್ಕಾರು ಶತಮಾನ ಮಾರುಕಟ್ಟೆಗೆ ಬಂತು ಮಾನ ಆಗೊಂದು ವಿಜಯದಶಮಿಯ ದಿನದಿ, ಹುದುಗಿದ್ದ ಹೃದಯದಾಸೆಯ ಹೊರಗೆಳೆದೆ ಹೊರಡಿಸಿದೆ ಬಯಲಗಾನ || 1 || ಸೈತಾನನನುಚರರ ಸ್ವೈರ ತುಳಿತಕೆ ಸಿಕ್ಕಿ ನೂರ್ಕಾಲ ನಂಜೇರಿ ನವೆದು ನಲುಗಿದ ನಾಡಿನೆದುರು ಹಾಲುಬಟ್ಟಲನಿಟ್ಟೆ ಹೆಸರ ಹಿಗ್ಗನು ಕೊಟ್ಟೆ ನೂರೆಂಟು […]
ಕೇಳಿರಿದೋ! ಹರಿಯಿತು ಪರದಾಸ್ಯದ ಬಂಧನವು ದುಮದುಮಿಸುತಲಿಹುದೋ ರಾಯಗಡ ಸ್ಪಂದನವು || ಪ || ದುರ್ಗಕೆ ಶೋಭೆಯಾಗಿದೆ ಹಬ್ಬದ ವಾತಾವರಣ ನಾಲ್ದೆಸೆಗೂ ರಂಗೋಲೆ ಶುಭ ತೋರಣದಾಭರಣ ಎಲ್ಲೆಡೆಗೂ ಹರಡಿತು ಆನಂದವೆ ಆನಂದ || 1 || ಅಂಬರದೊಳು ಭಗವಾ ಹಾರಾಡಿದೆ ಡೌಲಿನಲಿ ಧ್ವಜರಕ್ಷಣೆಗಾಗಿ ಸೈನ್ಯವಿದೆ ಠೀವಿಯಲಿ ತೋಪಿನ ಗರ್ಜನೆಯು ಪ್ರತಿದನಿಸಿದೆ ಕ್ಷಿತಿಜದಲಿ || 2 || ಕಿಲ್ಲೆಯ ದರವಾಜ ಹೊರಳಿದೆ ದಿಲ್ಲಿಯ ಕಡೆಗೆ ಶಿವರಾಯನ ಮನದ ಬಯಕೆಯ ಗ್ರಹಿಸಿದ ಹಾಗೆ ಉಳಿದಿಲ್ಲವು ದೂರ ಈಗ ಸಿಂಧ ಕಾಶ್ಮೀರ || […]
ಕೇಳಿರಿದೋ ಬಗೆ ತೆರೆದೇಳಿರಿದೋ ಅರಳಲು ಪೂರ್ಣಾಕಾರ ಬಾಳಿನ ಸಂಕ್ರಾಂತಿಗೆ ಹೊಂಗಿರಣವು ಹರಿದಿದೆ ಧಾರಾಕಾರ || ಪ || ಮನೆ ಮನೆ ಮನಮನದೊಳು ತಾನೇ ಕೆನೆ ಒಮ್ಮತ, ಸಂಸ್ಕೃತಿ, ಸ್ನೇಹ ತಾಯ್ನೆಲದುದರದ ಬಂಗಾರದ ತೆನೆ ಎನಿಸಲು ತರುಣಸಮೂಹ ಹರಡಲು ಕಡಲಾಳಕೆ ಬುವಿಯಗಲಕೆ ಬಾನೆತ್ತರ ಸುವಿಚಾರ || 1 || ಹೊರೆಹೊರೆ ಹೇರಿದ ಹಲಹಲ ಶತಕದ ದಾಸ್ಯದ ಮೂಢಾಚಾರ ಕದಲಿಸಿ ಕೊಚ್ಚುವ ಕಿಡಿಮಳೆ ಚಿಮ್ಮಿದೆ ಅಂತಸ್ಸತ್ವವಿಹಾರ ವೇದೋಪನಿಷತ್ತಿನ ನುಡಿಗೊತ್ತಿನ ದಿವ್ಯಾತ್ಮರ ಹೂಂಕಾರ || 2 || ಮಲಗಿದ ಮನುಜತೆ ಪುನರೆಚ್ಚರಿಸುವ […]
