ನಿಲ್ಲದೆಯೆ ಗೆಲ್ಲುವುದೆ ನಮ್ಮ ಗುರಿಯು
ನಿಲ್ಲದೆಯೆ ಓಡಲಿದೆ ನಿಲುಗಡೆಯ ಗಡಿಯು || ಪ ||
ವಿಜಯಗಳ ಬರಸೆಳೆದು ಸೋಲ ತುಳಿದು
ಭುಜಕೀರ್ತಿ ಪ್ರಭೆ ಬೆಳಗಿ ಹಗೆಯ ಹಳಿದು
ಸೊಕ್ಕು ಸುಲಿಗೆಯ ಗರ್ವ ಮದೋನ್ಮತೆಯ
ಶವದಹನಕಿದೋ ತರುತಿಹೆವು ಉರಿಯ || 1 ||
ಕುರುಕ್ಷೇತ್ರ ಪಾನಿಪತ ಕಳೆದುದೊಮ್ಮೆ
ಕಳೆಯದಿದೆ ಮಗುದೊಮ್ಮೆ ಬರುವ ಬಲುಮೆ
ಅದೋ, ಪುನರುದಿಸುವಿತಿಹಾಸದೊಲುಮೆ
ನಮ್ಮದಿದೆ ಸ್ವಾಗತಿಸುವತುಲ ಹೆಮ್ಮೆ || 2 ||
ಜಯಪಥದಿ ಜತೆಗಿಹುದು ಗೈದ ಶಪಥ
ಧರ್ಮರಥಕಿಹುದು ಕರ್ಮಾಶ್ವ ನಿರುತ
ಇಹೆವು ರಥಿಕರು ಧನುವ ಠೇಂಕರಿಸುತ
ಸಾರಥಿಯು ತಾನಿಹನು ಪಾರ್ಥಪ್ರೀತ ! || 3 ||