ಭರತದೇಶದ ಯುವಜನಾಂಗದ

ಭರತದೇಶದ ಯುವಜನಾಂಗದ
ಹೃದಯದಾರಾಧನಾದೈವ
ಪ್ರೀತಿ ಮಮತೆಯು ಘನಿಸಿದಂತಹ
ನೇಹ ತುಂಬಿದ ಮೊಗದ ಭಾವ || ಪ ||

ಮಾತೃಸೇವೆಯೊಳುರಿಯುತಿರುವುದು
ನಿನ್ನ ನೆತ್ತರ ಕಣವು ಕಣವು
ನಿನ್ನ ಕರೆಗೋಗೊಡುತಲಿರುವುದು
ನಿತ್ಯಜಾಗೃತ ಜನರ ಮನವು || 1 ||

ನಿನ್ನ ಶ್ವಾಸೋಚ್ಛ್ವಾಸದೊಳಗೂ
ತುಂಬಿ ತುಳುಕಿದೆ ರಾಷ್ಟ್ರಭಕ್ತಿ
ನಿನ್ನ ನಾಡಿಯ ಮಿಡಿತದೊಂದಿಗೆ
ಒಂದುಗೂಡಿದೆ ಯುವಕಶಕ್ತಿ || 2 ||

ದಿವಿಜವೃಂದವು ಮನುಜರೊಳಿತಕೆ
ಇಳೆಗೆ ಕಳುಹಿದ ದೇವದೂತ
ನಿನಗಿದೋ ನಾವ್ ಬಯಸುತಿರುವೆವು
ನಿತ್ಯ ನಿತ್ಯವು ಸುಸ್ವಾಗತ || 3 ||

ಸ್ವಾರ್ಥ ವೈರದ ಅಸುರ ವೃತ್ತಿಯ
ಸುಡುಸುಡುವ ಹೇ ಜ್ಞಾನಸೂರ್ಯ
ನಿನ್ನ ತೇಜಕೆ ತಲೆಯನೊಲೆದನು
‘ಸಂಘಸಂಸ್ಥಾಪನಾಚಾರ್ಯ’!
ಪೂಜ್ಯ ಭಾರತ ಪಡೆದ ವರಸುತ
ನಮೋ ನವ ಮಾಧವಾಚಾರ್ಯ || 4 ||

Leave a Reply

Your email address will not be published. Required fields are marked *

*

code