ಒಂದಾಗಲಿ ಗುರಿಯೆಡೆ ಮುಂದಾಗಲಿ
ನಾರಿಸಮೂಹದ ಮನಸುಗಳು
ನಡೆನುಡಿಯಲಿ ಮೂಡಲಿ ನನಸಾಗಲಿ
ಹಿಂದುತ್ವದ ಹೊಂಗನಸುಗಳು || ಪ ||
ಬಾಳಿಗೆ ಆಸರೆ ಭವ್ಯ ಪರಂಪರೆ
ಆದರ್ಶದ ಹಿರಿಸಾಧನೆಗೆ
ನಡೆಸುವ ಸಿದ್ಧತೆ ಪಡೆದು ಪ್ರಬುದ್ಧತೆ
ಭರತಭೂಮಿಯಾರಾಧನೆಗೆ || 1 ||
ಗಳಿಸಲು ಏಳಿಗೆ ಅಭಿನವ ಪೀಳಿಗೆ
ಶೀಲವೆರೆಯೆ ಹೃದಯದಾಳಕೆ
ಬೇಕು ಸಮಸ್ಯೆಯ ಸ್ಥಿರ ಪರಿಹಾರಕೆ
ಮಾತೃತ್ವದ ಮಂಗಳ ಹರಕೆ || 2 ||
ಮನಮನಗಳನೂ ತಿದ್ದಿ ರೂಪಿಸುವ
ಮನೆಮನೆ ಬೆಳಗುವ ಕಾರ್ಯವಿದು
ಸ್ತ್ರೀಶಕ್ತಿಯ ಅಭಿವ್ಯಕ್ತಿಯಗೊಳಿಸಿ
ಘನತೆಗೊಯ್ವ ಕೈಂಕರ್ಯವಿದು || 3 ||
ಲಕ್ಷ್ಮೀ ಸರಸ್ವತಿ ದುರ್ಗಾರೂಪದಿ
ಮಹಿಳೆಯೊಳುದಿಸಲು ಭಾರತಿಯು
ಬೆಳೆವುದು ಜಾಗೃತಿ ಕಳೆವುದು ವಿಸ್ಮೃತಿ
ಬೆಳಕೆರೆವುದು ಜಯದಾರತಿಯು || 4 ||