ಒಂದಾಗಲಿ ಗುರಿಯೆಡೆ ಮುಂದಾಗಲಿ ನಾರಿಸಮೂಹದ ಮನಸುಗಳು ನಡೆನುಡಿಯಲಿ ಮೂಡಲಿ ನನಸಾಗಲಿ ಹಿಂದುತ್ವದ ಹೊಂಗನಸುಗಳು || ಪ || ಬಾಳಿಗೆ ಆಸರೆ ಭವ್ಯ ಪರಂಪರೆ ಆದರ್ಶದ ಹಿರಿಸಾಧನೆಗೆ ನಡೆಸುವ ಸಿದ್ಧತೆ ಪಡೆದು ಪ್ರಬುದ್ಧತೆ ಭರತಭೂಮಿಯಾರಾಧನೆಗೆ || 1 || ಗಳಿಸಲು ಏಳಿಗೆ ಅಭಿನವ ಪೀಳಿಗೆ ಶೀಲವೆರೆಯೆ ಹೃದಯದಾಳಕೆ ಬೇಕು ಸಮಸ್ಯೆಯ ಸ್ಥಿರ ಪರಿಹಾರಕೆ ಮಾತೃತ್ವದ ಮಂಗಳ ಹರಕೆ || 2 || ಮನಮನಗಳನೂ ತಿದ್ದಿ ರೂಪಿಸುವ ಮನೆಮನೆ ಬೆಳಗುವ ಕಾರ್ಯವಿದು ಸ್ತ್ರೀಶಕ್ತಿಯ ಅಭಿವ್ಯಕ್ತಿಯಗೊಳಿಸಿ ಘನತೆಗೊಯ್ವ ಕೈಂಕರ್ಯವಿದು || 3 […]
“ಏನೀ ಪೌರುಷ ಅಭಿಮಾನದ ಬಲಿದಾನ ? || ಪ || ದೇಶದ ದೇಹದ ಮುಡಿಗೆದರುವ ಅಪಮಾನ ? ತಾಯ್ನಾಡಿನ ತಲೆಗೂದಲೊಳೇನೀ ಹೇನಿನ ಸೇನೆ ? ದಿನ ಬೆಳಗಾದರೆ ಉಪಟಳದುರಿ ಭೀಕರ ತಲೆಬೇನೆ ! ಗಾಂಡೀವ, ಸುದರ್ಶನ, ಗಂಡೆದೆ ಭೀಮನ ಬೆಂಬಲದಿ ಧರ್ಮಜನಾಳ್ವಿಕೆ ವಿಜೃಂಭಿಸಿದೀ ಭಾರತದಿ ದಿಲ್ಲಿಯ ಪೀಠದಿ ದ್ರೌಪದಿಯನುಜ ನಪುಂಸಕನು ಜನತಾ ಕೋಟಿಯ ರಾಜ್ಯಾಡಳಿತವ ವಹಿಸಿದನೇನು?” ಹಿಮನಗದೊಳು ಯುಗಯುಗಗಳು ಮಲಗಿದ ಶಿಲೆಯೊಂದು ಬಾಯ್ದೆರೆದಾಕಳಿಸುತ ಮೇಲೇಳುತ ಕೇಳುತಿದೆ ! || 1 || “ಕಲ್ಗುಂಡಿಗು ನಿದ್ರಾಭಂಗವೆ ? ನಿಜ, […]
ಉತ್ತರದೊಳು ಹರಿದಿಹ ಅನುಜರ ನೆತ್ತರಿಗೆ ಸೇಡಿನ ಕಿಡಿ ಆಹುತಿಯನು ಬಯಸುತಿದೆ || ಪ || ಗರ್ಜಿಸುತಿದೆ ಶತಶತಮಾನದ ನಮ್ಮಿತಿಹಾಸ ಏನಿಂತಾಯಿತೆ ಮೈಮರೆಯಿತೆ ಭಾರತದೇಶ ? ಸದ್ದುಡುಗಿತೆ ಸತ್ತಡಗಿತೆ ಪೌರುಷದಾದೇಶ ? ಅಳಿಯಿತೆ ಮಾನವ ಮಾರದ ಮಾನವರಾವೇಶ ? || 1 || ಸ್ವಾರ್ಥವು ಕುಳಿತಿತೆ ಶ್ರೀ ಹರ್ಷನ ಸಿಂಹಾಸನದಿ ? ಷಂಡತ್ವದ ನೆಲೆಯಾಯಿತೆ ನವದಿಲ್ಲಿಯ ಗಾದಿ ? ಧೃತಿಮತಿ ಇಲ್ಲದವರಿಗಾಗಲಿ ಬೀಳ್ಕೊಡುಗೆ ಮೇಲೇರಲಿ ಸತ್ಪುತ್ರರು ನಾಡಿನ ಮುನ್ನಡೆಗೆ ನವಯುವಕರೆ ಸ್ವೀಕರಿಸಿರಿ ಬನ್ನಿರಿ ಆಹ್ವಾನ ಸಂರಕ್ಷಿಸಿ ನಿಮ್ಮನು ಬೆಳೆಸಿದ […]