ವಿಜಯದಶಮಿಗಳೆನಿತೊ ಕಳೆದರು

ವಿಜಯದಶಮಿಗಳೆನಿತೊ ಕಳೆದರು
ತೀರದಿದೆ ದಿಗ್ವಿಜಯದಾಹ
ಹೃದಯ ಹೃದಯದಿ ವಿಜಯಗಳಿಸುವ
ದೇಶಪ್ರೇಮದ ದಿವ್ಯ ಮೋಹ || ಪ ||

ಹಿಂದುಭೂಮಿಯ ಬಸಿರಿನಾಳದ
ಎನಿತೊ ದಿನಗಳ ಕನಸಿನಾಸೆ
ಭಗವೆಯಾರಾಧಕರ ರೂಪವ
ಧರಿಸಿ ಬಂದಿದೆ ವಿಜಯ ಗಳಿಸೆ || 1 ||

ಅಂದು ಜನಿಸಿದ ನಿತ್ಯಯಜ್ಞದ
ಊಧ್ರ್ವಜ್ವಾಲೆಗೆ ಆಜ್ಯವೆರೆದು
ಸಂದುಹೋದನು ಜನ್ಮದಾತನು
ಸಂಘಜ್ಯೋತಿಯ ಅಮರ ಗೈದು || 2 ||

ಘೋರ ಹಾಲಾಹಲವ ಕುಡಿದರು
ಬಾಳುತಿರುವುದು ಬೆಳೆಯುತಿಹುದು
ಭಂಗವಿಲ್ಲವು ಸಂಘಶಕ್ತಿಗೆ
ವಿಜಯರಥವನು ಸೆಳೆಯುತಿಹುದು || 3 ||

Leave a Reply

Your email address will not be published. Required fields are marked *

*

code