ನಡೆ ಪಥಿಕನೆ ಅಡಿ ಮುಂದಿರಿಸಿ

ನಡೆ ಪಥಿಕನೆ ಅಡಿ ಮುಂದಿರಿಸಿ
ಗುರಿಯೆಡೆಗೇ ಗಮನವನಿರಿಸಿ
ಸಂಕಟಗಳ ಹಾದಿಯ ಗುಡಿಸಿ
ಸಂಗಡಿಗರ ಪಡೆ ಸಂಘಟಿಸಿ || ಪ ||

ನೆಲೆಗೊಳ್ಳಲಿ ಭರವಸೆ ಬಲಿತು
ಭೀತಿ ನಿರಾಶೆಯ ಬಿಡು ಮರೆತು
ನಿಶಿದಿನ ಚಿಂತಿಸು ಹಂಬಲಿಸು
ಕರ್ತವ್ಯವನೊಂದನೆ ಕುರಿತು
ತ್ವರೆಗೊಳ್ಳುತ ಧಾವಿಸು ಮುಂದೆ
ಸ್ವಾರ್ಥತೆ ಕ್ಷುದ್ರತೆ ಬದಿಗಿರಿಸಿ || 1 ||

ನವಚೇತನ ತುಂಬಲಿ ಭರದಿ
ಹಿಂದುಸ್ಥಾನದ ಜೀವನದಿ
ಒಗ್ಗೂಡುತ ನುಗ್ಗುವ ನಮ್ಮೀ
ಹಿಂದುತ್ವದ ಜೀವನದ ನದಿ
ನಿಶ್ಚಿತವಿದು ಪಥ ಓ ಪಾಂಥ
ನಡೆ ನಡೆ ಬಾಳನು ಮುಡುಪಿರಿಸಿ || 2 ||

ಸಂಘರ್ಷದ ಕಮರಿಯ ಬಾಯಿ
ತೆರೆದರೆ ಮೊರೆಯಲಿ ಜಲಪಾತ
ಜನಮನಗಂಗೆಯ ಮಡಿಲಿಂದ
ಸಂಘಟನೆಯ ಯಂತ್ರವು ಕಡೆದ
ವಿದ್ಯುತ್ತಿನ ಕುದುರೆಯು ಹೊಮ್ಮಿ
ಬೆಳಗಲಿ ನವಶಕ್ತಿಯ ಸೃಜಿಸಿ || 3 ||

ಮುಂಜಾವಿನ ಗುಂಜಾರವದಿ
ಹೊಂಗಿರಣದ ಸಾಸಿರ ಕರದಿ
ಕತ್ತಲ ಮುತ್ತಿಗೆ ಕರಕರಗಿ
ಹಗಲಿಗೆ ದಾರಿಯ ತೆರೆವಂತೆ
ಸ್ಫೂರ್ತಿಯ ಸೂರ್ಯನ ಕಿಡಿಯಾಗಿ
ಬಾ ಬೆಳಕಿನ ಚಾವಟಿ ಬೀಸಿ || 4 ||

Leave a Reply

Your email address will not be published. Required fields are marked *

*

code