ಭಾರತದ ಪ್ರಾಚೀನ ಪ್ರತಿಭೆ

ಭಾರತದ ಪ್ರಾಚೀನ ಪ್ರತಿಭೆಯೆಮ್ಮೊಡನೆ
ಮಾತನಾಡಿದ ಜಿಹ್ವೆ ಈತನದು || ಪ ||

ಸದಮಲ ಸಂಸ್ಕೃತಿಯದೆಮ್ಮೊಡನೆ ನಡೆದೈದ
ದಿವ್ಯ ಅಡಿದಾವರೆಗಳೀತನದು || 1 ||

ಹೌತಾತ್ಮ್ಯದೌನ್ನತ್ಯವೆಮಗಿತ್ತ ಪ್ರೇರಣೆಯ
ಆದರ್ಶ ಬಾಳುವೆಯು ಈತನದು || 2 ||

ಭವ್ಯ ಭವಿತವ್ಯವದು ಅಸುವಾಂತು ನೆಗೆದೆದ್ದ
ಮಹಾನ್ಮರಣವೂ ಈತನದೆ ! || 3 ||

ಎಮ್ಮೊಳಗೆ ಶತಲಕ್ಷ ಪದಧಾರಿಯಿಂದಿಗು
ವರ ವಿಶ್ವಸಂಚಾರಿಯೀತ || 4 ||

ಲಕ್ಷೋಪಲಕ್ಷ ಭುಜಧಾರಿ ಕೆಚ್ಚೆದೆಯ ಕಲಿ
ಶತವಿಘ್ನಸಂಹಾರಿಯೀತ || 5 ||

ಎಮ್ಮದೀ ದಿನದಿನದ ಸಮ್ಮೇಳನದ ಸುಮದಿ
ಮಾತೃಪೂಜನ ನಿರತನೀತ || 6 ||

ಗಂಡೆದೆಯ ಯುವಜನದ ತಂಡೋಪತಂಡಗಳ
ಕಣ್ಣೆದುರ ನಿತ್ಯಪ್ರಭೆ, ಈತ || 7 ||

(ಮಾನನೀಯ ಶ್ರೀ ದತ್ತೋಪಂತ ಠೇಂಗಡೆಜೀಯವರು ಡಾ|| ಹೆಡಗೇವಾರರನ್ನು ಕುರಿತು ಇಂಗ್ಲೀಷಿನಲ್ಲಿ ರಚಿಸಿದ ಕವನದ ಕನ್ನಡ ರೂಪವನ್ನು ಶಿವರಾಮರವರು ಬರೆದಿದ್ದಾರೆ.)

Leave a Reply

Your email address will not be published. Required fields are marked *

*

code