ಕೇಳಿರಿದೋ ಬಗೆ ತೆರೆದೇಳಿರಿದೋ

ಕೇಳಿರಿದೋ ಬಗೆ ತೆರೆದೇಳಿರಿದೋ
ಅರಳಲು ಪೂರ್ಣಾಕಾರ
ಬಾಳಿನ ಸಂಕ್ರಾಂತಿಗೆ ಹೊಂಗಿರಣವು
ಹರಿದಿದೆ ಧಾರಾಕಾರ || ಪ ||

ಮನೆ ಮನೆ ಮನಮನದೊಳು ತಾನೇ ಕೆನೆ
ಒಮ್ಮತ, ಸಂಸ್ಕೃತಿ, ಸ್ನೇಹ
ತಾಯ್ನೆಲದುದರದ ಬಂಗಾರದ ತೆನೆ
ಎನಿಸಲು ತರುಣಸಮೂಹ
ಹರಡಲು ಕಡಲಾಳಕೆ ಬುವಿಯಗಲಕೆ
ಬಾನೆತ್ತರ ಸುವಿಚಾರ || 1 ||

ಹೊರೆಹೊರೆ ಹೇರಿದ ಹಲಹಲ ಶತಕದ
ದಾಸ್ಯದ ಮೂಢಾಚಾರ
ಕದಲಿಸಿ ಕೊಚ್ಚುವ ಕಿಡಿಮಳೆ ಚಿಮ್ಮಿದೆ
ಅಂತಸ್ಸತ್ವವಿಹಾರ
ವೇದೋಪನಿಷತ್ತಿನ ನುಡಿಗೊತ್ತಿನ
ದಿವ್ಯಾತ್ಮರ ಹೂಂಕಾರ || 2 ||

ಮಲಗಿದ ಮನುಜತೆ ಪುನರೆಚ್ಚರಿಸುವ
ಅಭಿನವ ಕ್ರಾಂತಿಪ್ರವಾಹ
ಹಿಂದುತ್ವದ ಗುರಿ ಪುನರುಚ್ಚರಿಸುವ
ಯುವಚೇತನಕಿದು ಮೀಹ
ಮರೆತ ಮಹಾನತೆ ಪರಿಚಯವರುಹುವ
ಸ್ವರ ಧೀರಮಹೋದಾರ || 3 ||

Leave a Reply

Your email address will not be published. Required fields are marked *

*

code