ಮೊದಲನೆಯ ನಮಸ್ಕಾರ

ಮೊದಲನೆಯ ನಮಸ್ಕಾರ….
ಉದಯೋನ್ಮುಖ ಭಾಸ್ಕರಗೆ
ತೇಜೋರಾಶಿಯ ದೊರೆಗೆ || 1 ||

ಎರಡನೆಯ ನಮಸ್ಕಾರ….
ಗೈವೆವು ಯಜ್ಞೇಶ್ವರಗೆ
ಪ್ರಭುಸೇವಕ ಪಾವಕಗೆ || 2 ||

ಮೂರನೆಯ ನಮಸ್ಕಾರ….
ಜಲದೇವತೆ ವರುಣನಿಗೆ
ಜೀವನರಸದಾತನಿಗೆ || 3 ||

ನಾಲ್ಕನೆಯ ನಮಸ್ಕಾರ….
ಸನ್ಮಾತೆ ವಸುಂಧರೆಗೆ
ಆಶ್ರಯದಾತೆಗೆ ಧರೆಗೆ || 4 ||

ಐದನೆಯ ನಮಸ್ಕಾರ….
ಗೈವೆವು ಶ್ರೀ ಭಾರತಿಗೆ
ಸನ್ಮಾನದ ಮೂರುತಿಗೆ || 5 ||

ಆರನೆಯ ನಮಸ್ಕಾರ….
ಜನನೀಜನಕರ ಅಡಿಗೆ
ವಾತ್ಸಲ್ಯದ ವಾರಿಧಿಗೆ || 6 ||

ಏಳನೆಯ ನಮಸ್ಕಾರ….
ವಿದ್ಯೆಯ ನೀಡಿದವರಿಗೆ
ಬುದ್ಧಿಯ ಬೆಳೆಸಿದವರಿಗೆ || 7 ||

ಎಂಟನೆಯ ನಮಸ್ಕಾರ….
ಭಾರತೀಯ ಸಂಸ್ಕೃತಿಗೆ
ಕಲೆ ಸಾಹಿತ್ಯದ ಖನಿಗೆ || 8 ||

ಮುಂದಿನದು ನಮಸ್ಕಾರ….
ನಮ್ಮದೆ ಜೀವನದೊಳಗೆ
ಅರಳುತಲಿಹ ಚೇತನಕೆ || 9 ||

ಹತ್ತನೆಯ ನಮಸ್ಕಾರ….
ಸುತ್ತಲು ಹತ್ತೂದೆಸೆಗೆ
ಸನ್ಮಾರ್ಗದಿ ಮುನ್ನಡೆಗೆ || 10 ||

Leave a Reply

Your email address will not be published. Required fields are marked *

*

code