ನಡೆಸು ಮುನ್ನಡೆಸು ಹೇ ಭಗವತಿ

ನಡೆಸು ಮುನ್ನಡೆಸು ಹೇ ಭಗವತಿ
ಬೆಳಗು ನಮ್ಮೊಳು ಧ್ಯೇಯಜ್ಯೋತಿ || ಪ ||

ಪ್ರೇರಣೆಯ ಸಸಿ ಮೊಳೆಸಿ ಬೆಳೆಸಲು
ಹರಿಸುತಿರು ವಾತ್ಸಲ್ಯಧಾರೆ
ಕಷ್ಟನಷ್ಟದ ರಾಶಿ ಎದುರಿಸೆ
ನಿನ್ನ ನೆನಪೇ ಖಡ್ಗಧಾರೆ
ಸತತವೂ ಪಥದಲೇ ನಡೆಸುತ
ಗೊಳಿಸು ಸಾರ್ಥಕ ಜೀವನಗತಿ || 1 ||

ವ್ಯಾಘ್ರವಾಹನೆ ಸುಸ್ಮಿತಾನನೆ
ಮೆಟ್ಟಿ ಬಾ ನಮ್ಮೆದೆಯ ಸ್ವಾರ್ಥ
ಮುಟ್ಟು ಬಾ ಮನದಾಳದಾಳವ
ತಟ್ಟಿ ತೆರೆ ಚೈತನ್ಯಸ್ರೋತ
ಸುಪ್ತ ಶಕ್ತಿಯ ಎತ್ತಿ ಅರಳಿಸು
ವಿಸ್ತರಿಸುವೊಲು ಕಾರ್ಯವ್ಯಾಪ್ತಿ || 2 ||

ಹಿಂದುಭಗಿನಿಯರಿಂದು ಹಾಡುವ
ಐಕ್ಯಗಾನದ ದಿವ್ಯಶ್ರುತಿಯ
ತರಲು ರಾಷ್ಟ್ರಕೆ ವಿಭವ ಗೌರವ
ಸ್ವಾಭಿಮಾನದ ಶುಭೋದಯ
ಹೊಮ್ಮಲೆಮ್ಮದು ನೀತಿ ಸ್ಥೈರ್ಯವು
ಮಾತೃಭೂಮಿಯ ಕೀರ್ತಿ ಮಹತಿ || 3 ||

Leave a Reply

Your email address will not be published. Required fields are marked *

*

code