ಹಗಲಿರುಳಿನಾಗಸದ

ಹಗಲಿರುಳಿನಾಗಸದ ಹಿಮಗಿರಿಯ ಕಂದರದ
ವಿಸ್ತಾರ ಸಾಗರದ ಸಾಮ್ರಾಜ್ಞಿ ತಾಯೆ || ಪ ||

ಭವ್ಯ ಚೇತನದಿರವು ದಿವ್ಯ ದರ್ಶನದರಿವು
ದೊರೆವಂತೆ ಹರಸೆಮ್ಮ ಓ ಮಾತೃಹೃದಯೆ ! || 1 ||

ಹೃದಯಶ್ರುತಿ ತೀವ್ರತೆಗೆ ಆವುದೋ ನಾದಸುಧೆ
ಬಂದೆಮ್ಮ ಕಿವಿಗಳಿಗೆ ಕೇಳಿಸಿದ ಹಾಗೆ || 2 ||

ಇಂದ್ರಧನುವನೆ ತಂದು ತಿಂದು ನೋಡಿದ ಹಾಗೆ
ಅವ್ಯಕ್ತ ಆನಂದ ನಿನ್ನಡಿಯಲೆಮಗೆ ! || 3 ||

Leave a Reply

Your email address will not be published. Required fields are marked *